ಉತ್ತರ ಕನ್ನಡ/ ಮುಂಡಗೋಡ:ಶ್ರೀ ಸತ್ಯ ಸಾಯಿ ಯೂನಿವರ್ಸಿಟಿ ಆಫ್ ಹ್ಯೂಮನ್ ಎಕ್ಸೆಲೆನ್ಸ್ ಕಲಬುರಗಿ ವಿಶ್ವವಿದ್ಯಾಲಯದ ಮುದ್ದೇಬಿಹಾಳ ಅಧ್ಯಯನ ಕೇಂದ್ರದಲ್ಲಿ ಎಂ ಎ ಇನ್ ಎಕನಾಮಿಕ್ಸ್ ನಲ್ಲಿ ಓದುತ್ತಿರುವ ಮುಂಡಗೋಡ ದ ಅಮೃತ್ ತುಕಾರಾಂ ಕಲಾಲ್ ವಿಶ್ವವಿದ್ಯಾಲಯದ ಮೂರನೇ ವರ್ಷದ ಘಟಿಕೋತ್ಸವ ದಲ್ಲಿ ನೀಡಲಾಗುವ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ, 2013 ರಿಂದ ಮುದ್ದೇಬಿಹಾಳದ ಕ್ಯಾಂಪಸ್ ನಲ್ಲಿ ಓದುತ್ತಿರುವ ಅಮೃತ್ ಶೈಕ್ಷಣಿಕ ಸಾಧನೆ ಮಾಡುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದು, ಚಿನ್ನದ ಪದಕ ಗಳಿಸಿದ್ದಕ್ಕೆ ಪೋಷಕರು ಹಾಗೂ ಶಿಕ್ಷಕ ವೃಂದ ಸಂತಸ ವ್ಯಕ್ತಪಡಿಸಿದ್ದಾರೆ.
