ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕರ್ನಾಟಕ ಮತ್ತು ಆಂದ್ರ ಗಡಿಭಾಗದ ಕೊಡಮೊಡಗು ಗ್ರಾಮದ ಡಾಬಾ ಬಳಿ ಎರಡು ದ್ವಿಚಕ್ರವಾಹನಗಳ ಮದ್ಯೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಆಂಧ್ರ ಪ್ರದೇಶದ ಪೆನುಗೊಂಡ ತಾಲೂಕು ರೊದ್ದಂ ಮಂಡಲಮ್ ಪೆದ್ದಗೂಲಪಲ್ಲಿ ಗ್ರಾಮದ 55 ವರ್ಷದ ರಾಮಾಂಜಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ, ಅವರ ಮಗನಾದ ಕೋಟೇಶ್ವರ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ,
ಮತ್ತೊಂದು ದ್ವಿಚಕ್ರ ವಾಹನ ಸವಾರ ರೊದ್ದಂ ಮಂಡಲಮ್ ಪಾತರ್ಲಪಲ್ಲಿ ಗ್ರಾಮದ ಮದಲೇಟಪ್ಪ ಎಂಬುವವರಿಗೆ ಕಾಲುಗಳು ಮುರಿದಿದೆ, ಅವರು ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಪಾವಗಡ ಪೋಲೀಸ್ ಇಲಾಖೆಯ ವೃತ್ತ ನಿರೀಕ್ಷಕರಾದ ಸುರೇಶ್ ಮತ್ತು ಇತರೆ ಸಿಬ್ಬಂದಿಯವರಾದ ಶ್ರೀಕಾಂತ್, ರಾಮಕೃಷ್ಣಪ್ಪ, ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.
ವರದಿ:ಕೆ.ಮಾರುತಿ ಮುರಳಿ