ಸಂಜೆ ನಾನು ಶಿವು ಮತ್ತು ಭಕ್ತ ಪ್ರಾಣೇಶ್ ಹೀಗೆ ಮೂವರು ಚಹಾ ಕುಡಿಯುವಾಗ ಗೆಳೆಯ ಶಿವು ಕುತೂಹಲದಿಂದ ಜೈವಿಕ ಕ್ರಿಯೆಗಳಿಲ್ಲದೆ ಮನುಷ್ಯನೊಬ್ಬ ಹುಟ್ಟಲು ಸಾಧ್ಯವೇ ಎಂದು ಕೇಳಿದ? ಅದಕ್ಕೆ ಜೀವಶಾಸ್ತ್ರ ಪ್ರಕಾರ ಏಕಕೋಶದ ಸೂಕ್ಷ್ಮಾಣು ಜೀವಿಗಳು ಸಹ ಅಲೈಂಗಿಕ ಸಂತಾನೋತ್ಪತ್ತಿಯ (Asexual reproduction) ರೂಪವಾದ ವಿದಳನ, ಮೊಳಕೆಯೊಡೆವುದು (Fission, Budding) ಮೂಲಕ ತಮ್ಮನ್ನು ತಾವೇ ದೇಹದಿಂದ ಬೇರ್ಪಡಿಸಿಕೊಂಡು ಇನ್ನೊಂದು ತಮ್ಮಂತ ಜೀವಿಗಳಿಗೂ ಜೀವ ಕೊಡಲು ಹೆಣಗಾಡುತ್ತವೆ. ಅಂತಹದರಲ್ಲಿ ಮನುಷ್ಯನು ಹುಟ್ಟಲು ಅಸಾಧ್ಯ. ಆದರೆ ಜೀವಶಾಸ್ತ್ರದ ಜೀವ ವಿಕಾಸನ ಸಿದ್ಧಾಂತದಲ್ಲಿ ಆದಿ ಕಾಲದಲ್ಲಿ ಸೂಕ್ಷ್ಮಾಣು ಜೀವಿಗಳಿಂದಲೇ ಮನುಷ್ಯನಾಗಿದ್ದು ಎಂದು ಓದುವುದ್ದುಂಟು.ಆಗ ಪ್ರಾಣೇಶ್ ಸೂಕ್ಷ್ಮಜೀವಿಗಳಿಂದ ಮನುಷ್ಯನಾಗಲು ಎಷ್ಟು ವರ್ಷ ಹಿಡಿಯುತ್ತದೆ ಎಂದ ಅದಕ್ಕೆ ನಾನು ಮನುಷ್ಯನಾಗಿದ್ದು ಅದು ಮಿಲಿಯನ್ ವರ್ಷಗಳ ಪ್ರಕ್ರಿಯೆಯಿಂದ ಅಂದೆ ಭೂಮಿ ಮೇಲೆ 65 ಕೋಟಿ ವರ್ಷಗಳ ಹಿಂದೆ ಹಿಮಯುಗದಲ್ಲಿ ಅತಿಯಾದ ಉಷ್ಣಾಂಶದಿಂದ ಹಿಮ ಕರಿಗೆ ನದಿಗಳಾಗಿ ಹರಿಯಿತು ಈ ನದಿಗಳು ಪೋಷಕಾಂಶಗಳನ್ನು ಹೊತ್ತು ತಂದು ಒಂದು ಜಾಗದಲ್ಲಿ ಸಾಗರವನ್ನು ನಿರ್ಮಿಸಿದವು. ಸಾಗರದ ನೀರಿನಲ್ಲಿ ಪೋಷಕಾಂಶ ಪ್ರಮಾಣ ಹೆಚ್ಚಾಗಿ ತಾಪಮಾನ ಕಡಿಮೆಯಾದಾಗ ಪಾಚಿ ಉತ್ಪತ್ತಿಗೆ ಸೂಕ್ತಕಾಲ ಅವಕಾಶ ಕೂಡಿ ಬಂದು ಆಗ ಸೂಕ್ಷ್ಮಾಣು ಜೀವಿಗಳು ಹುಟ್ಟಿಕೊಂಡವು.ಆ ಕಣಗಳು ನೀರು ಬತ್ತಿ ಭೂಮಿಗೆ ಸ್ಥಳಾಂತರಗೊಂಡಾಗ ಬಹುಕೋಶ ಜೀವಿಗಳು ವಿಕಾಸಗೊಂಡು ಇತರೆ ಪ್ರಾಣಿಗಳು-ಮನುಷ್ಯನನ್ನು ಒಳಗೊಂಡು ಬೃಹತ್ ಮತ್ತು ಸಂಕೀರ್ಣ ಜೀವಿಗಳು ಸೃಷ್ಟಿಯಾದವು ಎಂಬುದು ವಿಜ್ಞಾನದ ಸಿದ್ಧಾಂತ ಎಂದೆ.ಅದಕ್ಕೆ ಶಿವು
ಆದರೂ ನಮ್ಮ ಮನೆಯಲ್ಲಿ ನಮ್ಮ ಅಜ್ಜಿ “ಚಿತ್ತಿ ಮಳಿಯಾಗ ಕಪ್ಪಿ ಬಿಳ್ತಾವ” ಅಂತಾಳಲ್ಲ ಅದು ಖರೇನಾ! ಸುಳ್ಳೋ? ಪ್ರಸಾದ ಅಂದ.ಅದಕ್ಕೆ ನಾನು ನಂಗೊತ್ತಿಲ್ಲ ಪಾ ಇದು ಅವರಿಗೆ ಕೇಳ್ಬೇಕು ಅಂದೆ.ಆಗ ಪ್ರಾಣೇಶ್ ಮುಂದಾಡೋ ಮಾತನ್ನು ಗಮನಿಸಿ ನಮ್ಮ ಹಿರಿಯರು ಯಾವುದನ್ನು ಸುಮ್ಮನೆ ಹೇಳಿರುವುದಿಲ್ಲ ನಮ್ಮೆಲ್ಲ ಮಾತಿಗೂ ಆಚರಣೆಗಳಿಗೂ ಒಂದೊಂದು ವೈಜ್ಞಾನಿಕ ಹಿನ್ನೆಲೆ ಇರುತ್ತದೆ.ಬೇಕಿದ್ದರೇ ನಮ್ಮ ಪುರಾಣ-ಶಾಸ್ತ್ರಗಳನ್ನು ಓದು ಅದರಲ್ಲಿ ಎಷ್ಟೋ ಜನ ಹೆಣ್ಣು ಗಂಡು ಸಮ್ಮಿಲನವಿಲ್ಲದೇ,ಬರೀ ಗಂಡಿನಿಂದ, ಕಂಬಗಳಿಂದ,ಭೂಮಿಯಿಂದ,ಮರದ ಒನಕೆಯಿಂದ,ದೇವರ ಬೆವರಿನಿಂದ ಹುಟ್ಟಿದ್ದಾರೆ.ಇವರನ್ನೆಲ್ಲ ಅಯೋನಿಜರು ಎನ್ನುತ್ತಾರೆ.ಅಂತವರ ದೊಡ್ಡ ಪಟ್ಟಿಯನ್ನೇ ಕೊಡಬಲ್ಲೆ ನಾ ನಿನಗೆ.ಇದೀಗ ನಮ್ಮ ಮೋದಿ ಕೂಡ ಈ ಮಾತನ್ನೇ ಹೇಳುತ್ತಾರೆ.ನಾನು ಜೈವಿಕವಾಗಿ ಹುಟ್ಟಿಲ್ಲ ಅಂತ ಅವರೇನು ಸುಳ್ಳು ಹೇಳುತ್ತಾರೆಯೇ? ಅವರು ಸಹ ಕಪ್ಪೆ ಹಾಗೇ ಮೇಲಿಂದ ಉದುರಿ ಬಿದ್ದಿರಬಹುದು ಅಲ್ಲವೇ? ಅಂದ.ಈ ಮಾತಿಗೆ ಒಂದು ಕ್ಷಣ ದಿಗ್ಭ್ರಮೆಗೊಂಡು ಚಹಾದ ಕಪ್ಪನ್ನೇ ಕೆಳಗೆ ಒಗೆದು ಬಿಟ್ಟೆ.ಅರೆಕ್ಷಣ ಈ ಬಾಹ್ಯ ವಾಸ್ತವಿಕ ಪ್ರಪಂಚವೇ ನನಗೆನೂ ತೋಚಲಿಲ್ಲ.ಅಷ್ಟರಲ್ಲಿ ಪ್ರಾಣೇಶ್ ಹೋಗಿದ್ದು ಗೊತ್ತೇ ಆಗ್ಲಿಲ್ಲ ಕಡೆಗೆ ಶಿವು ಚಹಾದ ಕಪ್ ಮತ್ತು ಚಹಾದ ಬಿಲ್ಲ್ ಕೊಟ್ಟು.ಬಾ ಹೋಗೋಣ ಎಂದಾಗ ಇಬ್ಬರೂ ಏನನ್ನು ಮಾತನಾಡದೇ ರೂಮಿಗೆ ವಾಪಸ್ಸಾದೀವಿ.
-ಪ್ರಸಾದ ಗುಡ್ಡೋಡಗಿ
ಬಿ.ಎ.ದ್ವಿತೀಯ ವರ್ಷ
ಕರ್ನಾಟಕ ಕಾಲೇಜು ಧಾರವಾಡ