ಕೂಡ್ಲಿಗಿ ತಾಲೂಕಿನ ಮಾರಮ್ಮಹಳ್ಳಿ ಗ್ರಾಮದಲ್ಲಿ ಶ್ರೀ ಬೊಮ್ಮಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ.ಅವರು ದಿನಾಂಕ 01-03-24 ರಂದು ಭೇಟಿ ನೀಡಿ ನಾಡಿನ ಜನತೆಯ ಒಳಿತಿಗಾಗಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.ಹಳ್ಳಿಗಳು,ಕೇರಿಗಳು ನನ್ನ ಕನಸು ಮನಸ್ಸಲ್ಲಿ ಜೀವಂತವಾಗಿವೆ ತಾವುಗಳು “ಎಲ್ಲಿ ಕಳೆದುಕೊಂಡಿರಿ ಅಲ್ಲಿ ಹುಡುಕಿಕೊಂಡಿದ್ದೀರಿ ” ಅನ್ನುವುದು ಹೆಮ್ಮೆಯ ವಿಷಯ.
ದಶಕಗಳಿಂದ ಗುಡೇಕೋಟೆ ಹಾಗೂ ಖಾನಹೊಸಹಳ್ಳಿ ಭಾಗದ ಬಹುತೇಕ ಹಳ್ಳಿಗಳು ಅಭಿವೃದ್ಧಿಯಿಂದ ಹಿಂದುಳಿದಿರುವುದು ನನ್ನ ಗಮನಕ್ಕೆ ಇದೆ.
ಈ ಬಾರಿ ಬರಗಾಲ ತೀವ್ರವಾಗಿ ಇರುವುದರಿಂದ ಪ್ರತಿಯೊಂದು ವಿಚಾರದಲ್ಲಿ ಸೂಕ್ಷ್ಮವಾಗಿ ಕಾಳಜಿ ವಹಿಸಿ ಕೆಲಸ ಮಾಡುತ್ತೇನೆ.ಜಾನುವಾರುಗಳಿಗೆ ಮತ್ತು ದೇವರ ಎತ್ತುಗಳಿಗೆ ಗೋ ಶಾಲೆಗಳ ಮೂಲಕ ಗುಣಮಟ್ಟದ ಮೇವು ನೀರು ಒದಗಿಸಿಕೊಡುವುದಾಗಿ ತಿಳಿಸಿದರು. ಸಮಾಜಿಕ ನಾಟಕ ಕಲೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದರು. ಆಯಾ ಹೋಣಿ ಮತ್ತು ಕೇರಿ ಸುತ್ತಿ ಊರಿನ ಮುಖಂಡರ ಕಷ್ಟ-ಸುಖ ವಿಚಾರಿಸಿರು.ಈ ವೇಳೆ ವಿವಿಧ ಮುಖಂಡರು ಉಪಸ್ಥಿತರಿದ್ದರು.
ವರದಿ ಅಂಗಡಿ ಶಶಿಕುಮಾರ್