ಕೊಪ್ಪಳ:ನಮ್ಮ ದೇಶದಲ್ಲಿ ದಲಿತರು,ಹಿಂದುಳಿದವರು ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಆರ್ಥಿಕವಾಗಿ,ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಯಾಗಲು ಸಂವಿಧಾನದಲ್ಲಿ ಹಲವು ವಿಶೇಷ ಸೌಲಭ್ಯಗಳನ್ನು ಅಂಬೇಡ್ಕರ್ ಅವರು ನೀಡಿದ್ದಾರೆ.
ಆದ್ದರಿಂದ ನಾವು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಈ ಭೂಮಿ ಇರುವರೆಗೂ ನಾವು ಅವರನ್ನು ನೆನಯಬೇಕು ಎಂದು ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಅವರು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರವಿವಾರದಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಬಹಳ ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿ ನಮ್ಮ ದೇಶಕ್ಕೆ ಉತ್ತಮವಾದ ಸಂವಿಧಾನವನ್ನು ನೀಡಿದ್ದಾರೆ.ಈ ಸಂವಿಧಾನವು ಇಡೀ ದೇಶದ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಿದೆ.
ಅಂಬೇಡ್ಕರ್ ಅವರು ಮಹಾನ್ ಮೇಧಾವಿ ಮತ್ತು ಮಾನವತಿ ಆಗಿದ್ದರು.
ಎಲ್ಲರೂ ಶಿಕ್ಷಣವನ್ನು ಪಡೆಯಬೇಕು. ಬಡವರು ಉದ್ಯೋಗಗಳನ್ನು ಪಡೆದುಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂಬ ಅಸೆ ಅಂಬೇಡ್ಕರ್ ಅವರದಾಗಿತ್ತು.ಅಂಬೇಡ್ಕರ್ ಅವರ ವಿಚಾರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಕಾಲೇಜಿನ ದೈಹಿಕ ಶಿಕ್ಷಣ ಭೋದಕ ಡಾ.ಪ್ರದೀಪ್ ಕುಮಾರ್ ಮಾತನಾಡುತ್ತ ಅಂಬೇಡ್ಕರ್ ಅವರ ಜಯಂತಿಯನ್ನು ಇಡೀ ವಿಶ್ವದಲ್ಲಿ ಆಚರಣೆ ಮಾಡುತ್ತಿದ್ದಾರೆ ಅವರು ವಿಶ್ವ ನಾಯಕ ಅವರು ನಮ್ಮ ದೇಶದ ಎಲ್ಲಾ ಜನರಿಗೆ ಮಾದರಿ ನಾಯಕ ಅವರು ಇಡೀ ದೇಶದ ಜನರಿಗೆ ಸಂವಿಧಾನ ಮೂಲಕ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.
ಅಂಬೇಡ್ಕರ್ ಅವರು ಜ್ಞಾನದ ಸಂಕೇತ ಅಂಬೇಡ್ಕರ್ ಅವರ ವಿಚಾರಗಳನ್ನು ನಾವು ಓದಬೇಕು ಅಂಬೇಡ್ಕರ್ ಅವರು ನಮ್ಮ ದೇಶದ ಬಡವರ ಉದ್ದಾರಾಕ್ಕಾಗಿ ಬಹಳ ಶ್ರಮ ಪಟ್ಟಿದ್ದಾರೆ ಎಂದರು.
ಕಾರ್ಯಕ್ರಮದ ಅತಿಥಿಯಾಗಿರುವ ಪತ್ರಿಕೋದ್ಯಮದ ಉಪನ್ಯಾಸಕ ಡಾ.ನರಸಿಂಹ ಅವರು ಮಾತಾನಾಡಿತ್ತ ಅಂಬೇಡ್ಕರ್ ಅವರು ಜೀವನದಲ್ಲಿ ಬಹಳ ಕಷ್ಟಗಳನ್ನು ಅನುಭವಸಿದ್ದರೆ.ಅವರು ಓದುವ ಶಾಲೆ -ಕಾಲೇಜಿಗಳಲ್ಲಿ ಅಸ್ಪೃಶ್ಯತೆಯನ್ನು ಅನುಭವಿಸಿದ್ದಾರೆ. ಮಹಾರಾಷ್ಟ್ರ ದ ಬರೋಡದ ಸೈಯಾಜಿ ರಾವ್ ಗಾಯಕವಾಡ್ ಅವರ ಆರ್ಥಿಕ ಸಹಾಯದಿಂದ ಅಂಬೇಡ್ಕರ್ ಅವರು ಅಮೇರಿಕಾದ ಕೊಲಂಬಿಯ ಯೂನಿವರ್ಸಿಟಿಯಲ್ಲಿ ಮತ್ತು ಇಂಗ್ಲೆಂಡಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ್ದಾರೆ.ಅವರು ಜನ್ಮ ದಿನಾಚರಣೆಯನ್ನು ವಿಶ್ವ ಜ್ಞಾನ ದಿನ ಅಂತ ವಿಶ್ವ ಸಂಸ್ಥೆ ಘೋಷಣೆ ಮಾಡಿದೆ ಸಂವಿಧಾನ ಮೂಲಕ ಎಲ್ಲರಿಗೂ ಮೀಸಲಾತಿ ಕಲ್ಪಿಸಿದ್ದಾರೆ.
ಮಹಿಳೆಯರಿಗೆ ಬಹಳಷ್ಟು ವಿಶೇಷವಾದ ಸೌಲಭ್ಯಗಳನ್ನ ನೀಡಿದ್ದಾರೆ.ಆಸ್ತಿ ಹಕ್ಕು,ಶಿಕ್ಷಣ ಹಕ್ಕು ಮತ್ತು ಮತದಾನದ ಹಕ್ಕುನ್ನು ದೇಶದ ಪ್ರತಿಯೊಬ್ಬ ಪ್ರಜೆಗಳಿಗೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿಗಳಾದ ಪ್ರೊ. ನಂದಾ,ಶ್ರೀಮತಿ ಲಕ್ಷ್ಮಿ ಎ.ಕೆ,ಶ್ರೀಮತಿ ರುಕ್ಕಮ್ಮ ಮತ್ತು ಗವಿಸಿದ್ದಪ್ಪ ಇದ್ದರು
ಡಾ.ಪ್ರದೀಪ್ ಕುಮಾರ್ ಸ್ವಾಗತಿಸಿದರು.ಡಾ.ನರಸಿಂಹ ನಿರೂಪಿಸಿ ವಂದಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.