ಮಹಿಳೆ ಹೋರಾಟ ಪರಿಶ್ರಮ ತ್ಯಾಗ ಬಲಿದಾನದಿಂದ ತನ್ನದೆಯಾದ ಛಾಪು ಮೂಡಿಸಿದ್ದಾಳೆ.
ವೈದ್ಯಕೀಯ ಶಿಕ್ಷಣ ಸಾಹಿತ್ಯ ಚಲನಚಿತ್ರ ರಾಜಕಾರಣ ಹೀಗೆ ಸಾಧನೆಯ ಹಾದಿಯಲ್ಲಿ ಸಾಗಿದವರು ಅನೇಕರು ಅದೇ ರೀತಿ ಅಪರೂಪದಲ್ಲಿ ಅಪರೂಪದ ವೃಕ್ತಿ ಪರಿಸರವಾದಿ ಪದ್ಯಶ್ರೀ ಡಾ. ಸಾಲುಮರದ ತಿಮ್ಮಕ್ಕ ಸಹ ಒಬ್ಬರು.
ಬಾಳಿ ಬೆಳಗಿದ ವಚನಕಾರ ಶಿವಶರಣ ಛಲವಾದಿ ಶಿವನಾಗಮಯ್ಯ ಚಿತ್ರದುರ್ಗ ಕೋಟೆ ರಕ್ಷಣೆ ಮಾಡಿದ ವೀರ ಮಹಿಳೆ ಒನಕೆ ಓಬವ್ವ ಕಿತ್ತೂರ ರಾಣಿ ಚೆನ್ನಮ್ಮ ಗಡಿನಾಡಿನಲ್ಲಿ ಕನ್ನಡ ನಾಡು ನುಡಿಗಾಗಿ ಹೋರಾಟ ಮಾಡಿದ ಡಾ.ಜಯದೇವಿತಾಯಿ ಲಿಗಾಡೆ ಬೆಳವಡಿ ಮಲ್ಲಮ್ಮಯಂತಹ ವೀರ ಧೀರ ಮಹಿಳೆಯರು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.
ಛಲವಾದಿ ಜನಾಂಗದ ಚಿಕ್ಕರಂಗಯ್ಯಾ ವಿಜಿಯಮ್ಮ ದಂಪತಿಗಳ ಎರಡನೆಯ ಪುತ್ರಿ ಸಾಲು ಮರದ ತಿಮ್ಮಕ್ಕ ಯವರು ವೃಕ್ಷಮಾತೆ ವನಸಿರಿ ನಿಸರ್ಗ ಪ್ರೇಮಿ ಬಿರುದಿಗೆ ಹೆಸರಾದವರು.
ಇಂದು ಯುವ ಜನಾಂಗಸಣ್ಣ ಸಣ್ಣ ಸಮಸ್ಯೆಗಳಿಗೆ ಅಂಜಿ ಆತ್ಮಹತ್ಯೆಗೆ ಶರಣಾಗುತ್ತಿರುವ ಹೇಡಿಗಳಿಗೆ
ಸಾಲುಮರದ ತಿಮ್ಮಕ್ಕ ಆದರ್ಶ ಹಾಗೂ ಸ್ಪೂರ್ತಿ. ಜೀವನದಲ್ಲಿ ನಡೆದ ಅನೇಕ ಘಟನೆಗಳು ದುಃಖ,ನಿರಾಶೆ,ಅವಮಾನ,ಅಪಮಾನ ಎದುರಿಸಿ ಸಾಲು ಮರದ ತಿಮ್ಮಕ್ಕ ಕರುನಾಡಿನ ವನ ಮಾತೆಯೆಂದರೆ ತಪ್ಪಾಗಲಾರದು.
ತಿಮ್ಮಕ್ಕ ತನ್ನ ಸಾಕು ಮಗ ಉಮೇಶ ಜೊತೆಯಲ್ಲಿ ಇದ್ದಾರೆ. ಸಸ್ಯ ವಿಜ್ಞಾನಿಗಳ ಲೆಕ್ಕಚಾರದಂತೆ ತಿಮ್ಮಕ್ಕ ಬಿಕ್ಕಲು ಚಿಕ್ಕಯ್ಯ ಬೆಳೆಸಿರುವ ಮರದ ಜೀವಿತಾವಧಿ ಒಂದು ಕೋಟಿ ಎಪ್ಪತೈದು ಲಕ್ಷ ರೂಪಾಯಿಗಳಾದರೆ ಇಂದು ಬೆಳೆದ ಹೆಮ್ಮರವಾಗಿರುವ ಸುಮಾರು 284 ಮರಗಳ ಒಟ್ಟು ಬೆಲೆ 497 ಕೋಟಿ ಇದರ ಒಡತಿ ತಿಮ್ಮಕ್ಕ ಚಿಕ್ಕಯ್ಯ ಇದೆನ್ನಲ್ಲಾ ಲೋಕಾಪ೯ಣೆ ಮಾಡಿರುವುದು ಅವರ ಅಪೂರ್ವ ತ್ಯಾಗಕ್ಕೆ ಹಿಡಿದ ಕನ್ನಡಿ ವಾತಾವರಣವನ್ನು ತೆಂಪಾಗಿಸಿವೆ. ನೂರಾರು ಸಾವಿರಾರು ಪಶುಪಕ್ಷಿಗಳಿಗೆ ಕ್ರಿಮಿಕೀಟಗಳಿಗೆ ಜೀವಜಂತುಗಳಿಗೆ ಸಕಲ ಪ್ರಾಣಿ ಸಂಕುಲ ಸಂತಸದಿಂದ ಬದುಕಲು ಪ್ರೇರಕ ಶಕ್ತಿಯೆಂದರೆ ತಪ್ಪಗಲಾರದು.
ಗಿಡ ಮರಗಳು ಜುಳು ಜುಳು ಹರಿಯುವ ಹಳ್ಳಕೊಳ್ಳತೊರೆ ನದಿಗಳು ಸಮುದ್ರ ಸಾಗರಗಳು ಬೆಟ್ಟಗುಡ್ಡಗಳು ಗಿರಿಶಿಖರಗಳು ವ್ಯಕ್ತಿಯ ಹುಟ್ಟಿನಿಂದ ಚಟ್ಟದವರೆಗೂ ಒಂದಿಲ್ಲೊಂದು ಪ್ರಭಾವ ಬೀರುತ್ತದೆ ವೃಕ್ತಿಯ ಕಣ ಕಣದಲ್ಲಿ ನಿಸರ್ಗದ ಋಣವಿರುತ್ತದೆ ಅದನ್ನು ತೀರಿಸಿದಾಗ ಮಾತ್ರ ಮಾನವ ಮಹಾತ್ಮಾರಾಗಿರುವುದು ಅವರ ಸಾಧನೆಗೆ ಸಾಕ್ಷಿ
ಪ್ರಶಸ್ತಿ ಗೌರವಗಳು.
೧) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
೨) ನಾಡೋಜ ಪ್ರಶಸ್ತಿ
೩)ಪದ್ಮಶ್ರೀ ಪ್ರಶಸ್ತಿ
೪) ರಾಷ್ಟ್ರೀಯ ಪೌರಪ್ರಶಸ್ತಿ
೫) ವೀರ ಚಕ್ರಪ್ರಶಸ್ತಿ
೬) ಮಹಿಳಾಮತ್ತು ಶಿಶು ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಇವರಿಂದ ಮಾನ್ಯತೆಯ ಪ್ರಮಾಣ ಪತ್ರ
೭)ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಶ್ಲಾಘನೀಯ ಪ್ರಮಾಣ ಪತ್ರ
೮) ಕರ್ನಾಟಕ ಕಲ್ಲವಲ್ಲಿ ಪ್ರಶಸ್ತಿ
೯) ಇಂಡಿಯನ್ ಆಪ್ಟ್ ದಿ ಇಯರ ಕ್ಲೆಮ್ಯಾಟ ವಾರಿಯರ್ ಪ್ರಶಸ್ತಿ
೧೦) ಮಾಗಡಿ ವ್ಯಕ್ತಿ ಪ್ರಶಸ್ತಿ
೧೧) ಶ್ರೀ ಮಾತಾ ಪ್ರಶಸ್ತಿ
೧೨) ಎಚ್ ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ
೧೩) ಪಂಪಾ ಪತಿ ಪರಿಸರ ಪ್ರಶಸ್ತಿ
೧೪) ಮಹಿಳಾ ರತ್ನ ಪ್ರಶಸ್ತಿ
೧೫) ವಿಶ್ವಾತ್ಮ ಪುರಸ್ಕಾರ
೧೬) ವಿಶಾಲಾಕ್ಷಿ ಪ್ರಶಸ್ತಿ ಹೀಗೆ ಹತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಸಾಧನೆಯನ್ನು ಗಮನಿಸಿ ಗೌರವಿಸಿವೆ. ಅಲ್ಲದೆ ಮುಂದಿನ ಜನಾಂಗಕ್ಕೆ ಒಳತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿರುವ ಇವರ ನಿಸ್ವಾರ್ಥ ಸೇವೆಗಾಗಿ ಭಾರತದ ರಾಷ್ಟ್ರೀಯ ಪೌರಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅದೇ ರೀತಿ ಅಮೇರಿಕಾ ಸಂಯುಕ್ತ ಸಂಸ್ಥಾನ ಲಾಸ್ ಏಂಜಲೇಸ್ ಮತ್ತು ಓಕ್ಲ್ಯಾಂಡ್, ಕ್ಯಾಲಿಪೋನಿ೯ಯಾಗಳಲ್ಲಿ ಪರಿಸರ ಶಿಕ್ಷಣಕ್ಕಾಗಿ ಸಂಪನ್ಮೂಲಗಳು ಪರಿಸರವಾದಿ ಸಂಘಟನೆ ಗೆ ತಿಮ್ಮಕ್ಕ ಹೆಸರು ಇಡಲಾಗಿದೆ.
112 ವಯಸ್ಸಿನ ಸಾಲು ಮರದ ತಿಮ್ಮಕ್ಕ ಅವರಿಗೆ ಕರುನಾಡು ಹಾಗೂ ಗಡಿನಾಡಿನ ಕನ್ನಡಿಗರ ವತಿಯಿಂದ ತುಂಬು ಹೃದಯದ ಅಭಿನಂದನೆಗಳು.
ಲೇಖಕರು-ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ,ಮಹಾರಾಷ್ಟ್ರ,