ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕರಮುಡಿಯ ಭಕ್ತರು ಶುಕ್ರವಾರ ಹುಲಿಗೆಮ್ಮ ದೇವಿಯ ದರ್ಶನ ಪಡೆದುಕೊಂಡು ಮರಳಿ ತಮ್ಮ ಊರಿಗೆ ಬರುವ ಸಮಯದಲ್ಲಿ ಹೊಸಳ್ಳಿ ಹತ್ತಿರ ನಡೆದ ಖಾಸಗಿ ಬಸ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ನಡೆದಿದೆ.
ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಭಕ್ತರು ಹಲಿಗೇಮ್ಮದೇವಿ ದೇವರ ಹರಕೆಯನ್ನು ಮುಗಿಸಿಕೊಂಡು ವಾಪಾಸ್ ಊರಿಗೆ ಟ್ರಾಕ್ಟರ್‌ನಲ್ಲಿ ಬರುವಾಗ ಈ ಘಟನೆಯಾಗಿ ದುರಗವ್ವ ಹೊಸಮನಿ(೫೦),ರಾಮಪ್ಪ ಸೊಂಪೂರ (೫೫), ಬಸವರಾಜ ದೊಡ್ಡಮನಿ(೧೮),ಮುತ್ತಪ್ಪ ಚಲವಾದಿ(೧೬) ಈ ನಾಲ್ವರ ಪ್ರಾಣವನ್ನು ಬಲಿ ಪಡೆದುಕೊಂಡಿದೆ.ಕೆಲವರಿಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.ಘಟನೆಯಲ್ಲಿ ಗಾಯಗೊಂಡಿದ್ದ ಕರಮುಡಿ ಗ್ರಾಮದ ದುರುಗವ್ವ (50) ಎಂಬ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಕರಮುಡಿ ಗ್ರಾಮದ ಶಿವಪ್ಪ ಹೊಸಮನಿ ಎಂಬುವವರು ತಮ್ಮ ಸಂಬಂಧಿಕರೊಡಗೂಡಿ ಗುರುವಾರ ಗ್ರಾಮದಿಂದ ಕೊಪ್ಪಳ ತಾಲೂಕಿನ ಹುಲಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಟ್ಯಾಕ್ಟರ್‌ನಲ್ಲಿ ಬಂದಿದ್ದರು,ಶುಕ್ರವಾರ ಹರಕೆ ತೀರಿಸಿಕೊಂಡು ರಾತ್ರಿ ವಾಪಾಸ್ ಟ್ರಾಕ್ಟರ್‌ನಲ್ಲಿ ಊರಿಗೆ ಮರಳುತ್ತಿದ್ದರು.ಈ ವೇಳೆ ಹೊಸಲಿಂಗಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹಿಂಬದಿಯಿಂದ ಬಂದ ಖಾಸಗಿ ಬಸ್‌ಡಿಕ್ಕಿ ಹೊಡೆದ ಪರಿಣಾಮವಾಗಿ ನಾಲ್ಕು ಜನರು ಸಾವನ್ನಪಿರುವ ಘಟನೆ ಜರುಗಿದೆ, ಇನ್ನುಳಿದಂತೆ ಗಾಯಗೊಂಡಿದ್ದ ಜನರನ್ನು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹಾಗೂ ಜಿಲ್ಲಾಸ್ಪತ್ರೆಗೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಬಸ್ ಚಾಲಕ ಪರಾರಿಯಾಗಿದ್ದಾನೆ,
ಗ್ರಾಮದಲ್ಲಿ ಅಸುನೀಗಿದವರ ಹರಕೆ ತೀರಿತು ಇವರ ಋಣ ಮುಗಿಯಿತು ಎಂದು ಕುಟುಂಬದ ಆಕ್ರದನ ಮುಗಿಲು ಮುಟ್ಟಿ ಮನಕಲಕುಂತೆ ಮಾಡಿತು. ಅಪಘಾತದಲ್ಲಿ ಗಾಯಗೊಂಡವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ದಾಖಲಾದ ವಿಷಯವನ್ನು ಅರಿತುಕೊಂಡು ಮಾಜಿ ಸಚಿವ ಹಾಲಪ್ಪ ಆಚಾರ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿ ಕುಟುಂಬದವರಿಗೆ ಧೈರ್ಯ ಹೇಳಿದರು.ಈ ವೇಳೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಬಸವರಾಜ ಕೆ. ಅವರು ಇದ್ದರು.ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರನ್ನು ಭೇಟಿ ಮಾಡಿ ಗಾಯಳುಗಳ ಬಗ್ಗೆ ವಿಚಾರಿಸಿ ಸೂಕ್ತವಾದ ಉತ್ತಮ ಚಿಕಿತ್ಸೆ ನೀಡಲು ಸೂಚನೆ ನೀಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.