ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಶ್ರೀ ಬಿ ಕೆ ವಿ ಸರ್ಕಾರಿ ಪ್ರೌಢಶಾಲೆ ನಿಂಬಳಗೇರೆಯಲ್ಲಿ ದಿನಾಂಕ 28. 2.2024ನೇ ಬುಧವಾರ ರಂದು ಬಿ ಪಕ್ಕೀರಪ್ಪ ಮುಖ್ಯ ಗುರುಗಳ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ವಿಜ್ಞಾನಿಗಳೊಂದಿಗೆ ಸಂವಾದ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮ ಅದ್ದೂರಿಯಾಗಿ ಆಚರಣೆ ಮಾಡಿದರು.
ಶ್ರೀ ಗೋವಿಂದರಾಜ್ ಟಿಎಸ್ ಇಸ್ರೋ ವಿಜ್ಞಾನಿಗಳು ಮಕ್ಕಳೊಂದಿಗೆ ವಿಜ್ಞಾನದ ವಿಷಯ ಕುರಿತು ಸಂವಾದ ನಡಸಿ ಉಪನ್ಯಾಸ ನೀಡಿದರು ನಂತರ ಈಶಾನ್ಯ ಕರ್ನಾಟಕ ಪದವಿದರ ಕ್ಷೇತ್ರದ ಶಾಸಕರಾದ ರಾಜೇಂದ್ರ ಪಾಟೀಲ್ ಮತ್ತು ಎಂಪಿ ರಾಜೇಂದ್ರ ಗೌಡ್ರು ಗ್ರಾಮ ಪಂಚಾಯತಿ ಅಧ್ಯಕ್ಷರು ನಿಂಬಳಗೇರೆ ಸೇರಿದಂತೆ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ನಡೆಸಿದರು.
ಈ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ಹಾಗೂ ವಸ್ತು ಪ್ರದರ್ಶನ ಕುರಿತು ವಿಜಯನಗರ ಬಳ್ಳಾರಿ ಜಿಲ್ಲೆ ತನ್ನದೇ ಆದ ಹೆಸರು ಪಡೆದು ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪಡೆದು ತಂದುಕೊಟ್ಟಂತ ಇಲ್ಲಿನ ಶಿಕ್ಷಕರಿಗೆ ಧನ್ಯವಾದಗಳು ತಿಳಿಸುತ್ತಾ ಮತ್ತು ಈ ಶಾಲೆ ಇನ್ನು ಅತ್ಯುತ್ತಮ ಎತ್ತರಕ್ಕೆ ಶಾಲೆ ಬೆಳೆಯಲ್ಲಿ ಎಂದು ಮಾನ್ಯ ಶಾಸಕರಾದ ಎನ್ ಟಿ ಶ್ರೀನಿವಾಸ್ ಕಾರ್ಯಕ್ರಮಕ್ಕೆ ಅನುಪಸ್ಥಿತಿಯಲ್ಲಿ ಈ ಶಾಲೆಗೆ ಮೆಚ್ಚಿ ಪಿಯು ಕಾಲೇಜ್ ಮಾಡಿಕೊಡುತ್ತೇನೆ ಎಂದು ತಿಳಿಸಿದ್ದಾರೆ ಎಂದು ಕ್ಷೇತ್ರದ ಅಧಿಕಾರಿಗಳಾದ ಪದ್ಮನಾಮಕರಣ ಮತ್ತೆತ್ತರರು ಮಾತನಾಡಿದರು.
ಈ ಸಂದರ್ಭದಲ್ಲಿ ಎಂ ಜಿ ಪ್ರಕಾಶ್ ಎಸ್ ಟಿ ಎಂ ಸಿ ಅಧ್ಯಕ್ಷರು ಕೆಎಂ ಕುಸುಮ ಉಪನ್ಯಾಸಕರು ದಾವಣಗೆರೆ ಎಲ್ ಜಿ ಮನೋಹರ್ ಜಿಲ್ಲಾಧ್ಯಕ್ಷರು ಕ.ರಾ.ಪ್ರೌ.ಶಿ.ಸಂಘ ಕುಮಾರಸ್ವಾಮಿ ಎಚ್ ಎಲ್ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಸರ್ವ ಸದಸ್ಯರು ಎಸ್ ಟಿ ಎಂ ಸಿ ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಶಾಲಾ ಶಿಕ್ಷಕರ ವೃಂದ ಮಕ್ಕಳು ಉಪಸ್ಥಿತರಿದ್ದರು.
ವರದಿ ವೈ ಮಹೇಶ್ ಕುಮಾರ್ ಕೊಟ್ಟೂರು