ಜೀವ ಬಂಡಿಯು ಸಾಗಿ ಮುಂದಿನ ಊರಿಗೂ ಹೋಗಿ ಕತ್ತಲೆಯಲ್ಲಿ ಗಾಲಿಯ ಕೀಲ ಕಳೆದಾಗ ಕವಿತೆ ಹುಟ್ಟಿತು
ಚಂದದ ಬಾಳು ನಡೆಸಿ ಅಂದದ ಮಕ್ಕಳ ಹುಟ್ಟಿಸಿ ಜೀವನವೇ ಕಷ್ಟವಾದಾಗ ಕವಿತೆ ಹುಟ್ಟಿತು ಮದ್ಯಪಾನವ ಕುಡಿದು ತುಂಡುಮಾಂಸವ ಕಡಿದು ಮಧ್ಯರಾತ್ರಿ ಮಡದಿ ಮನೆ ಬಿಟ್ಟು ಹೋದಾಗ ಕವಿತೆ ಹುಟ್ಟಿತು
ಆದಘಟನೆಯ ನೆನೆದು ಪಾಪ ಕೊಳೆಯನು ತೊಳೆದು ಮಂಕು ಬಡಿದ ಮನಕೆ ಅರಿವುಆದಾಗ ಕವಿತೆ ಹುಟ್ಟಿತು
ನಾನು ಎಂಬುದು ಮರೆತು ನನ್ನದು ಎಂಬುದು ಅರಿತು ಕಷ್ಟವನು ಸಹಿಸಿದಾಗ ಕವಿತೆ ಹುಟ್ಟಿತು
ಬಾಳದೋಣಿಯು ಸಾಗಿ ಜೀವಕಡಲಿಗೆ ಹೋಗಿ ಅಂತರಾಳದಿಂದ ಮೇಲೆದ್ದಾಗ ಕವಿತೆ ಹುಟ್ಟಿತು.
-ಪಿಬಿ ಕಮ್ಮಾರ ಐಹೊಳೆ