ಮೈಸೂರು ಜಿಲ್ಲೆಯ ನಂಜನಗೂಡಿನ ದಳವಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಪೂಜೆ ಸಲ್ಲಿಸುವುದರ ಮೂಲಕ ಶ್ರದ್ದಾ ಭಕ್ತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮುಖ್ಯ ಶಿಕ್ಷಕರಾದ ನಾಗೇಶ್ ನಾಯಕ್ ಅವರು ಮಾತನಾಡಿ ಮಹಾತ್ಮ ಗಾಂಧೀಜಿ ಮತ್ತು ಶಾಸ್ತ್ರಿಜಿಯವರ ಜಯಂತಿಯನ್ನು ಇಡೀ ರಾಷ್ಟ್ರವೇ ಆಚರಿಸುತ್ತಿದೆ. ಅವರಿಗೆ ಗೌರವ ನಮನವನ್ನು ಇಂದು ಸಲ್ಲಿಸುತ್ತಿದ್ದೇವೆ. ಗಾಂಧೀಜಿ ಅವರು ಸರಳತೆ ಸೇವೆ ಮತ್ತು ಸಹಾನುಭೂತಿಯ ಶಕ್ತಿ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಶಾಸ್ತ್ರೀಜಿ ಅವರು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಕಾರ್ಯಕ್ಕೆ ಸದಾ ಪ್ರೇರಣೆಯಾಗಿದ್ದಾರೆ. ಸತ್ಯ ಅಹಿಂಸೆ ಸರಳತೆ ಸೇವೆ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು. ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರು, ಮಕ್ಕಳು ಹಾಜರಿದ್ದರು.
- ಕರುನಾಡ ಕಂದ ಸುದ್ದಿ




















