ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಮುಂದೆ ಇರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತ ಮತ್ತು ಬಯಲು ರಂಗ ಮಂದಿರದ ಸುತ್ತ ಮುತ್ತ ,ಭಾರೀ ಗಾತ್ರದ ವಾಹನಗಳಾದ ಲಾರಿ,ಜೆಸಿಬಿ ಹಾಗೂ ಕಾರು ಸೇರಿದಂತೆ ಇತರ ವಾಹನಗಳು ರಸ್ತೆಯಲ್ಲಿ ನಿಲ್ಲುವುದರಿಂದ ,ಈ ಮಾರ್ಗವಾಗಿ ಸಂಚಾರ ಮಾಡುವ ಸವಾರರಿಗೆ ವೇಗವಾಗಿ ಯಲಬುರ್ಗಾ ಟು ಕೊಪ್ಪಳ ಸಂಚಾರ ಮಾಡುವ ವಾಹನಗಳು, ಎದುರು ಬರುವ ವಾಹನಗಳು ಇವರಿಗೆ ಕಾಣುವದಿಲ್ಲ ಇದರಿಂದ ಅಪಘಾತವಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಸುಗಮವಾಗಿ ಸಂಚರಿಸುವದಕ್ಕೆ, ಸಂಭಂದಿಸಿದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವದು ಸೂಕ್ತವಾದದು ರಸ್ತೆ ಚಿಕ್ಕದಾಗಿ ಈ ಹಿಂದೆ ಪೋಲಿಸ್ ಠಾಣೆ ಮುಂಭಾಗದಲ್ಲಿ ಇರುವ ಹೈಮಾಕ್ಸ ವಿದ್ಯುತ್ ಕಂಬ ಮುರಿದು ಹೋಗಿ ಬೇಳಕು ಕಾಣಲಾರದೆ ಕತ್ತಲಮಾಯವಾಗಿದೆ ,ಆದ್ದರಿಂದ ಅಲ್ಲಿರುವ ವಾಹನಗಳನ್ನು ಬೇರೆ ಮಾರ್ಗವಾಗಿ ಸ್ಥಳಾಂತರ ಮಾಡುವದು ಒಳಿತು. ಇದರಿಂದ ಪಟ್ಡಣ ಸುಂದರವಾಗಿ ಕಾಣಲು ಸಾಧ್ಯವಾಗುತ್ತದೆ ಮತ್ತು ಬಯಲು ರಂಗಮಂದರದಲ್ಲಿ ಕಾರ್ಯಕ್ರಮ ಮಾಡುವದಕ್ಕೆ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗು ಸುಗಮ ಸಂಚಾರ ಸಾದ್ಯ ಎಂಬುವದು ಪ್ರಯಾಣಿಕರ ಆಶಯವಾಗಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.