ಕಾರಟಗಿ : ತಾಲೂಕಿನ ಸಿಂಗನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆರ್ ಡಿ ಸಿ ಸಿ ಬ್ಯಾಂಕ್ ಮುಂದಿನ ಐದು ವರ್ಷಗಳ ಚುನಾವಣೆ ಮತದಾನ ನೀಡುವ ಹಕ್ಕು ಅಥವಾ ಚುನಾವಣೆಯ ಪ್ರತಿನಿಧಿಯಾಗಿ ನಿಲ್ಲಲು, ಸಂಘದ ನಿರ್ದೇಶಕರಾದ
ಎನ್. ಚಂದ್ರಶೇಖರ್ ಗೌಡ ವೀರಭದ್ರಗೌಡ ಪಾಟೀಲ್ ಇವರನ್ನು ಸಂಘದ ಅಧ್ಯಕ್ಷರಾದ ಕರಿಯಪ್ಪ ಚಿಗರಿ ಇವರ ಸಮ್ಮುಖದಲ್ಲಿ ಸರ್ವ ಸದಸ್ಯರೊಂದಿಗೆ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಸುರೇಶ ಗೋನಾಳ, ಆರ್ ಡಿ ಸಿ ಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷರಾದ ಎಸ್ ಪಂಪಾಪತಿ, ಸಿದ್ದಪ್ಪ ಕಂಬಳಿ, ನಿಂಗಪ್ಪ ಹಟ್ಟಿ, ಕರಿಯಪ್ಪ ತಳವಾರ, ಶ್ರೀಮತಿ ಯಂಕಮ್ಮ ಹಗಲ್ದಾಳ, ಹನುಮೇಶ ಬಸಪಟ್ಟಣ, ಹಾಗೂ ಸಂಘದ ಸದಸ್ಯರಾದ ಲಕ್ಷ್ಮಣ ಕುಂಟೋಜಿ, ಸಂಘದ ಕಾರ್ಯದರ್ಶಿಯಾದ ಬಸವರಾಜ್ ಲಿಂಗ ರೆಡ್ಡಿ, ಹಾಲು ಉತ್ಪಾದಕರ ಸಂಘದ ಸಹಾಯಕರಾದ ಯಮನೂರ ಎಂ.ಸಿಂಗನಾಳ, ಮಾರುತಿ ಭೂಪುರ್, ಗಂಗಪ್ಪ ಹಟ್ಟಿ, ಗ್ರಾಮದ ಯುವಕರು ಸಂಘದ ಸದಸ್ಯರು ಭಾಗಿಯಾಗಿದ್ದರು.




















