ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಶ್ವದ ಅಗ್ರ 5% ವಿಜ್ಞಾನಿಗಳಲ್ಲಿ ಒಬ್ಬರು ಪ್ರೊ. ರಾಜಶೇಖರ ಎಫ್. ಭಜಂತ್ರಿ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಬಡ ಕುಟುಂಬದಲ್ಲಿ ಬೆಳೆದ ಹುಡುಗನೊಬ್ಬ ಇಂದು ಜಗತ್ತಿನ ಅಗ್ರ 5% ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ಗ್ರಾಮದ ಫಕ್ಕೀರಪ್ಪ ಭಜಂತ್ರಿ – ಗಂಗಮ್ಮ ಭಜಂತ್ರಿ ಇವರ ಮಗನಾದ ಡಾ. ರಾಜಶೇಖರ ಎಫ್. ಭಜಂತ್ರಿ ಇವರು ಸದ್ಯ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಭೌತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಕ್ತಿ ಸಂಗ್ರಹಣಾ ವಸ್ತುಗಳು, ಪಾಲಿಮರ್ ವಿಜ್ಞಾನ, ಘನ ಪಾಲಿಮರ್ ಎಲೆಕ್ಟ್ರೋಲೈಟ್‌ಗಳು, ಡೈಎಲೆಕ್ಟ್ರಿಕ್ ಅಧ್ಯಯನಗಳು ಹಾಗೂ ಪಾಸಿಟ್ರಾನ್ ಅನಿಹಿಲೇಷನ್ ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರು ನೀಡಿರುವ ಮಹತ್ವದ ಕೊಡುಗೆಗಳಿಗೆ ಈ ಪ್ರತಿಷ್ಠಿತ ಮಾನ್ಯತೆ ದೊರೆತಿದೆ.

ಅಂತರರಾಷ್ಟ್ರೀಯ ತಜ್ಞ ವಿಮರ್ಶಿತ (Peer Reviewed) ನಿಯತಕಾಲಿಕೆಗಳಲ್ಲಿ 130ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುವ ಅವರು, 2 ಅಂತರರಾಷ್ಟ್ರೀಯ ಪುಸ್ತಕ ಅಧ್ಯಾಯಗಳು ಹಾಗೂ 25 ಸಮ್ಮೇಳನ ಸಂಶೋಧನಾ ಪ್ರಬಂಧಗಳನ್ನು ಸಹ ಪ್ರಕಟಿಸಿದ್ದಾರೆ. ಅವರ ಈ ಸುದೀರ್ಘ ವೈಜ್ಞಾನಿಕ ಸಾಧನೆಗಳಿಗೆ ಮತ್ತೊಂದು ಮಹತ್ವದ ಗೌರವವಾಗಿ, 2025ರ ನವೆಂಬರ್ 1ರಂದು 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ “ಧೀಮಂತ ಪ್ರಶಸ್ತಿ” ಯನ್ನು ಪ್ರೊ. ಭಜಂತ್ರಿ ಅವರಿಗೆ ಪ್ರದಾನ ಮಾಡಲಾಯಿತು. ಅವರು 2025ನೇ ಸಾಲಿನಲ್ಲಿ ವಿಶ್ವದ ಅಗ್ರ 5% ವಿಜ್ಞಾನಿಗಳಲ್ಲಿ ಒಬ್ಬರಾಗಿ Sci-Rank Global Registry ವತಿಯಿಂದ ಹಾಗೂ Scholarly Index Public Beta ವತಿಯಿಂದ 2026ನೇ ಸಾಲಿನ ವಿಶ್ವದ ಅಗ್ರ 1000 ವಿದ್ವಾಂಸರಲ್ಲಿ (World’s Top 1000 Scholars) ಒಬ್ಬರಾಗಿ ಪ್ರತಿಷ್ಠಿತ ಜಾಗತಿಕ ಮನ್ನಣೆಯನ್ನು ಪಡೆದಿದ್ದಾರೆ. ಪ್ರೊ. ಭಜಂತ್ರಿ ಅವರ ಗಮನಾರ್ಹ ಸಾಧನೆಗಳು ಅವರ ತಾಯಿ, ಕುಟುಂಬಸ್ಥರು, ಬಂಧು-ಬಳಗ ಹಾಗೂ ಉಗರಗೋಳ ಗ್ರಾಮದ ಹಿತೈಷಿಗಳಿಗೆ ಅಪಾರ ಹೆಮ್ಮೆ ಮತ್ತು ಸಂತೋಷದ ಸಂಗತಿಯಾಗಿದ್ದು, ಯುವ ಪೀಳಿಗೆಯು ಶಿಕ್ಷಣ, ಸಂಶೋಧನೆ ಹಾಗೂ ಶ್ರೇಷ್ಠತೆಯ ಹಾದಿಯಲ್ಲಿ ಸಮರ್ಪಣೆ ಮತ್ತು ದೃಢಸಂಕಲ್ಪದಿಂದ ಮುನ್ನಡೆಯಲು ಪ್ರೇರಣೆಯಾಗಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!