ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ 78ನೇ ಸ್ವತಂತ್ರೋತ್ಸವವನ್ನು ಆಚರಣೆ ಮಾಡಲಾಯಿತು. ಹಾಲು ಉತ್ಪಾದಕರ ಸಹಕಾರ ಸಂಘದಿಂದ ರೈತರ ಮಕ್ಕಳಿಗೆ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ನವೀನ್ ಕುಮಾರ್ ತಂದೆ ಶಿವಪ್ಪ ಕಂಬಳಿ, ರಘುರಾಮ್ ಸಾಯಿ ತಂದೆ ಭಾಸ್ಕರ್ ರಾವ್ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಿಂದ ಪಂಪಾಪತಿ ಎಸ್ ಹಾಗೂ ಶಾಂತನಗೌಡ ಮಾಲಿ ಪಾಟೀಲ್, ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ. ಗ್ರಾಮದ ಹಿರಿಯರಾದ ಶೇಖರಗೌಡ ಸೌಕಾರ್, ಛತ್ರಪ್ಪ ನಾಯಕ, ತಿಮ್ಮಣ್ಣ ಕನಕರೆಡ್ಡಿ, ಮಲ್ಲಿಕಾರ್ಜುನಗೌಡ, ವಾಲ್ಮೀಕಿ ಶಾಲೆಯ ಮುಖ್ಯೋಪಾಧ್ಯರಾದ ಷಣ್ಮುಖಪ್ಪ, ಶಾಲೆ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಶಿಕ್ಷಕಿಯರು, ಯುವಕರು ಶಾಲಾ ಮಕ್ಕಳು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.