ಸುಮಾರು ಏಳು ಲಕ್ಷ ಮೌಲ್ಯದ ಟೇಬಲ್ ಗಳು,ಸಾಮಗ್ರಿಗಳನ್ನು ಖ್ಯಾತ ಉದ್ಯಮಿ ಟಿ.ವೆಂಕಟ ಪ್ರಸಾದ ಅವರು ತಾವು ಕಲಿತ ಸರಕಾರಿ ಶಾಲೆಗೆ ಕೊಡುಗೆ ನೀಡಿ ಶಿಕ್ಷಣ ಪ್ರೇಮವನ್ನು ಮೆರೆದು ಇತರರಿಗೂ ಸ್ಪೂರ್ತಿಯಾಗಿದ್ದಾರೆ.
ಗಂಗಾವತಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟಿ.ವೆಂಕಟ ಪ್ರಸಾದ ಅಯೋಧ್ಯ ಅವರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಟಿ.ವೆಂಕಟಪ್ರಸಾದ ಅವರು ಮಾತನಾಡಿ ಇದು ನಾನು ನೀಡಿರುವುದು ದಾನ ಅಂತ ಅಲ್ಲ ಕೊಡುಗೆಯಂತೂ ಅಲ್ಲ,ಉತ್ತಮ ಶಿಕ್ಷಣದಿಂದ ಯಾವ ಮಗೂನು ವಂಚಿತರಾಗಬಾರದು ಎಂಬ ಆಶಾ ಭಾವನೆಯಿಂದ ಈ ಸರಕಾರಿ ಶಾಲೆಯ ಮಕ್ಕಳು ಉನ್ನತ ಶಿಕ್ಷಣ ಪಡೆದು ತಾವು ಇತರರನ್ನು ಶಿಕ್ಷಣ ಪಡೆಯುವಂತೆ ಪ್ರೇರಿಪಿಸಬೇಕೆಂದರು,ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನದಲ್ಲಿ ಬೆಳೆಯಬೇಕು ಎನ್ನುವುದು ನನ್ನ ಆಸೆ ತಾವು ಗುರುಗಳ ಮಾರ್ಗದರ್ಶನದಲ್ಲಿ ಗುರುಗಳನ್ನು ಗೌರವಿಸುತ್ತಾ ಉತ್ತಮ ಶಿಕ್ಷಣ ಪಡೆಯಿರಿ ಎಂದು ಮಕ್ಕಳಿಗೆ ಸಂದೇಶ ನೀಡಿದರು.
ವಿವಿ ಕಂಟ್ರೋಲ್ ಪ್ರೈವೆಟ್ ಲಿಮಿಟೆಡ್ ಬೆಂಗಳೂರ ಎಂಬ ಕಂಪನಿಯನ್ನು ನಡೆಸುತ್ತಾ ಅನೇಕರಿಗೆ ಕೆಲಸ ನೀಡಿ ಪ್ರೇರಣೆಯಾದ ಟಿ.ವೆಂಕಟ ಪ್ರಸಾದ ಅಯೋಧ್ಯ ಅವರು ತಮ್ಮ ಹುಟ್ಟೂರಾದ ಹೊಸ ಅಯೋಧ್ಯೆಗೆ ಒಂದು ಮನೆಯ ಶುಭಕಾರ್ಯ ಕಾರ್ಯಕ್ರಮಕ್ಕೆ ಆಗಮಿಸಿದಾಗ ತಾವು ಕಲಿತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಡಣಾಪೂರ ಶಾಲೆಗೆ ಬೇಟಿ ನೀಡಿ ಮಕ್ಕಳು ಕೆಳಗೆ ಕೂತು ಪಾಠ ಕಲಿಯುವುದನ್ನು ಅರಿತು ಅವರು ಶಾಲೆಯ ಮುಖ್ಯಸ್ಥರನ್ನು ಭೇಟಿ ನೀಡಿ ಮಕ್ಕಳು ಕುಳಿತುಕೊಳ್ಳಲು ಅನುಕೂಲವಾಗಲು ಸುಮಾರು 7 ಲಕ್ಷದ ಮೌಲ್ಯದ ಸಾಮಗ್ರಿಗಳನ್ನು ಕೊಡುಗೆಯಾಗಿ ಕೊಟ್ಟು ಕಲಿತ ಶಾಲೆಯನ್ನು ಗೌರವಿಸುವ ಮೂಲಕ ಅಭಿಮಾನವನ್ನು ಮೆರೆದಿದ್ದಾರೆ.
ಇದರ ಪ್ರಯುಕ್ತ ಇಂದು ಅವರ ಅಪಾರ ಕೊಡುಗೆಗೆ ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಶಾಲೆಯ ಮುದ್ದು ಮಕ್ಕಳು ಅವರಿಗೆ ಇಂದು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡು ಗೌರವ ಪೂರ್ವಕವಾಗಿ ಸನ್ಮಾನಿಸಿದರು.
ಇಂದು ಸನ್ಮಾನಿತರಾದ ವೆಂಕಟಪ್ರಸಾದ ಸರ್ ಅವರು
ಮಕ್ಕಳೊಂದಿಗೆ ತಾವು ಕಲಿತ ಶಾಲೆಯಲ್ಲಿ ಸಂತಸದ ಕ್ಷಣಗಳನ್ನು ಕಳೆದು ಹರ್ಷ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ವೆಂಕಟೇಶ ಅವರು ಮಾತನಾಡಿ ಅವರ ನೀಡಿರುವ ಕೊಡುಗೆ ನಮ್ಮಲ್ಲರಿಗೂ ಆಶ್ಚರ್ಯವಾಯಿತು ಇಂತಹ ವ್ಯಕ್ತಿಗಳು ಪ್ರತಿ ಗ್ರಾಮದಲ್ಲಿ ಇದ್ದು ಸರಕಾರಿ ಶಾಲೆಗೆ ಸಹಕಾರ ನೀಡಬೇಕು ಶಾಲೆಯ ಮಕ್ಕಳಿಗೆ ಬಹಳಷ್ಟು ಅನುಕೂಲವಾಗುತ್ತದೆಂದು ಅವರಿಗೆ ತುಂಬುಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಾಲೂಕ.ಪಂ.ಸದಸ್ಯರಾದ ಗ್ರಾಮದ ಹಿರಿಯರಾದ ಫಕೀರಪ್ಪ,ಮಲ್ಲನಗೌಡ,ಚಿದಾನಂದಪ್ಪ,ಡಿ.ವಿಶ್ವನಾಥ,ಮದನಮೋಹನ,ಹರೀಶ್,ಎಸ್.ಡಿ.ಎಮ್.ನಿ.ಪು.ಅ.ಹನುಮೇಶ ಟಿ.ನಾಗಪ್ಪ,ಆನಂದ,ರಾಘು ಹಾಗೂ ಸ.ಪ್ರೌ.ಶಾಲೆಯ ಮುಖ್ಯಶಿಕ್ಷಕರಾದ ಹನುಮಂತಪ್ಪ ಚವ್ಹಾಣ,ಸ.ಹಿ.ಪ್ರಾ.ಶಾಲೆ ಡಣಾಪೂರ ಮುಖ್ಯ ಶಿಕ್ಷಕರಾದ ವೆಂಕಟೇಶ ಶಾಲೆಯ ಶಿಕ್ಷಕರಾದ ಶರಣಬಸವ,ಶಿವಕುಮಾರ,ಶಿಕ್ಷಕಿಯರಾದ ಕವಿತ ಜ್ಯೋತಿ ಹಾಗೂ ಗ್ರಾಮದ ಯುವಕರು ಹಿರಿಯರು ಮಕ್ಕಳು ಭಾಗಿಯಾಗಿದ್ದರು.