ಕೊಪ್ಪಳ/ಯಲಬುರ್ಗಾ:ಮಾದಕ ವಸ್ತುಗಳ ದಿನಾಚರಣೆ ಅಂಗವಾಗಿ ತಾಲೂಕಿನ ಕರಮುಡಿ ಗ್ರಾಮದ ಎಸ್.ಎಸ್.ಕಂಪಗೌಡ್ರ ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ಥ ಸಂಕಲ್ಪ,ಶಾಲಾ ಮಕ್ಕಳಿಗೆ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಧೋಳ ವಲಯದ ಕಾರ್ಯಕ್ರಮ ಜೂ.೨೯ ರಂದು ಕರಮುಡಿಯಲ್ಲಿ ಜರುಗಿತು.ಮದ್ಯಪಾನ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ ಆದ್ದರಿಂದ ದುಶ್ಚಟದಿಂದ ದೂರವಿರಬೇಕೆಂದು ಎಂದು ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯೆ ಶಕುಂತಲಾದೇವಿ ಮಾಲಿಪಾಟೀಲ ಅವರು ಸಸಿಗೆ ನೀರು ಹಾಕಿ ಮಾತನಾಡಿದರು.
ಕಳ್ಳ ಹೊಕ್ಕ ಮನೆ ಉಳಿಯಬಹುದು ಕೊಳ್ಳಿ ಹೊಕ್ಕ ಮನೆ ಉಳಿಯುವದಿಲ್ಲ,ಮದ್ಯಪಾನ, ಮಾದಕ ವಸ್ತುಗಳು ಕೊಳ್ಳಿ ಇದ್ದ ಹಾಗೆ ಇವುಗಳಿಂದ ದೂರವಿದ್ದಾಗ ಸುಂದರ ಸಮಾಜ ನಿರ್ಮಿಸಲು ಸಾಧ್ಯ ಎಂದು ಅಖಿಲ ಕರ್ನಾಟಕ ಕೊಪ್ಪಳ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ದಾನಕೈ ಅವರು ಮಾತನಾಡಿದರು.ಮಾದಕ ವಸ್ತುಗಳಿಗೆ ಬಲಿಯಾಗಬೇಡಿ ಉತ್ತಮ ಸಮಾಜ ಕಟ್ಟುವಲ್ಲಿ ಪ್ರತಿಯೋಬ್ಬರು ಶ್ರಮಿಸಬೇಕು,ರೋಗ ರುಜಿನಗಳು ಬರುವ ಮನ್ನವೇ ಔಷಧವನ್ನು ತೆಗೆದುಕೊಳ್ಳಬೇಕು ರೋಗ ಬಂದಾಗ ಆರೋಗ್ಯ ಕಾಪಾಡಿಕೊಳ್ಳುವದು ಅಸಾಧ್ಯವಾದದು ಆದ್ದರಿಂದ ಜಾಗೃತಿವಹಿಸ ಬೇಕು ಎಂದು ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ವೀರಣ್ಣ ನಿಂಗೋಜಿ ಅವರು ಹೇಳಿದರು.ಚಟಗಳ ದಾಸರಾದರೆ ರೋಗ ರುಜಿನಗಳೊಂದಿಗೆ ಅಂಟಿಕೊಂಡರೆ ನಮಗೆ ಸಾವು ತಪ್ಪಿದ್ದಲ್ಲ,ಜನಜಾಗೃತಿ ಮೂಡಿಸುವ ಇಂತಹ ಕಾರ್ಯಗಳಿಗೆ ಕೈ ಜೋಡಿಸಿ ಯಶಸ್ವಿಗೊಳಿಸಬೇಕು ಎಂದು ಮುಖ್ಯೋಪಾಧ್ಯಾಯ ಬಸವರಾಜ ಕರಾಟೆ ಅವರು ಮಾತನಾಡಿದರು.ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಆರ್ಥಿಕ,ಸಾಮಾಜಿಕ, ಧಾರ್ಮಿಕವಾಗಿ ಜನಜಾಗೃತಿ ಮೂಡಿಸಿ,ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ಮಾಡುತ್ತಿರುವ ಕಾರ್ಯ ಅಮೋಘವಾದದು ಎಂದು ಎಸ್.ಡಿ.ಎಂ.ಸಿ.ಅಧ್ಯಕ್ಷ ಶ್ಯಾಮೀದಸಾಬ ಮುಲ್ಲಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರತಿ ವರ್ಷ ಮಾದಕ ವಸ್ತುಗಳ ದಿನಾಚರಣೆ ಅಂಗವಾಗಿ ನಮ್ಮ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ ನಿಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಲು ಸಾಧ್ಯ ಎಂದು ಮುಧೋಳ ವಲಯದ ಮೇಲ್ವಿಚಾರಕ ರುದ್ರಪ್ಪ ಕುಬ್ಯಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮದ್ಯಪಾನವನ್ನು ನಾವು ಕುಡಿದರೆ,ಮದ್ಯವು ನಮ್ಮನ್ನು ಕುಡಿಯುತ್ತದೆ ಅದ್ದರಿಂದ ಜಾಗೃತಿ ವಹಿಸ ಬೇಕು ಎಂದು ಶಿಕ್ಷಕ ಬಸವರಾಜ ಕೊಂಡಗುರಿ ಹೇಳಿದರು.ಈ ವೇಳೆ ಸೇವಾ ಪ್ರತಿನಿಧಿ ಪ್ರೇಮಾ ಕರಮುಡಿ,ಎಸ್.ಡಿ.ಎಂ.ಸಿ ಸದಸ್ಯರಾದ ದೇವಮ್ಮ ರಾಟಿ,ಕಳಕಮ್ಮ ಬಾವುರ,ಶಿಕ್ಷಕರಾದ ವೆಂಕಟೇಶ ಪಾಟೀಲ್,ಶರಣಪ್ಪ ಮೂಗನೂರ,ವೀರಮ್ಮ ನಿಡಶೇಸಿ,ವಿಜಯಲಕ್ಷ್ಮಿ ಚೌಡಿ ಸೇರಿದಂತೆ ಇತರರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.