ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಿ:ಗುರುಪ್ರಸಾದ್.ಎಸ್.
ಕಾರಟಗಿ (ಕೊಪ್ಪಳ ಜಿಲ್ಲೆ) ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತೆ ಕಾಪಾಡಿ ಎಂದು ತಾಲೂಕು ಪಂಚಾಯತಿ ಯೋಜನಾಧಿಕಾರಿ ಗುರು ಪ್ರಸಾದ್ ಎಸ್ ಅವರು ಹೇಳಿದರು.
ತಾಲೂಕಿನ ಹೋಸಕೇರಾ ಡಗ್ಗಿಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಶುಕ್ರವಾರ ಶ್ರಮದಾನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯ ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಉತ್ತಮ ಆರೋಗ್ಯದ ಸೇವೆ ಒದಗಿಸುವ ಜೊತೆಗೆ, ಕೇಂದ್ರ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಸುತ್ತಲೂ ಒಳ್ಳೆಯ ಗಿಡಗಳನ್ನು ನೆಟ್ಟು, ಚಿಕಿತ್ಸೆಗೆ ಬರುವವರಿಗೆ ವಿಶ್ರಾಂತಿ ಪಡೆಯಲು ಪರಿಶುದ್ಧ ವಾತಾವರಣ ಸೃಷ್ಟಿಸಬೇಕು. ವಾರಕ್ಕೊಮ್ಮೆ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರೊಂದಿಗೆ ಗ್ರಾ.ಪಂ ವ್ಯಾಪ್ತಿಯಲ್ಲಿನ ಪ್ರಮುಖ ಸ್ಥಳಗಳನ್ನು ಸ್ವಚ್ಛತೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಂಕಾಳಿ ಮಾರಪ್ಪ, ಉಪಾಧ್ಯಕ್ಷರಾದ ಜೆ ರತ್ನಮ್ಮ, ಸದಸ್ಯರಾದ ಮಂಜುನಾಥ, ಚಾಂದಬಿ ಹುಸೇನ್ ಸಾಬ್, ಪಿಡಿಒ ಮಂಗಳಪ್ಪ ನಾಯಕ್, ತಾಲೂಕು ಪಂಚಾಯತಿ ಎಸ್ ಬಿಎಮ್ ವಿಷಯ ನಿರ್ವಾಹಕ ಭೀಮಣ್ಣ,ಐಇಸಿ ಸಂಯೋಜಕ ಸೋಮನಾಥ ನಾಯಕ, ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರಾದ ಜಯಮ್ಮ,ನೀಲಮ್ಮ,ಮೋನಿಕ, ಶಿವಮ್ಮ,ಶಕುಂತಲಾ, ಮಹಾಂತಮ್ಮ ,ಮಹಾದೇವಿ, ಆಶಾ ಕಾರ್ಯಕರ್ತೆಯರು, ಎಂ.ಬಿ.ಕೆ,ಸ್ವ-ಸಹಾಯ ಸಂಘದ ಮಹಿಳೆಯರು ಇದ್ದರು.