ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಲಕ್ಕೂರು ವಿಭಾಗದ ಬೆಸ್ಕಾಂ ಇಲಾಖೆಯ ಕಿರಿಯ ಅಭಿಯಂತರಾದ ಶ್ರೀನಿವಾಸ್ ಇವರ ಸೇವೆಯನ್ನು ಗುರುತಿಸಿ ತಾಲ್ಲೂಕು ಆಡಳಿತ ವತಿಯಿಂದ ಇಂದು ಪಟ್ಟಣದ ಹೊಂಡ ಕ್ರೀಡಾಂಗಣದಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ವೈ ನಂಜೇಗೌಡ ರವರು ಸನ್ಮಾನ ಮಾಡಿದರು.
ಬೆಸ್ಕಾಂ ಇಲಾಖೆಯ ಲಕ್ಕೂರು ವಿಭಾಗದ ಕಿರಿಯ ಅಭಿಯಂತರರಾದ ಶ್ರೀನಿವಾಸ್ ಹಾಗೂ ಕುಡಿಯನೂರು ವಿಭಾಗದ ಲೈನ್ ಮನ್ ವಸಂತ್ ಅವರನ್ನು ತಾಲ್ಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅನ್ಸಾರ್ ಪಾಷಾ ರವರು ಮಾತನಾಡಿ, ನಮ್ಮ ತಾಲ್ಲೂಕು ವ್ಯಾಪ್ತಿಯ ಲಕ್ಕೂರು ವಿಭಾಗದ ಕಿರಿಯ ಅಭಿಯಂತರರಾದ ಶ್ರೀನಿವಾಸ್ ಹಾಗೂ ಕುಡಿಯನೂರು ವಿಭಾಗದ ಲೈನ್ ಮನ್ ವಸಂತ್ ರವರ ಸೇವೆಯನ್ನು ಗುರುತಿಸಿ ತಾಲ್ಲೂಕು ಆಡಳಿತ ಇಂದು ಸನ್ಮಾನ ಮಾಡಿರುವುದು ಸಂತೋಷದ ಸಂಗತಿ. ಈ ರೀತಿ ಉತ್ತಮ ಕರ್ತವ್ಯ ನಿರ್ವಹಿಸುತ್ತಿರವರನ್ನು ಗುರುತಿಸುವುದರಿಂದ ಕೆಲಸ ನಿರ್ವಹಿಸಲು ಹೊಸ ಹುರುಪು ಮೂಡುತ್ತದೆ ಹಾಗೂ ಸನ್ಮಾನ ಸ್ವೀಕರಿಸಿದ ನಮ್ಮ ಇಲಾಖೆಯ ಶ್ರೀನಿವಾಸ್ ಹಾಗೂ ವಸಂತ್ ರವರಿಗೆ ಅಭಿನಂದನೆಗಳನ್ನು ಈ ಮೂಲಕ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ವೈ ನಂಜೇಗೌಡ, ತಹಶೀಲ್ದಾರ್ ರಮೇಶ್, ಪೋಲಿಸ್ ಇಲಾಖೆಯ ಆರಕ್ಷಕ ನಿರೀಕ್ಷಕರಾದ ವಸಂತ್ ಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ-ಆಕರ್ಷ.ಜಿ.