ಪಾವಗಡ : ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಂಧ್ರ ಪ್ರದೇಶ ರಾಜ್ಯದ ಸತ್ಯಸಾಯಿ ಜಿಲ್ಲೆಯ ಮಡಕಶಿರಾ ತಾಲೂಕಿನ ತೆಲುಗು ದೇಶಂ ಪಕ್ಷದ ನಾಯಕರುಗಳು ಹಾಗೂ ಶಾಸಕರಾದ ರಾಜು ಮತ್ತು ವಿಧಾನ ಪರಿಷತ್ ಸದಸ್ಯರಾದ ಗುಂಡುಮಲ ತಿಪ್ಪೇಸ್ವಾಮಿ ಯವರುಗಳು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಸೀತಾಲಂಬ ಅಮ್ಮವರಿಗೆ ಕುಂಕುಮಾರ್ಚನ ನವಗ್ರಹ ಪೂಜಾ ರಾಧನ ಮಾಡಿಸಿದರು. ನಂತರ ಮಡಕಶಿರಾ ಶಾಸಕರಾದ ಎಂ ಎಸ್ ರಾಜು ರವರು ಮಾತನಾಡಿ ಲೋಕ ಕಲ್ಯಾಣಕ್ಕಾಗಿ ಹಾಗೂ ರೈತರಿಗೆ ಮಳೆ ಬೆಳೆ ಚೆನ್ನಾಗಿ ಆಗಬೇಕೆಂದು ಶ್ರೀ ಶನೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮಾಡಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಉಮಾದೇವಿ, ಮಾಜಿ ಜೆಡ್.ಪಿ.ಟಿ.ಸಿ ಶ್ರೀನಿವಾಸ ಮೂರ್ತಿ ಮುಂತಾದವರು ಪಾಲ್ಗೊಂಡಿದ್ದರು.
ವರದಿ :ಕೆ.ಮಾರುತಿ ಮುರಳಿ