ನಿಮ್ಮಲ್ಲಿ ಒಂದು ವಿನಂತಿ ನೀವು ಎಲ್ಲೇ ವಿದ್ಯಾಭ್ಯಾಸ ಮಾಡುತಿದ್ದರೂ ಅಥವಾ ಹೊರಗಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಆಗ್ತಾ ಇದ್ದರೆ ನಿಮಗೆ ಯಾರಾದ್ರೂ ತೊಂದ್ರೆ ಕೊಡ್ತಾ ಇದ್ದರೆ ಆ ಕ್ಷಣಕ್ಕೆ ಮನೆಯವರಿಗೆ ಹೇಳಿ ಕಾಲೇಜ್ ಲೈಫ್ ಅಲ್ಲಿ ಕಾಮನ್ ಅಂತ ಸುಮ್ನೆ ಆಗಬೇಡಿ ನಿಮ್ಮ ತಂದೆ ತಾಯಿಗೆ ಆಗಲೇ ತಿಳುಹಿಸಿ ನಾವೇ ವಾರ್ನಿಂಗ್ ಮಾಡಿದ್ರೆ ಆಯ್ತು ಅಂತ ಯಾವತ್ತೂ ಸುಮ್ನೆ ಆಗಬೇಡಿ ನಿಮ್ಮ ಕುಟುಂಬದವರು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಾರೆ ಎಂಬ ಭಾವನೆ ಇಂದ ಸುಮ್ನೆ ಆಗಬೇಡಿ ಹಾಗೆ ಏನು ಆಗಲ್ಲ ಆಗಿಂದ ಆಗಲೇ ನಿಮ್ಮ ಕುಟುಂಬಕ್ಕೆ ತಿಳಿಸಿ.
ಸೈಲೆಂಟ್ ಇದ್ದರೇ ನಿಮಗೆ ಮುಂದೆ ತುಂಬಾ ದೊಡ್ಡ ಸಮಸ್ಯೆ ಆಗುತ್ತೆ ಅದಕ್ಕೆ ನೀವು ತುಂಬಾ ಜಾಗರೂಕತೆಯಿಂದ ಇರಬೇಕು ತೊಂದ್ರೆ ಆದಮೇಲೆ ಸರ್ಕಾರ ಸಮಾಜವನ್ನು ಟೀಕೆ ಮಾಡಿ ಏನೂ ಪ್ರಯೋಜನ ಇಲ್ಲ ಅದಕ್ಕೆ ತೊಂದ್ರೆ ಆಗೋ ಮುಂಚೆನೇ ನಾವೇ ತುಂಬಾ ಜಾಗರೂಕರಾಗಿ ಇರಬೇಕು ಇದು ನಿಮ್ಮ ಒಬ್ಬ ಅಣ್ಣನಾಗಿ ಒಬ್ಬ ತಮ್ಮನಾಗಿ ತುಂಬಾ ಕಾಳಜಿ ಇಂದ ಹೇಳುತ್ತಿದ್ದೇನೆ..
ನಿಮಗೆ ನೀವೇ ರಕ್ಷಕರಾಗಿ ಎಲ್ಲದಕ್ಕೂ ಆಗಿಂದಾಗ್ಗೆ ಆಗಲೇ ನಿಮ್ಮ ಕುಟುಂಬದ ಗಮನಕ್ಕೆ ತನ್ನಿ…
ಜೀವನಕ್ಕಿಂತ ಜೀವ ಮುಖ್ಯ
ಜೀವ ಇದ್ದರೆ ಜೀವನ
-ಮಲ್ಲಿಕ್,ಕೊಪ್ಪಳ