ಕೊಪ್ಪಳ :ನಮ್ಮ ದಿನ ನಿತ್ಯ ಜೀವನದಲ್ಲಿ ಗಣಿತ ಬಹಳ ಮಹತ್ವ ಪಾತ್ರ ವಹಿಸುತ್ತದೆ ಎಂದು ಗಂಗಾವತಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಇಮಾನ್ ವೆಲ್ ಸಂಜಯನಂದ ಅವರು ಹೇಳಿದರು.
ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರದಂದು ಕಾಲೇಜಿನ ಆಂತರಿಕ ಗುಣಮಟ್ಟ ಬರವಶೆ ಕೋಶ ಹಾಗೂ ಗಣಿತಶಾಸ್ತ್ರ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನ್ಯೂಮಾರಿಕಲ್ ಇಂಟೆಗ್ರೇಷನ್ ಮೆಥೆಡ್ಸ್ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಹೊಸ ಯೋಚನೆಗಳು ಮತ್ತು ಸಾಮಾನ್ಯ ವಿಚಾರಗಳು ನಮಗೆ ಅರ್ಥ ಮಾಡಿಕೊಳ್ಳುವುದಕ್ಕೆ ಗಣಿತಶಾಸ್ತ್ರ ಸಹಾಯವಾಗುತ್ತದೆ.
ಗಣಿತವನ್ನು ನಾವು ಆಸಕ್ತಿಯಿಂದ ಕಲಿತರೆ ಅದು ಬಹಳ ಸುಲಭವಾಗಿ ಅರ್ಥವಾಗುತ್ತದೆ. ಆದ್ದರಿಂದ ವಿದ್ಯಾರ್ಥಿನಿಯರು ತರಗತಿಗಳಲ್ಲಿ ಗಣಿತ ಪಾಠವನ್ನು ತಪ್ಪದೇ ಕೇಳಿ.
ಗಣಿತಶಾಸ್ತ್ರ ಕಲಿತರೆ ಸರಕಾರಿ ಉದ್ಯೋಗಗಳ ಸ್ಪರ್ಧೆತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುತ್ತದೆ.
ಗಣಿತದಿಂದ ಖಾಸಗಿ ಕಂಪನಿಗಳಲ್ಲಿ ಬಹಳಷ್ಟು ಉದ್ಯೋಗಗಳು ಸಿಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಗಣಪತಿ ಲಮಾಣಿ ಅವರು ಈ ರೀತಿಯ ವಿಶೇಷ ಉಪನ್ಯಾಸಗಳನ್ನು ವಿದ್ಯಾರ್ಥಿನಿಯರು ಉಪಯೋಗ ಮಾಡಿಕೊಳ್ಳಬೇಕು.
ವಿಶೇಷ ಉಪನ್ಯಾಸಗಳನ್ನು ಕೇಳುವುದರಿಂದ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಜ್ಞಾನ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿಜ್ಞಾನ ವಿಭಾಗದ ಸಂಯೋಜಕರಾದ ಶ್ರೀ ವಿಠೋಬ ಅವರು ಪ್ರಾಸ್ತವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಶ್ರೀ ಮತಿ ಸುಷ್ಮಾ ದೇಶಪಾಂಡೆ, ಬಸವರಾಜ್,ಯಶೋಧ, ಪಲ್ಲವಿ, ಮಂಜಳ, ಹನುಮವ್ವ, ವಿದ್ಯಾ ಜಂಗಿನ ಹಾಗೂ ವಿದ್ಯಾರ್ಥಿನಿಯರು ಇದ್ದರು.
ಸುಷ್ಮಾ ದೇಶಪಾಂಡೆ ನಿರೂಪಿಸಿದರು,
ಯಲ್ಲಮ್ಮ ಸ್ವಾಗತಿಸಿದರು. ಫರಹತ್ ಭಾನು ವಂದಿಸಿದರು. ಭೂಮಿಕಾ ಮತ್ತು ಗಿರಿಜಾ ಪ್ರಾರ್ಥನೆ ಗೀತೆ ಹಾಡಿದರು.