ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಪರಿಶಿಷ್ಟರಿಗೆ ಸಾಲ ಸೌಲಭ್ಯ ನೀಡಲು ಕ್ರಮ:ಶಾಸಕ ಗಣೇಶ್ ಪ್ರಸಾದ್

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಎಸ್.ಸಿ,ಎಸ್.ಟಿ ಹಿತ ರಕ್ಷಣಾ ಸಭೆ ಜರುಗಿತು.ಈ ಕಾರ್ಯಕ್ರಮದಲ್ಲಿ ಪರಿಶಿಷ್ಟ ಸಮುದಾಯದವರಿಗೆ ವಿವಿಧ ನಿಗಮಗಳಿಂದ ನೀಡುವ ಸಾಲ ಸೌಲಭ್ಯಗಳನ್ನು ನೀಡಲು ಅಗತ್ಯಕ್ರ ಕೈಗೊಳ್ಳುವುದಾಗಿ ಶಾಸಕ ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಎಸ್ ಸಿ ಎಸ್ ಟಿ ಹಿತರಕ್ಷಣಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಆರ್ ಬಿ ಐ ನಿಯಮಾನುಸಾರ ಬ್ಯಾಂಕ್ ಗಳು ಸಾಲ ಸೌಲಭ್ಯ ನೀಡುತ್ತ ಎಂದು ಹೇಳಿದರು.
ಅಂಬೇಡ್ಕರ್ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಆಯ್ಕೆಯಾಗಿರುವ ಫಲಾನುಭವಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ನೀಡಲು ವಿನಾಕಾರಣ ವರ್ಷಪೂರ್ತಿ ಅಲೆಸುತಿದ್ದಾರೆ ಎಂದು ದಲಿತ ಮುಖಂಡರು ದೂರು ನೀಡಿದರು.
ಇದಕ್ಕೆ ಉತ್ತರಿಸಿದ ಲೀಡ್ ಬ್ಯಾಂಕ್ ಅಧಿಕಾರಿ ಸುರೇಖಾ ಆರ್ ಬಿ ಐ ನಿಯಮಾವಳಿ ಪ್ರಕಾರ ಸಾಲ ನೀಡಲಾಗುತ್ತದೆ ಎಂದು ಹೇಳಿದರು ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮುಖಂಡ ಶಿವಕುಮಾರ್ ತಾಲ್ಲೂಕಿನ ಕನ್ನೇಗಾಲ ಗ್ರಾಮದ ಪರಿಶಿಷ್ಟ ಸಮುದಾಯದ ಯುವಕನಿಗೆ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಲು ಎರಡು ವರ್ಷಗಳಿಂದ ಅಲೆಸುತ್ತಿದ್ದಾರೆ ಸಬ್ಸಿಡಿ ಹಣ ಬ್ಯಾಂಕಿನಲ್ಲಿ ಇದ್ದು ಇದಕ್ಕೆ ನೀವೇನಾದರೂ ಬಡ್ಡಿ ನೀಡುತ್ತೀರಾ ಸರ್ಕಾರ ನೀಡಿರುವ ಸಬ್ಸಿಡಿ ಹಣ ನೀಡಲು ಯಾಕೆ ಇಷ್ಟು ಸತಾಯಿಸುತ್ತಿರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್.ಬಿ.ಐ ನಿಯಮದ ಪ್ರಕಾರ ಪ್ರತಿ ಮೂರು ತಿಂಗಳಿಗೆ ಗ್ರಾಹಕರ ಸಭೆ ನಡೆಸಬೇಕು ಇದನ್ನು ಪಾಲಿಸಿದ್ದಾರಾ ಎಂದು ವಕೀಲ ಕಾಂತರಾಜು ಅಧಿಕಾರಿಯನ್ನು ಪ್ರಶ್ನೆ ಮಾಡಿದರು ಇದಕ್ಕೆ ಉತ್ತರಿಸಿದ ಅವರು ಆಗಸ್ಟ್ ತಿಂಗಳಲ್ಲಿ ಸಭೆ ನಡೆಸಿದ್ದು ಮುಂದಿನ‌ವಾರದ ಮತ್ತೊಂದು ಸಭೆಯನ್ನು ಏರ್ಪಡಿಸುವುದಾಗಿ ಹೇಳಿದರು.
ರಾತ್ರಿ ಹಗಲು ಎನ್ನದೆ ಅಕ್ರಮವಾಗಿ ಕ್ವಾರೆ ನಡೆಸುತಿದ್ದು ಸ್ಮಶಾನವನ್ನು ಒತ್ತುವರಿ ಮಾಡಿಕೊಂಡು ಕ್ವಾರೆ ನಡೆಸುತ್ತಿರುವುದರರಿಂದ ಶವವನ್ನು ‌ಹೂಳಲು ಜಾಗವಿಲ್ಲದೆ ಪರದಾಡುತ್ತಿದ್ದೇವೆ ಎಂದು ಹಿರಿಕಾಟಿ ಗ್ರಾಮಸ್ಥರು ಶಾಸಕರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು ಇದಕ್ಕೆ ಸ್ಪಂದಿಸಿದ ಶಾಸಕ ಗಣೇಶ್ ಪ್ರಸಾದ್ ಇನ್ನೆರಡು ಮೂರು ದಿನಗಳಲ್ಲಿ ತಹಸೀಲ್ದಾರ್ ಮತ್ತು ನಾನು ಭೇಟಿ ನಿಡುವುದಾಗಿ ಹೇಳಿದರು.
ಸಭೆಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಪಿ.ಗಿರೀಶ್, ಪುರಸಭಾ ಸದಸ್ಯರಾದ ಕುಮಾರ್,ಶ್ರೀನಿವಾಸ್ ಕಣ್ಣಪ್ಪ,ರಂಗಸ್ವಾಮಿ,ತಹಸೀಲ್ದಾರ್ ರಮೇಶ್ ಬಾಬು,ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ,ಎಸ್. ಸಿ.ಮತ್ತು ಎಸ್.ಸಿ,ಎಸ್.ಟಿ ಹಿತರಕ್ಷಣಾ ಸಮಿತಿಯ ಶ್ರೀನಿವಾಸ್,ಕೆಂಪರಾಜು,ಬಂಗಾರನಾಯಕ, ಇನ್ಸ್ಪೆಕ್ಟರ್ ಪರಶಿವಮೂರ್ತಿ,ಬೇಗೂರು ವೃತ್ತ ನಿರೀಕ್ಷಕ ವನರಾಜು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ-ಕುಮಾರ್ ಗುಂಡ್ಲುಪೇಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ