ಕೊಪ್ಪಳ/ನವಲಿ:ಹುಬ್ಬಳ್ಳಿ ನಗರದಲ್ಲಿ ಬರ್ಬರವಾಗಿ ಕೊಲೆಯಾದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಆತ್ಮಕ್ಕೆ ಶಾಂತಿ ಕೋರಿ ನವಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕನಕಗಿರಿ ಮಂಡಲದ ಅಧ್ಯಕ್ಷರು ನವಲಿ ಯುವ ಮುಖಂಡರಾದ ಜಡಿಯಪ್ಪ ಮುಕ್ಕುಂದಿಯವರು ಹಾಡುಹಗಲೆ ಕಾಲೇಜ್ ಕ್ಯಾಂಪಸ್ ನಲ್ಲಿ ಒಬ್ಬ ಯುವತಿಯ ಕೊಲೆ ಮಾಡುತ್ತಾರೆ ಎಂದರೆ ರಾಜ್ಯದಲ್ಲಿ ಸರಕಾರ ಎಂಥಾ ವ್ಯವಸ್ಥೆ ತಂದಿದೆ,ಅಷ್ಟೆ ಅಲ್ಲದೆ ಕೊಲೆಯ ವಿಚಾರವಾಗಿ ಈ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿ ಹೇಳಿಕೆಗಳು ಜವಾಬ್ದಾರಿಯಿಂದ ಕೂಡಿರದೆ ಅತ್ಯಂತ ಬಾಲಿಷ ಹಾಗೂ ಅಪ್ರಬುದ್ದ ಮಾತುಗಳು ಅಸಹ್ಯಮೂಡಿಸುತ್ತವೆ,ಇಂತವರು ರಾಜ್ಯದ ಜನರಿಗೆ ಹೇಗೆ ಸುರಕ್ಷತೆ ನೀಡಬಲ್ಲರು,ಇಂತಹ ಘಟನೆಗಳಿಂದ ಹೆಣ್ಣು ಮಕ್ಕಳು ನಿರ್ಭಿತಿಯಿಂದ ಶಾಲಾ ಕಾಲೇಜಿಗೆ ಹೊಗದಂತಾ ವಾತವರಣ ನಿರ್ಮಾಣವಾಗುತ್ತಿರುವುದು ದುರದೃಷ್ಠಕರ ಶೀಘ್ರವೇ ನೇಹಾಳ ಕೊಂದ ಪಾಪಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಅಪರಾಧಿಗೆ ರಕ್ಷಣೆ ಸಿಗುವಂತಾಗಬಾರದು ಎಂದರು,
ಕಾರ್ಯಕ್ರಮದಲ್ಲಿ ಹಿರಿಯರಾದ ಪಂಚಯ್ಯ ಸ್ವಾಮಿ ಬಿದ್ನೂರಮಠ,ಮೃತ್ಯುಂಜಯ ಸ್ವಾಮಿ ಹಿರೇಮಠ, ಭೀಮನಗೌಡ ಹರ್ಲಾಪೂರ,ದುರುಗೇಶ ಭಜಂತ್ರಿ, ಯುವ ಮುಖಂಡರಾದ ವೀರೇಶ ಹರಿಜನ, ಯಮನೂರ ಬುನ್ನಟ್ಟಿ,ಶಶಿಧರ ಸ್ವಾಮಿ ಸೋಮನಾಳ ದುರುಗೇಶ ಹರಿಜನ್,ರಾಮಣ್ಣ ಗಾಳಿ,ಹನುಮಂತ ಕಾರಟಗಿ,ಮಧು ಈಡಿಗೇರ,ಹೇಮನಗೌಡ,ಶಿವಯ್ಯ ಸ್ವಾಮಿ ನವಲಿ,ಸಂಗಮೇಶ ಅಂಗಡಿ,ಮಂಜುನಾಥ ಹರ್ಲಾಪೂರ,ಗಿರಿಯಪ್ಪ ಕಲ್ಲೂರ,ಜಡಿಯಪ್ಪ ಉಪ್ಪಳ, ಜಡಿಸಿದ್ದಯ್ಯ ಸ್ವಾಮಿ ಹಾಗೂ ನವಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡು ಶ್ರದ್ದಾಂಜಲಿ ಅರ್ಪಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.