
ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಿಗ್ಗೆ 8:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಚುನಾವಣಾ ಪ್ರಕ್ರಿಯೆಯನ್ನು ಸುಗಮವಾಗಿ ಮತ್ತು ಶಾಂತಿಯುತವಾಗಿ
ಪದವೀಧರ ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸಿದ್ದಾರೆ.
ಇಂದು ಕೊರಟಗೆರೆಯಲ್ಲಿ ಅಭ್ಯರ್ಥಿಯು ಕಾರ್ಯಕರ್ತರ ಜೊತೆಗೆ ಮತಗಟ್ಟೆಗಳಿಗೆ ಭೇಟಿ ನೀಡಿ ನಾನು ಜಯಶೀಲನಾಗಿ ಇತಿಹಾಸ ಸೃಷ್ಟಿಸುವೆ ಎಂದು ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏಳೆಂಟು ಬಾರಿ ಗೆದ್ದಿರುವ ಅಭ್ಯರ್ಥಿಗಳು ಕ್ಷೇತ್ರವನ್ನು ಅನಾಥ ಮಾಡಿ ಅಧಿಕಾರದ ಆಸೆಗೆ ಬರುತ್ತಾರೆ. ಈ ಬಾರಿ ಕಾಂಗ್ರೆಸ್ ಗೆ ಮತ ನೀಡಿ ಸಮಸ್ಯೆಗಳಿಗೆ ಪರಿಹಾರ ಮಾಡುವೆ.
ಕೊರಟಗೆರೆ ತಾಲೂಕಿನಲ್ಲಿರುವ ಪ್ರತಿಯೊಬ್ಬ ಪದವೀಧರ ಮತದಾರರನ್ನು ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನನ್ನು ವೈಯಕ್ತಿಕವಾಗಿ ಭೇಟಿ ಮಾಡಿ ನಮ್ಮ ಸರ್ಕಾರದ ಸಾಧನೆಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡಿರುವ ಯೋಜನೆಗಳ ಬಗ್ಗೆ ತಿಳಿಸಿ ಈ ಮೂಲಕ ಪಕ್ಷದ ಮತ್ತು ನನ್ನ ಗೆಲುವಿಗೆ ಶ್ರಮಿಸಬೇಕೆಂದು ಆಗ್ನೇಯ ಪದವೀಧರ ಕ್ಷೇತ್ರದ ಶಶಿಹುಲಿಕುಂಟೆ ಮಠ ಹೇಳಿದರು.
ಈ ಆತ್ಮೀಯ ಕ್ಷೇತ್ರದ ಚುನಾವಣೆಯಲ್ಲಿ ಸುಮಾರು ಏಳೆಂಟು ಬಾರಿ ಗೆದ್ದಿರುವ ಬಿಜೆಪಿ ಜೆಡಿಎಸ್ ಪಕ್ಷದವರು ಈ ಕ್ಷೇತ್ರವನ್ನು ಅನಾಥ ಮಾಡಿ ಯಾವುದೇ ಪದವಿದರ ಸಮಸ್ಯೆಗಳಿಗೆ ಧ್ವನಿ ಯಾಗದೆ ಕೇವಲ ಅಧಿಕಾರದ ಆಸೆಗೆ ಚುನಾವಣೆಗೆ ಬರುತ್ತಾರೆ.
ಅವರು ಚುನಾವಣೆ ಮುಗಿದ ನಂತರ ಇತ್ತ ಕ್ಷೇತ್ರದ ಬಗ್ಗೆ ಸ್ವಲ್ಪವೂ ಯೋಚಿಸುವುದಿಲ್ಲ.
ನಾನು ಬಹಳ ಚಿಕ್ಕವಯಸ್ಸಿನವನಾಗಿದ್ದು ಕ್ಷೇತ್ರದ ನಿರುದ್ಯೋಗ ಸಮಸ್ಯೆ ನಿವಾರಣೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವೆ. ಕ್ಷೇತ್ರದಲ್ಲಿರುವ ಶಾಲಾ-ಕಾಲೇಜುಗಳಿಗೆ ಭೇಟಿ ಮಾಡಿ ಶಿಕ್ಷಕರ ಸಮಸ್ಯೆಗಳನ್ನು ಹರಿತಿದ್ದೇನೆ. ಶಿಕ್ಷಕರು ಮತ್ತು ಪದವೀಧರರು ಯುವ ಸಮೂಹ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿ ತೋರಿಸುತ್ತೇನೆ ಈ ಬಾರಿ ನನ್ನ ಗೆಲುವಿಗೆ ನೀವು ಕೈಜೋಡಿಸಿ ಎಂದು ಹೇಳಿದರು. ಇನ್ನು ಒಂದುವರೆ ವರ್ಷ ನಮ್ಮ ಸರ್ಕಾರ ಅಧಿಕಾರದಲ್ಲಿರುವ ಕಾರಣ ಒಂದೊಂದಾಗಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಾದ , ರವಿಕುಮಾರ್( ಕುಳ್ಳ) ಅರವಿಂದ್, ವಿನಯ್ ಕುಮಾರ್, ಸುನಿಲ್, ಏರ್ಟೆಲ್ ಗೋಪಿ, ರಾಜಣ್ಣ, ದರ್ಶನ್, ಹಾಗೂ ಮಹಿಳಾ ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ. ಪ್ರಸನ್ನ ಕುಮಾರ್. ಎಸ್. ಕೊರಟಗೆರೆ.




















