ಸೆಲ್ಫಿ ಹುಚ್ಚು ಯುವಕ ಯುವತಿಯರಲ್ಲಿ ಹೆಚ್ಚು.
ಬೆಳಗಾಯಿತು ಎಂದರೇ ಮೊಬೈಲ್ ಹುಚ್ಚು
ಕೈಗೆ ಸಿಕ್ಕಾರಂತೂ ಬಿಡಲಾರದ ಹುಚ್ಚು.
ಸೆಲ್ಫಿ ಹುಚ್ಚು ನಮಗೆ ಕುತ್ತು.
ಆದರೂ ಇರಲಾರದೆ ಜೀವನ ಸಾಗುತಿದೆ ಇವತ್ತು.
ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರಲ್ಲಿ ಮೊಬೈಲ್ ಗಳ ಹಾವಳಿ ಹೆಚ್ಚುತ್ತಿದೆ. ಅವರ ಜೀವನವೇ ಮೊಬೈಲ್ ಎಂಬ ಮನಸ್ಥಿತಿಗೆ ಬಂದಿದ್ದಾರೆ. ಮೊಬೈಲ್ ಇಲ್ಲದೆ ಪ್ರಪಂಚವಿಲ್ಲ ಎಂಬಂತಹ ಗೀಳು ಯುವಜನತೆಯನ್ನ ಕಾಡುತ್ತಿದೆ. ಅಪ್ಪ ಅಮ್ಮನ ಗೋಳು ಹಿಡಿದು ಮೊಬೈಲ್ ಪಡೆದು, ಫ್ರೆಂಡ್ಸ್ ಜೊತೆ ರೀಲ್ಸ್ ಮಾಡುತ್ತಾ ಕಾಲ ಕಳೆಯುವ ಪ್ರಸಂಗ ಬಂದಿದೆ. ನಾವು ಪ್ರತಿ ನಿತ್ಯ ದಿನಗಳಲ್ಲಿ ಕೆಲವೊಂದು ಸನ್ನಿವೇಶಗಳ ಅನುಗುಣವಾಗಿ ಸೆಲ್ಫಿಗಳನ್ನು ತೆಗೆದುಕೊಳ್ಳುವಂತಹ ಸನ್ನಿವೇಶಕ್ಕೆ ಹೋಗುತ್ತೇವೆ. ಆಗ ಕೆಲವೊಂದು ಘಟನೆಗಳು ನಡೆದು ಹೋಗುತ್ತವೆ. ಆಗ ನಮ್ಮ ಜೀವನ ಕೂಡ ಹಾಳಾಗುವ ಸನ್ನಿವೇಶ ಉಂಟು.ಮೋಜು ಮಸ್ತಿಗಾಗಿ ಮೊಬೈಲ್ ಅಲ್ಲ ಕೆಲವನ್ನು ಸನ್ನಿವೇಶಕ್ಕೆ ಮಾತ್ರ ಉಪಯೋಗಿಸಬೇಕೆ ಹೊರತು ಜೀವನ ಅಂತ್ಯಕ್ಕೆ ಅಲ್ಲ. ಹಾಗಾಗಿ ಈಗಿನ ಸನ್ನಿವೇಶದಲ್ಲಿ ಯುವಜನತೆಯನ್ನ ದಾರಿ ತಪ್ಪುವ ಹಂತದಿಂದ ಸರಿ ದಾರಿಗೆ ತರುವ ಪ್ರಯತ್ನ ಮಾಡಬೇಕಾಗಿದೆ.
-ಚಂದ್ರಶೇಖರಚಾರ್ ಎಂ,ವಿಶ್ವಮಾನವ ಶಾಲೆ,ಸಿಬಾರ ಗುತ್ತಿ ನಾಡು,ಚಿತ್ರದುರ್ಗ