ಕೊಪ್ಪಳ/ಕುಷ್ಟಗಿ:ಸಾರ್ವಜನಿಕ ಹಿತಾಸಕ್ತಿ ದೂರನ್ನು ನೀಡಿದ್ದರೂ ಸಹ ಅನಾಮಧೇಯ ನಕಲಿ ವೈದ್ಯ ಪ್ರಶಾಂತ ತಂ.ಹರಿಪದ ದ್ಯಾಮವ್ವ ದೇವಿ ದೇವಸ್ಥಾನ ಹತ್ತಿರ ಸಾ. ಕುಷ್ಟಗಿ ರವರು ದಿ 27-೦7-2024 ರಂದು ನಕಲಿ ವೈದ್ಯ ಮತ್ತೆ ಮನೆಯಲ್ಲಿ ಕ್ಲಿನಿಕ್ ಪ್ರಾರಂಭಮಾಡಿದ್ದಾರೆ.
ಇದರಿಂದ ತಾಲ್ಲೂಕ ಆರೋಗ್ಯ ಅಧಿಕಾರಿಗಳ ನೋಟಿಸ್ ಗೆ ಹಾಗೂ ಯಾರ ಭಯವಿಲ್ಲದೆ ಮನೆ ಕ್ಲಿನಿಕ್ ಪ್ರಾರಂಭಮಾಡಿರುವುದು ಭಾರೀ ಅನುಮಾನವುಂಟುಮಾಡುತ್ತಿದೆ.
ಈ ನಕಲಿ ವೈದ್ಯನಿಂದಾಗಿ ಜನರಿಗೆ ಅಡ್ಡ ಪರಿಣಾಮವಾಗಿ ಸಾವನ್ನಪ್ಪಿದ್ದರೆ ಯಾರು ಜವಾಬ್ದಾರಿ? ಇದರ ಬಗ್ಗೆ ಏಕೆ ಕ್ರಮ ಜರುಗಿಸಲು ಯಾರೂ ಕೂಡಾ ಮುಂದೆ ಬರುತ್ತಿಲ್ಲ? ತಾಲ್ಲೂಕ ಆರೋಗ್ಯ ಅಧಿಕಾರಿಗಳು ಏಕೆ ಹಿಂಜರಿಯುತ್ತಿದ್ದಾರೆ?
ತಕ್ಷಣ ಕ್ಲಿನಿಕ್ ನಕಲಿ ವೈದ್ಯ ಪುನಾರಂಭ ಅದೇ ಸ್ಥಳದಲ್ಲಿ ಮಾಡಿದ್ದಾನೆ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ತಾಲ್ಲೂಕಿನ ನಕಲಿ ಕ್ಲಿನಿಕ್ ದಾಳಿಯ ಸಮಿತಿಯಿಂದ ತಕ್ಷಣ ಕ್ರಿಮಿನಲ್ ಪ್ರಕರಣವನ್ನು ದಾಖಲುಮಾಡಿ ಜನರ ಪ್ರಾಣವನ್ನು ಕಾಪಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ,
ತಾಲ್ಲೂಕ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ಅತೀ ಶೀಘ್ರವಾಗಿ ದಿನಾಂಕವನ್ನು ನಿಗದಿಪಡಿಸಿಕೊಂಡು ಆರೋಗ್ಯಾಧಿಕಾರಿಗಳ ಕಛೇರಿ ಕುಷ್ಟಗಿ ಮುಂಭಾಗ ಮಾನ್ಯ ಜಿಲ್ಲಾ ಆರೋಗ್ಯಾಧಿಕಾರಿಗಳು ಕೊಪ್ಪಳ ರವರು ಖುದ್ದು ಸ್ಥಳಕ್ಕೆ ಬರುವವರೆಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಹೋರಾಟವನ್ನು ಹಮ್ಮಿಕೊಳ್ಳುತ್ತೇನೆ ಎಂದು ಸಾರ್ವಜನಿಕ ಹಿತಾಸಕ್ತಿ ಮನವಿ/ಎಚ್ಚರಿಕೆಯನ್ನು ಸಾಮಾಜಿಕ ಹೋರಾಟಗಾರರಾದ ಶ್ರೀ ಮುತ್ತುರಾಜ ಕಟ್ಟಿಮನಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.