ಯಲಬುರ್ಗಾ:ಪತ್ರಕರ್ತರಿಗೆ ಕನಿಷ್ಟ ವೇತನ ನೀಡಬೇಕು,ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡುವುದಾಗಿ ಭರವಸೆ ನೀಡಿ,ರಾಜ್ಯ ಸರ್ಕಾರ ಈ ಸೌಲಭ್ಯ ಜಾರಿಗೆ ತರಲು ಹಲವು ಕಠಿಣ ನಿಯಮಗಳನ್ನು ವಿಧಿಸುತ್ತಿರುವುದು ಸಮಂಜಸವಲ್ಲ ಎಂದು ಕರ್ನಾಟಕ ಪತ್ರಕರ್ತರ ಧ್ವನಿ ಸಂಘಟನೆ – ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರು ಹೇಳಿದರು.
ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅವರಣದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ರಂಗದಲ್ಲಿ ಸೇವೆ ಮಾಡಿದವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮಹತ್ವವಾದದು,ಪತ್ರಕರ್ತರಿಗೆ ಸರಿಯಾಗಿ ನ್ಯಾಯ ಸಿಗಬೇಕು,ಅವರ ಕುಟುಂಬಕ್ಕೆ ಸಹಾಯ ಸಹಕಾರ ಸಿಗುವಂತೆ ಕ್ಷೇಮನಿಧಿಯನ್ನು ಸ್ಥಾಪಿಸುವದಾಗಿ ಹೇಳಿದರು.ಆಸೆ ಆಮಿಷೆಗಳಿಗೆ ಬಲಿಯಾಗದೆ ನೇರ ನಿಷ್ಠುರ ವರದಿ ಮಾಡಿದಾಗ,ನಮ್ಮ ತಾಲೂಕು,ಜಿಲ್ಲೆ ಅಭಿವೃದ್ಧಿ ಆಗುತ್ತದೆ ಆಗ ನಾವು ಉತ್ತಮ ವರದಿಗಾರರಾಗಲು ಸಾಧ್ಯ ಎಂದರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಅವರು ಮಾತನಾಡಿ, ಪತ್ರಕರ್ತರಿಗೆ ವಾಸ್ತವದ ಆಗು ಹೋಗುಗಳ ಅರಿವು ಅತಿ ಮುಖ್ಯವಾಗಿದ್ದು, ಅಧ್ಯಯನದಿಂದ ಮಾತ್ರ ಇದು ಸಾಧ್ಯ ಎಂದರು.ಸರ್ಕಾರ ವಿವಿಧ ಇಲಾಖೆಗಳಿಗೆ ಲೆಕ್ಕವಿಲ್ಲದಷ್ಟು ಅನುದಾನ ನಿಡುತ್ತದೆ ಆದರೆ ಪತ್ರಕರ್ತರು ತಮ್ಮ ಜೀವನದ ಹಂಗು ತೊರೆದು ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಾರೆ ಇವರ ಸೇವೆ ಅಪಾರವಾದದು ಇವರಿಗೆ ನಾವೆಲ್ಲರೂ ಸಹಕಾರ ನೀಡಿದಾಗ ಪತ್ರಕರ್ತರು,ಪತ್ರಿಕೆಗಳು ಬೆಳೆಯಲು ಸಾದ್ಯ ಎಂದು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಶಿವಶಂಕರ ದೇಸಾಯಿ ಅವರು ಮಾತನಾಡಿದರು. ಪತ್ರಕರ್ತರು ಒಂದು ಗ್ರಾಮಕ್ಕೆ ಹೋಗಿ ಸುದ್ದಿ ಮಾಡುವಾಗ ಅವರಿಗೆ ಬೈಕ್ ನಲ್ಲಿ ಪೆಟ್ರೋಲ್ ಇರುವುದಿಲ್ಲ ಅಂತಹ ಸಮಯದಲ್ಲಿ ಅವರು ಕಷ್ಟವನ್ನು ಅನುಭವಿಸುತ್ತಾರೆ ಇವರ ಸೇವೆ ಜಿಲ್ಲೆಗೆ, ರಾಜ್ಯಕ್ಕೆ ಪತ್ರಕರ್ತರ ಕೊಡುಗೆ ಅಪಾರವಾಗಿದೆ ಎಂದು ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ ಮಾತನಾಡಿದರು.
ತಾ.ಪಂ.ಇಓ ಸಂತೋಷ ಬೀರದಾರ ಪಾಟೀಲ್, ಯುವ ಧುರೀಣ ಅರವಿಂದಗೌಡ ಪಾಟೀಲ್,ಸಹಾಯಕ ನಿರ್ದೇಶಕ ಕಟ್ಟಿಮನಿ, ಕಸಾಪ ತಾಲೂಕ ಅಧ್ಯಕ್ಷ ಬಾಲದಂಡಪ್ಪ ತಳವಾರ, ಅಕ್ಷರ ದಾಸೋಹ ಸಹಾಯಕ ನಿರ್ದೆಶಕ ಎಫ್.ಎಂ.ಕಳ್ಳಿ, ಸಾರಿಗೆ ಘಟಕ ವ್ಯವಸ್ಥಾಪಕ ರಮೇಶ ಚಿಣಗಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶಪಾಲ ಸೌಭಾಗ್ಯ, ಶಿಕ್ಷಕರುಗಳಾದ ಹನಮಂತಪ್ಪ ಉಪ್ಪಾರ, ಕಲ್ಲಿನಾಥಯ್ಯ ಶಾಸ್ತ್ರೀ,ಮುಖಂಡರಾದ ಯಮನೂರಪ್ಪ ತಳವಾರ, ಶರಣಪ್ಪ ಅರಕೇರಿ,ಸುರೇಶಗೌಡ ಶಿವನಗೌಡ್ರ, ಸಾಹಿತಿ ಹನಮಂತಪ್ಪ ವಡ್ಡರ ಶಾವಂತ್ರಮ್ಮ ಚನ್ನವೀರಪ್ಪ ಅಂಗಡಿ,ಕಾವ್ಯ ಹೊಸಪೇಟೆ,ಬಸವರಾಜ ಮರದ, ಪ.ಪಂ. ಸದಸ್ಯರುಗಳಾದ ವಸಂತ ಭಾವಿಮನಿ, ಅಮರೇಶ ಹುಬ್ಬಳ್ಳಿ,ಕಳಕಪ್ಪ ತಳವಾರ ಹಾಗೂ ತಾಲೂಕಾ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಗೌರವ ಅಧ್ಯಕ್ಷ ಶರಣಬಸಪ್ಪ ದಾನಕೈ, ಅಧ್ಯಕ್ಷ ಶ್ರೀಕಾಂತಗೌಡ ಪಾಟೀಲ್, ಕಾರ್ಯದರ್ಶಿ ಮಲ್ಲಿಕಾರ್ಜುನ ಹಡಪದ,ಉಪಾಧ್ಯಕ್ಷ ಹುಸೇನಸಾಬ ಮೋತೆಖಾನ, ಖಜಾಂಚಿ ಸಿ.ಎ.ಆದಿ, ಸಂಘಟನೆ ಬಳಗದ ವ್ಹಿ.ಎಸ್.ಶಿವಪ್ಪಯ್ಯನಮಠ, ಶ್ರೀಕಾಂತ ಅಂಗಡಿ, ನೀಲಪ್ಪ ಖಾನವಳಿ, ಶ್ಯಾಮೀದಸಾಬ ತಾಳಕೇರಿ, ಬಸವರಾಜ ಮುಂಡರಗಿ,ಮೌನೇಶ ಮದ್ಲೂರ, ಬಸವರಾಜ ಕಳಸಪ್ಪನವರ, ಹಾಗೂ ಕಾ.ನಿ.ಪ ಧ್ವನಿ ಸಂಘಟನೆಯ ಕುಕನೂರ ಘಟಕದ ಅಧ್ಯಕ್ಷ ಸುನೀಲ್ ಕುಮಾರ ಮಠದ, ಕಾರ್ಯದರ್ಶಿ ವೀರೇಶ ಆಡೂರ,ಯಲಬುರ್ಗಾ ಮತ್ತು ಕುಕನೂರ ತಾಲೂಕಿನ ಸದಸ್ಯರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.