ಕೊಪ್ಪಳ: ತಾಲೂಕಿನ ಹಳೆ ಗೊಂಡಬಾಳ ಎರಡನೆಯ ಅಂಗನವಾಡಿ ಶಾಲೆಯಲ್ಲಿ 78ನೇ ಸ್ವತಂತ್ರೋತ್ಸವವನ್ನು ಮಕ್ಕಳೊಂದಿಗೆ ಶ್ರೀಮತಿ ಪಲ್ಲವಿ ಪೊಲೀಸ್ ಪಾಟೀಲ್ ಅಂಗನವಾಡಿ ಶಿಕ್ಷಕಿ ಬಹಳ ಸಂಭ್ರಮದಿಂದ ಆಚರಣೆ ಮಾಡಿದರು, ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕರು ಮಾತನಾಡಿ
1947ರ ಆಗಸ್ಟ್ 15 ಭಾರತೀಯರ ಐತಿಹಾಸಿಕ ದಿನವಾಗಿದ್ದು, ಬ್ರಿಟೀಷರ ಕಪಿ ಮುಷ್ಠಿಯಿಂದ ನಮಗೆ ಸ್ವಾತಂತ್ರ್ಯ ದೊರೆತ ದಿನ ಭಾರತದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಹೋರಾಟಗಾರರು ಬಲಿದಾನಗೈದಿದ್ದಾರೆ ಅವರ ನೆತ್ತರ ಹನಿಗಳಿಂದಾಗಿ ನಾವಿಂದು ನೆಮ್ಮದಿಯಾಗಿ ಉಸಿರಾಡುವಂತಾಗಿದೆ. ಪ್ರತಿ ವರ್ಷ ಆಗಸ್ಟ್ 15ರಂದು ದೇಶದ ನಾಗರಿಕರು ಸ್ವಾತಂತ್ರ್ಯಕ್ಕೆ ಹೋರಾಡಿದ ವೀರರನ್ನು ನೆನಪಿಸಿಕೊಳ್ಳುತ್ತೇವೆ. 200 ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾದ ಭಾರತ ಪ್ರಜಾಸತ್ತಾತ್ಮಕ ಸಾರ್ವಭೌಮ ರಾಷ್ಟ್ರವಾಯಿತು.
ಭಾರತ ಸ್ವಾತಂತ್ರ್ಯ ದಿನದ ಹಿಂದಿನ ರಾತ್ರಿ ಆಗಸ್ಟ್ 14, 1947 ರಂದು, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಐತಿಹಾಸಿಕ ಭಾಷಣ ಮಾಡಿದ್ದರು. ಈ ಭಾಷಣವು ಟ್ರಿಸ್ಟ್ ವಿತ್ ಡೆಸ್ಟಿನಿ ಎಂಬುದಾಗಿ ಕರೆಯಲ್ಪಟ್ಟಿದೆ. ‘ಬಹಳ ವರ್ಷಗಳಿಂದ ಮಾಡಿದ ಪ್ರತಿಜ್ಞೆಯು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳುವ ಸಮಯ ಬಂದಿದೆ. ಮಧ್ಯರಾತ್ರಿ ಗಂಟೆ ಹೊಡೆಯುವಾಗ ಜಗತ್ತು ನಿದ್ರಿಸುತ್ತಿರುತ್ತೆ, ಭಾರತವು ಎಚ್ಚರಗೊಳ್ಳುತ್ತದೆ’ ಎಂದು ಮಕ್ಕಳಿಗೆ ಭಾಷಣ ಮೂಲಕ ತಿಳಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳು,ಪೋಷಕರು ಗ್ರಾಮದ ಮಹಿಳೆಯರು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ