ಕೊಪ್ಪಳ: ಪ್ರತಿ ಮನುಷ್ಯನಲ್ಲಿ ಸಾಮಾಜಿಕ ಚಿಂತನೆ ಬಹಳ ಮುಖ್ಯ ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ ಎಂದು ಹೋರಾಟಗಾರ ಹಾಗೂ ಲೇಖಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳ ಇದರ ಅಡಿಯಲ್ಲಿ ತಾಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಪರಿಸರ ಜಾಗೃತಿ ಕೂಡಾ ನಮಗೆ ಬೇಕಾಗುತ್ತದೆ. ಪರಿಸರದಲ್ಲಿ ಸಿಗುವ ಸಂಪನ್ಮೂಲಗಳನ್ನು ಮುಂಬರುವ ಪೀಳಿಗೆಗೆ ಮೀಸಲಿಡಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು. ತಾಳ್ಮೆ, ಶ್ರಮ ಮತ್ತು ವಿಧೇಯತೆ ಎನ್ ಎಸ್ ಎಸ್ ಶಿಬಿರದಲ್ಲಿ ಸಿಗುತ್ತದೆ ಎಂದು ಹೇಳಿದರು.
ಕಾಲೇಜಿನ ಗ್ರಂಥಪಾಲಕ ಡಾ. ಮಲ್ಲಿಕಾರ್ಜುನ ಮಾತನಾಡುತ್ತಾ ಸೇವಾ ಮನೋಭಾವ ಬೆಳೆಸಿಕೊಳ್ಳಲು ಕರೆ ನೀಡಿದರು.
ಸಮಾರೋಪ ಶಿಬಿರದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಕೆ ಲಮಾಣಿ ಮಾತನಾಡಿ ಲಾರ್ಡ್ ಮೆಕಾಲೆಯವರ ಶಿಕ್ಷಣ ಪದ್ಧತಿಯಲ್ಲಿ ಗ್ರಾಮಗಳಿಗೆ ವಿಶಿಷ್ಟ ಸ್ಥಾನ ನೀಡಲಾಗಿತ್ತು. ಹೀಗಾಗಿ ಗ್ರಾಮಗಳ ಅಭಿವೃದ್ದಿಯಲ್ಲಿ ಎನ್ ಎಸ್ ಎಸ್ ಶಿಬಿರದ ಮಹತ್ವ ಬಹಳ ಇದೆ ಎಂದರು.
ಭೂಗೋಳ ಶಾಸ್ತ್ರದ ಅಧ್ಯಾಪಕ ಶ್ರೀಕಾಂತ ಸಿಂಗಾಪೂರ, ಗ್ರಾಮದ ಮುಖಂಡರಾದ ಯರಿಯಪ್ಪ ಹಾಗೂ ಸುಭಾಸಪ್ಪ, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾ. ನರಸಿಂಹ, ಭೂಗೋಳ ಶಾಸ್ತ್ರದ ಮತ್ತೊಬ್ಬ ಉಪನ್ಯಾಸಕ
ಕಲ್ಲಯ್ಯಾ ವೀರಯ್ಯಾ ಪೂಜಾರ ಮತ್ತು ಇಂಗ್ಲಿಷ್ ವಿಭಾಗದ ಉಪನ್ಯಾಸಕ ಶಿವಪ್ಪ ಬಡಿಗೇರ ವೇದಿಕೆಯ ಮೇಲಿದ್ದರು.
ವಿದ್ಯಾರ್ಥಿನಿಯರಾದ ಮಂಜುಳಾ, ವೀಣಾ, ಅಶ್ವಿನಿ, ಗಾಯಿತ್ರಿ ಪೂಜಾ ಒಂದು ವಾರ
ಶಿಬಿರದ ಅನುಭವ ಹಂಚಿಕೊಂಡರು.