ಕಮಲಾಪುರ : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ವತಿಯಿಂದ ಕಮಲಾಪುರ ತಾಲೂಕು ಸಮಿತಿ ರಚನೆ ಸಂಬಂಧ ಇಂದು ಸಭೆ ನಡೆಸಲಾಯಿತು.
ಸಭೆಯಲ್ಲಿ ವಿಜಯಕುಮಾರ್ ಟೈಗರ್ ಅವರನ್ನು ಕಮಲಾಪುರ ತಾಲೂಕು ಸಂಚಾಲಕರಾಗಿ ಹಾಗೂ ಹರೀಶ್ ಪಟ್ಟನಾಯಕ ಅವರನ್ನು ತಾಲೂಕು ನಗರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇತರ ಪದಾಧಿಕಾರಿಗಳಾಗಿ ರಮೇಶ್ ಕಾಂಬ್ಳೆ, ಕಮಲಾಕರ ನೂಲಾಕಾರ್, ಸುನಿಲ್ ಮಾಳಗೆ ಸಂಘಟನಾ ಸಂಚಾಲಕರಾಗಿ, ಶ್ರೀಪತಿ ಸಕ್ಪಾಲ್ ಖಜಾಂಚಿಯಾಗಿ ಹಾಗೂ ಮಹೇಶ ಹುಗ್ಗಿ, ರಾಜು ಹಾಲು, ಉಮೇಶ ಪಂಗಾರಗಿ, ಕಾಶಿನಾಥ ವಾಲಿಕರ್, ಪಂಡಿತ್ ಸಿಂಗೆ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಸುರೇಶ ಹಾದಿಮನಿ, ಉಮೇಶ ನರೋಣ, ನಿಂಗಪ್ಪ ಪ್ರಬುದ್ಧಕರ, ಅಮೃತ ಗೌರೆ, ಜೈಭೀಮ್ ಕೊರೋಳಿ, ಸುಭಾಷ ದಾಂಗೆ, ಬಾಬುರಾವ್ ವಾಲಿ, ರತ್ನಾಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಚಂದ್ರಶೇಖರ್ ಆರ್. ಪಾಟೀಲ್




















