ಜೀವನದಲ್ಲಿ ಮೊದಲ ಗುರು ಜನ್ಮದಾತೆ,
ನಂತರ ಅಕ್ಷರ ಕಲಿಸಿಕೊಟ್ಟ ಗುರುಮಾತೆ ರಾಗಬದ್ಧವಾಗಿ ಕಲಿಸಿಕೊಡುವ ಅಕ್ಷರಕ್ಕೆ ನೀವೇ ಸರಸ್ವತಿ,
ಸಾಲು ಸಾಲು ಪದಗಳ ಜೋಡಣೆ ಮಾಡಿಸಿ, ಬರವಣಿಗೆ ಕಲಿಸಿಕೊಟ್ಟ ಗುರು ಮಾತೆ
ಜ್ಞಾನ ಜ್ಯೋತಿಯನ್ನು ಬೆಳಗಿಸಿ ಅಂಧಕಾರವನ್ನು ದೂರ ಮಾಡಿದ ಗುರುಮಾತೆ
ಸುಜ್ಞಾನದ ಕಿರಣವ ಸುರಿಸಿ, ಉತ್ತಮ ಮೌಲ್ಯಗಳ ತುಂಬಿ, ಪ್ರೀತಿ ಕರುಣೆ ಕೊಟ್ಟು ತಾಯಿಯಂತೆ ಸಲುಹಿದ ಗುರುಮಾತೆ.
ಅ ಎಂಬ ಅಕ್ಷರವನ್ನು ಮೊದಲು ಕಲಿಸಿದಿರಿ
ಈ ಅಕ್ಷರದ ಅರ್ಥ ಈಗ ತಿಳಿಯುತ್ತಿದೆ
ಅಕ್ಷರ ಕಲಿತರೆ ಮುಂದೆ ಅರಸನಾಗುವೆ ಎಂದು ಹೇಳಿಕೊಟ್ಟ ಗುರುಮಾತೆ
ಬಾನು, ಭೂಮಿ ವಿಶ್ವವೆಲ್ಲ ಸೂರ್ಯ ಬೆಳಗಿಸುವನು, ನಮ್ಮ ಬಾಳಿನಲ್ಲಿನ ಕತ್ತಲೆಯನ್ನು ತೊಳೆದು ಜ್ಞಾನ ಎಂಬ ಪ್ರಕಾಶತೆಯ ತುಂಬಿ, ಉತ್ತಮ ವ್ಯಕ್ತಿಯಾಗಿಸಿ ಹೊಳೆಯುವ ವಜ್ರದ ರೂಪ ನೀಡಿದ ಗುರುಮಾತೆ.
ನೀವೇ ಒಂದು ಸುಂದರವಾದ ಕಲೆ ನಿಮ್ಮಲ್ಲಿ ಇಲ್ಲ ಯಾವ ಭೇದಭಾವದ ನೆಲೆ ಯಾರನ್ನು ಕಡೆಗಣಿಸದೆ ಎಲ್ಲರಿಗೂ ಸಮಾನವಾಗಿ ಹಂಚಿದ್ದೀರಿ ಜ್ಞಾನವನ್ನು ತಾಯಿಯಂತೆ ನೀವಿಲ್ಲಿ
ಎಲ್ಲಾ ಮುದ್ದು ಮಕ್ಕಳ ಮನಸ್ಸಿನಲ್ಲಿ ಇರುವುದು ನಿಮಗೊಂದು ಅದ್ಭುತವಾದ ನೆಲೆ ಗುರುಮಾತೆ
ಬಾನು, ಭೂಮಿಗೆ ಸೂರ್ಯ ಚಂದ್ರರೇ ಸುಂದರ
ನಮ್ಮ ಶಾಲೆಗೆ ನೀವೇ ಸೃಜನಶೀಲ ಜ್ಞಾನ ಭಂಡಾರ ಗುರುಮಾತೆ ಅಕ್ಷರ ವರದಾನ ನೀಡಿದ ನಿಮಗೆ ತನು ಮನ ಧನ ಕೊಟ್ಟರೂ ತೀರದ ಋಣ.
ಜೀವನದಲ್ಲಿ ಉತ್ತಮ ವ್ಯಕ್ತಿಯಾಗಿ ಜೀವಿಸಿದರೆ ತೀರುವುದೇ ಈ ಋಣ? ನಮಗೆ ಜ್ಞಾನವನ್ನು ಕೊಟ್ಟ ತಾಯಿಯ ಚರಣ ಕಮಲಗಳಿಗೆ ವಂದನೆ ಅಭಿನಂದನೆ
ಹುಟ್ಟುಹಬ್ಬದ ಶುಭಾಶಯಗಳು ಗುರುಮಾತೆ.
-ಪರಶುರಾಮ ನಾಯಕ ಹುಲಿಹೈದರ