ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

” ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ತುಡಿಯುವ ಮನಸಿನ ಮೆಹಬೂಬ್ ವಂಟೆಳಿ .”

ಮೆಹಬೂಬ್ ವಂಟೆಳಿ, ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದವರು.
ಮಹಮ್ಮದ್ ಖಾಜಾಹುಸೇನ್ ವಂಟೆಳಿ ಯವರ ಪುತ್ರರಾಗಿ ದಿ. 8.9.1963ರಲ್ಲಿ ಹನುಮಸಾಗರದಲ್ಲಿ ಜನಿಸಿದರು. ಇವರು ತಮ್ಮ ಹುಟ್ಟೂರಿನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪೂರೈಸಿ,
ಇಲಕಲ್ ನ ಶ್ರೀ ವಿಜಯ ಮಹಾಂತೇಶ ಕಾಲೇಜಿನಲ್ಲಿ ಪಿ. ಯು. ಸಿ, ಮತ್ತು ಇಂಟರ್ನ್ ಶಿಪ್ ಕೋರ್ಸ್, ತರಬೇತಿ ಶಿಕ್ಷಣ ಪೂರೈಸಿದ, ಇವರು 1988 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕಾತಿ ಹೊಂದಿ, ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದರು.

1989 ರಿಂದ 1993ರವರೆಗೆ ಸಿಂಧನೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸಿ, 1994 ರಿಂದ 2007ರವರೆಗೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಷ್ಟಗಿಯಲ್ಲಿ, ಅಧೀಕ್ಷಕರಾಗಿ (ಸುಪರಿಂಟೆಂಡೆಂಟ್) ಸೇವೆ ಸಲ್ಲಿಸಿ, 2008ರಿಂದ 2013 ರವರೆಗೆ ಇಲಕಲ್ ಸರಕಾರಿ ಪದವಿ ಕಾಲೇಜನಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿದರು.
ನಂತರ 2014ರಿಂದ 2016ರವರೆಗೆ
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳ ದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ, ಬಡ್ತಿ ಪಡೆದು ಸರಕಾರಿ ಪ್ರಥಮದರ್ಜೆ ಕಾಲೇಜು, ತಾವರಗೇರಾ (ಕುಷ್ಟಗಿ )ಯಲ್ಲಿ ಪತ್ರಾಂಕಿತ ಅಧಿಕಾರಿಯಾಗಿ 2017 ರಿಂದ 2023ರವರೆಗೆ ಸೇವೆ ಸಲ್ಲಿಸಿ, ದಿ. 30.09.2023ರಂದು ವಯೋ ನಿವೃತ್ತಿಯಾದರೂ
ಇವರಿಗೆ ಜನ ಸೇವೆ ಮಾಡಬೇಕೆಂಬ ಆಸೆ ಇನ್ನೂ ಜೀವಂತವಾಗಿದೆ.

ಮಹಬೂಬ್ ವಂಟೆಳಿ ಅವರು ಶಿಕ್ಷಣ ಕ್ಷೇತ್ರದಲ್ಲಿ, ಬಹಳಷ್ಟು ವರ್ಷ ಗಳವರೆಗೆ ಸೇವೆ ಮಾಡಿದ್ದೂ ಅಲ್ಲದೇ, ಹೈದ್ರಾಬಾದ್ ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆ, ಬೋಧಕೇತರ ನೌಕರರ ಸಂಘ (ರಿ.)ಪ್ರಾದೇಶಿಕ ಕಚೇರಿ ಆವರಣ,ಕಲಬುರ್ಗಿ
ಇಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ನೌಕರ ವರ್ಗದ ಪ್ರೀತಿಯನ್ನೂ ಗಳಿಸಿದ ಇವರು ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ನೌಕರರ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ
ಸಲ್ಲಿಸಿದ್ದಾರೆ.

ನೌಕರಿಯಿಂದ ನಿವೃತ್ತರಾಗಿದ್ದರೂ,
ಶಿಕ್ಷಣ ಕ್ಷೇತ್ರದ ಅಭಿವೃಧ್ಧಿಗಾಗಿ ಸದಾ ತುಡಿಯುವ ಮನಸ್ಥಿತಿ ಮೆಹಬೂಬ್ ವಂಟೆಳಿ ಅವರದ್ದಾಗಿದೆ ಎಂಬುದಕ್ಕೆ ಇದೀಗ ಬರಲಿರುವ ಕರ್ನಾಟಕ ರಾಜ್ಯ ವಿಧಾನ ಪರಿಷತ್ ನ ಪದವೀಧರರ ಚುನಾವಣೆ, ಯಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗದ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದು ಉತ್ತಮ ಉದಾಹರಣೆಯಾಗಿದೆ.

ಮೆಹಬೂಬ್ ವಂಟೆಳಿಯವರು ಸುಮ್ಮನೆ ಕೂಡುವ ವ್ಯಕ್ತಿಗಳಲ್ಲ, ಸದಾ ಯಾವುದಾದರೊಂದು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ, ಎನ್ನುವುದಕ್ಕೆ ಇದೇ ಅಕ್ಟೋಬರ್ 23 ರಂದು ನಡೆಯಲಿರುವ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದೇ ಸಾಕ್ಷಿಯಾಗಿದೆ.

ಚುನಾವಣೆ ಎಂದರೆ ಸೋಲು ಗೆಲುವುಗಳು ಸಹಜ, ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವ ಹೊಂದಿರುವ ಮೆಹಬೂಬ್ ವಂಟೆಳಿ ಯವರಿಗೆ ಈ ಬಾರಿ ಗೆಲುವು ಸಿಗಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ, ನನ್ನ ಅಭಿಪ್ರಾಯವೂ ಇದೇ ಆಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ
ಸ್ಪರ್ಧಿಸಿರುವ ಮೆಹಬೂಬ್ ವಂಟೆಳಿ ಯವರಿಗೆ ಜಯ ಲಭಿಸಿ, ಅವರಿಂದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಾಗಲಿ, ಎಂಬುದೇ ನಮ್ಮೆಲ್ಲರ ಬಯಕೆ, ಈ ಬಯಕೆಯನ್ನು
ವಂಟೆಳಿಯವರು ಈಡೇರಿಸುವಂತಾಗಲಿ ಎಂದು ಆಶಿಸುತ್ತಾ ಈ ಬರಹಕ್ಕೆ ವಿರಾಮ ನೀಡುವೆ.

  • ಶಿವಪ್ರಸಾದ್ ಹಾದಿಮನಿ.
    ಕೊಪ್ಪಳ.583231.
    ಮೊ. 7996790189.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!