ಕೊಪ್ಪಳ/ದೋಟಿಹಾಳ:ಮಹಿಳೆ ಹಾಗೂ ಮಕ್ಕಳ ಮೇಲೆ ದೌರ್ಜನ್ಯವಾಗುತ್ತಿರುವುದರಿಂದ ದೈಹಿಕ ಹಾಗೂ ಮಾನಸಿಕ ದುಷ್ಪರಿಣಾಮಗಳು ಉಂಟಾಗುತ್ತಿದ್ದು,ಇದರ ನಿಯಂತ್ರಣಕ್ಕೆ ಸಮರ್ಪಕ ಶಿಕ್ಷಣ ಅವಶ್ಯ ಎಂದು ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣಾ ಪಾಟೀಲ ಹೇಳಿದರು.
ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನೆಹರು ಯುವ ಕೇಂದ್ರ, ದಯಾನಂದ ಪುರಿ ಕ್ರೀಡಾ ಸಾಂಸ್ಕೃತಿಕ ಜಾನಪದ ಕಲಾ ಸಂಘ ಹಾಗೂ ಗಾಯತ್ರಿ ಮಹಿಳಾ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಬಾಲಕಿಯರ ಮೇಲೆ ದೌರ್ಜನ್ಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು ಆಧುನಿಕತೆಯ ಪರಿಣಾಮ ಅಂತರ್ಜಾಲದ ದುರುಪಯೋಗದಿಂದ ಮಕ್ಕಳು ಮಾನಸಿಕವಾಗಿ ದೌರ್ಜ್ಯನ್ಯಕ್ಕೂ ಒಳಗಾಗುವ ಸಂಭವ ಇರುತ್ತದೆ ಆದ ಕಾರಣ ಶಾಲಾ ಮಕ್ಕಳು ಮೋಬೈಲ್ ಬಳಕೆ ಕಡಿಮೆ ಮಾಡಬೇಕು ಸಮಾಜದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹ,ಅತ್ಯಾಚಾರ ಹಾಗೂ ನಿಮಗೆ ಯಾರಾದರೂ ತೊಂದರೆ ಕೊಡುತ್ತಿದ್ದರೆ ಕೂಡಲೇ ಪಾಲಕರ ಗಮನಕ್ಕೆ ತರಬೇಕು ಅಂದಾಗ ಮಾತ್ರ ಮುಂದಾಗುವ ಪರಿಣಾಮ ತಡೆಗಟ್ಟಲು ಸಾಧ್ಯವಾಗಲಿದೆ ಎಂದರು ಬಾಲಕಿಯರು ಹಾಗೂ ಮಹಿಳೆಯರ ದೌರ್ಜನ್ಯಕ್ಕೆ ಅನಕ್ಷರತೆಯು ಒಂದು ಕಾರಣವಾಗಿದ್ದು,ಕಡ್ಡಾಯವಾಗಿ ಶಿಕ್ಷಣ ಪಡೆದುಕೊಳ್ಳುವ ಮೂಲಕ ದೌರ್ಜನ್ಯ ತಡೆಗಟ್ಟಲು ಸಾಧ್ಯವಾಗುತ್ತದೆ ಕೊಪ್ಪಳ ಜಿಲ್ಲೆಯಲ್ಲಿ 500ಕ್ಕೂ ಅಧಿಕ ಬಾಲ ಗರ್ಭಿಣಿಯರ ಪ್ರಕರಣ ಪತ್ತೆಯಾಗಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.ಇದಕ್ಕೆ ಬಾಲ್ಯ ವಿವಾಹ ಕಾರಣವಾಗಿದೆ ಶಿಕ್ಷಣ ಕಲಿತು ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು ಎಂದು ಹೇಳಿದರು.ಗ್ರಾ.ಪಂ ಅಧ್ಯಕ್ಷ ಮಹೇಶ ಕಾಳಗಿ ಮಾತನಾಡಿ,ಮಹಿಳಾ ಹಾಗೂ ಬಾಲಕಿಯರ ದೌರ್ಜನ್ಯ ತಡೆಗಟ್ಟಲು ಅನೇಕ ರೀತಿಯ ಕಾನೂನು ಇದ್ದು, ಅವುಗಳ ಜತೆಗೆ ವಿದ್ಯಾರ್ಥಿಗಳ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು. ಉಪಪ್ರಾಂಶುಪಾಲ ಡಿ.ಸುರೇಶ,ಎಸ್ ಡಿ ಎಮ್ ಸಿ ಅಧ್ಯಕ್ಷ ಸಂಗನಗೌಡ ಗೋತಗಿ ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಬಸವರಾಜ ಕಡಿವಾಲ,ಜಗದೀಶ ಸೂಡಿ,ಹಿದಾಯತ್ ನೀಲಗಾರ,ಶರಣಪ್ಪ ಗೌಂಡಿ,ಶ್ರೀನಿವಾಸ ಕಂಟ್ಲಿ, ಪೂರ್ಣಿಮಾ ದೇವಾಂಗಮಠ,ಶಶಿಕಲಾ ಅರಳೀಕಟ್ಟಿ, ಶಂಕ್ರಮ್ಮ ಕಾಳಗಿ ಗಾಯಿತ್ರಿ ಕೊಪ್ಪರದ ಅಂಗನವಾಡಿ ಕಾರ್ಯಕರ್ತರು ಇದ್ದರು.
