ಗಂಗಾವತಿ:ತಾಲೂಕಿನ ಹೊಸಕೇರಾ ಕ್ಯಾಂಪಿನ ಅಂಗನವಾಡಿ ಶಾಲೆಯಲ್ಲಿ ಗ್ರಾಮದ ಶ್ರೀಮತಿ ಯು.ಮಂಗದೇವಿ ಗಂಡ ಯು.ನಾಗೇಶ್ ರಾವ್,ಇವರು ತಮ್ಮ ಮೊಮ್ಮಗಳ ಹುಟ್ಟು ಹಬ್ಬದ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಶಾಲೆಯ ಸಮವಸ್ತ್ರಗಳನ್ನು ಹುಡುಗರೆಯಾಗಿ ನೀಡಿದರು.ತಾಲೂಕು ಹೊಸಕೆರಾ ವಲಯದ ಮಹಿಳಾ ಮತ್ತು ಮಕ್ಕಳ ಇಲಾಖೆ
ಮೇಲ್ವವಿಸ್ತರಣಾ ಅಧಿಕಾರಿಗಳಾದ ಮಾತನಾಡಿ ಸರಕಾರಿ ಶಾಲೆಗಳು ಅಳಿಯು ಉಳಿವು ಗ್ರಾಮದ ದಾನಿಗಳ ಕೈಯಲ್ಲಿದೆ,ಸರಕಾರಿ ಶಾಲೆಗಳ ಅಭಿವೃದ್ಧಿ ಸರಕಾರಕ್ಕೆ ಎಂಬ ಮನಸ್ಥಿತಿ ಸರಿಯಲ್ಲ, ಸ್ಥಳೀಯರು,ಉಳ್ಳುವರು,ದಾನಿಗಳು ಅಗತ್ಯ,ಸಹಕಾರ ಪ್ರೋತ್ಸಾಹ ನೀಡಿದರೆ,ಶೈಕ್ಷಣಿಕ ಕ್ಷೇತ್ರದಲ್ಲಿ ಬಲವರ್ಧನೆ ಆಗುತ್ತವೆ, ಜೊತೆಗೆ ನಿಮ್ಮ ಮಕ್ಕಳು ಕಲಿಕೆಯಲ್ಲಿ ಪ್ರಗತಿ ಸಾಧಿಸಿ,ಗ್ರಾಮದ ಕೀರ್ತಿ ಹೆಚ್ಚಿಸಲು ಎಂದರು. ಮತ್ತು ಭಾಷಾ ಸಾಬ್ ಇವರು ಶಾಲಾ ಮಕ್ಕಳಿಗೆ ನೀರು ಕುಡಿಯಲು ಲೋಟವನ್ನು ವಿತರಿಸಿದ್ದಾರೆ ಅವರಿಗೂ ಧನ್ಯವಾದಗಳು ತಿಳಿಸಿದರು.ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿಯಾದ ಶ್ರೀಮತಿ ಪುಷ್ಪವತಿ, ಸಹಾಯಕರು,ಅಧಿಕಾರಿಗಳು,ಮಕ್ಕಳು ಗ್ರಾಮದ ಪೋಷಕರು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.