ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಯುಗಾದಿ ಪ್ರಯುಕ್ತ ವಿಶೇಷ ಪೂಜಾ ಹಾಗೂ ಅಲಂಕಾರ ಇಂದು ಬೆಳಗ್ಗೆ ತಾಯಿ ದುರ್ಗಾದೇವಿಯ ಹಾಗೂ ಡಣಾಪೂರ ಆರಾದ್ಯ ದೈವವಾಗಿರುವ ಮಾರುತೇಶ್ವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಗಂಗೆಯ ಸ್ಥಳಕ್ಕೆ ತೆರಳಿ ಗ್ರಾಮದ ರಾಜ ಬಿದಿಯಲ್ಲಿ ಸಕಲವಾದ್ಯವೃಂದಗಳಿಂದ ದೇವಸ್ಥಾನಕ್ಕೆ ಕರೆ ತರಲಾಯಿತು ದೇವಶಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮೂರ್ತಿಗೆ ಅಭಿಷೇಕ ಹಾಗೂ ಅಲಂಕಾರ ವಿಷೇಶ ಪೂಜೆ ಸಲ್ಲಿಸಿ ದುರ್ಗಾ ಪರಮೇಶ್ವರಿ ಭಕ್ತಿಗೆ ಪಾತ್ರರಾದರು.ಈ ವೇಳೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತದ ವಿಷೇಶ ಪೂಜಾ ಪ್ರಾರ್ಥನೆ ಮಾಡಿ ಗ್ರಾಮದ ಹಾಗೂ ಸಕಲ ಜೀವಿಗಳಿಗೆ ಒಳಿತಾಗಲೆಂದು ಪೂಜಾ ಕಾರ್ಯಕ್ರಮ ಜರುಗಿತು ಎಂದು ದುರ್ಗಾದೇವಿ ದೇವಾಸ್ಥಾನದ ಸೇವಾ ಬಳಗದವರು ತಿಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.