
ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಿಗ್ಗೆ 8:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಚುನಾವಣಾ ಪ್ರಕ್ರಿಯೆಯನ್ನು ಸುಗಮವಾಗಿ ಮತ್ತು ಶಾಂತಿಯುತವಾಗಿ
ಪದವೀಧರ ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ (NDA) ಅಧಿಕೃತ ಅಭ್ಯರ್ಥಿಯಾಗಿ ಶ್ರೀ ಕೆ. ಎಂ. ಸುರೇಶ್ ಅವರು ಸ್ಪರ್ಧಿಸಿದ್ದು ನೇರ ಸ್ಪರ್ಧೆ ಕ್ಷೇತ್ರದಲ್ಲಿ ಪ್ರಮುಖವಾಗಿ ಎನ್ಡಿಎ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು. NDA ಅಭ್ಯರ್ಥಿ ಗೆಲುವಿಗೆ BJP ಮತ್ತು ಜೆಡಿಎಸ್ ಪಕ್ಷಗಳು ಒಗ್ಗಟ್ಟಿನಿಂದ ಮತದಾನ ಮಾಡಿಸಿದ್ದಾರೆ.
ಇನ್ನು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ (NDA) ಅಭ್ಯರ್ಥಿ ಶ್ರೀ ಕೆ. ಎಸ್ . ಸುರೇಶ್ ಅವರ ಪರವಾಗಿ ಸಮಾಜ ಸೇವಕ ಹಾಗೂ ಜೆ ಡಿ ಎಸ್ ನ ಪ್ರಬಲ ಆಕಾಂಕ್ಷಿ ಪಿ ಎನ್ ಕೃಷ್ಣಮೂರ್ತಿ ರವರು.
ಇಂದು ಕೊರಟಗೆರೆಯಲ್ಲಿ ಕಾರ್ಯಕರ್ತರ ಜೊತೆಗೆ ಭಾಗವಹಿಸಿ, ಕ್ಷೇತ್ರದ ಐದು ಮತಗಟ್ಟೆಗಳಿಗೆ ಭೇಟಿ ನೀಡಿ ಮೈತ್ರಿಕೂಟದ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿ ಮತಯಾಚನೆ ನಡೆಸಿದ್ದರು. ಎನ್ಡಿಎ ನಾಯಕರು ತಮ್ಮ ಅಭ್ಯರ್ಥಿಯ ಗೆಲುವಿನ ಬಗ್ಗೆ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಭ್ಯರ್ಥಿಯ ಗೆಲುವಿಗಾಗಿ ಮತಯಾಚನೆ ಮಾಡಿದ ಪಿಎನ್ ಕೃಷ್ಣಮೂರ್ತಿ ಅವರು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಹಕ್ಕುಗಳು ಮತ್ತು ಹಿತಾಸಕ್ತಿಗಳ ರಕ್ಷಣೆಗೆ ಬದ್ಧವಾಗಿರುವ ಸಮರ್ಥ ನಾಯಕನನ್ನು ಬೆಂಬಲಿಸುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.
ಮತಯಾಚನೆ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರು ಕಾಮರಾಜಣ್ಣ, ಮಂಜುನಾಥ್, ದೊಡ್ಡಯ್ಯ, ಅನಿಲ್ ಕುಮಾರ್, ರುದ್ರೇಶ್ ಬಿಜೆಪಿ ತಾಲೂಕು ಅಧ್ಯಕ್ಷರು, ಇನ್ನು ಅನೇಕ ಮುಖಂಡರು ಜೊತೆಗೂಡಿ ಒಮ್ಮತದಿಂದ ಸುರೇಶ್ ಗೆಲುವಿಗೆ ಶ್ರಮಿಸಿದರು.




















