ಕೊಪ್ಪಳ: ವ್ಯಾಕರಣ ತಿಳಿದೇ ಇಲ್ಲವೇ ಕಲಿತುಕೊಂಡೇ ಭಾಷೆಯನ್ನು ಬಳಸಬೇಕೆಂಬ ಮಾತು ಸಮಂಜಸವಾದ ಮಾತಲ್ಲ ಎಂದು ಯಲಬುರ್ಗಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಡಾ. ಶಶಿಕುಮಾರ್ ಬಿ ಕಾರ್ಯಕ್ರಮದ
ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ’ಆಂತರಿಕ ಗುಣಮಟ್ಟ ಭರವಸೆ ಕೋಶ’ ಏರ್ಪಡಿಸಿದ್ದ ‘ಸಾಫ್ಟ್ ಸ್ಕಿಲ್ಸ್ ಇನ್ ಸ್ಪೀಕಿಂಗ್ ಇಂಗ್ಲಿಷ್’ ವಿಷಯ ಕುರಿತು ಅವರು ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ನಿತ್ಯ ಭಾಷೆಯನ್ನು ಬಳಕೆ ಮಾಡುವುದರಿಂದ ಪದಗಳ ಗುಚ್ಛ ಹೆಚ್ಚಾಗುತ್ತದೆ. ಮಾತನಾಡುವಾಗ ಯಾವುದೇ ಹಿಂಜರಿಕೆ ಕೂಡ ಇರಬಾರದು ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕಾಮರ್ಸ್ ವಿಭಾಗದ ಮುಖ್ಯಸ್ಥ ವಿಠೋಬ ಎಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಭಾಷಾ ಬಳಕೆಯಲ್ಲಿ ಶಾಬ್ದಿಕ ಸಂಪತ್ತು ಬಹಳ ಮುಖ್ಯ ಹಾಗಾಗಿ ವಿದ್ಯಾರ್ಥಿಗಳು ಆ ಸಂಪತ್ತನ್ನು ಬೆಳೆಸಿಕೊಳ್ಳಲು ಕರೆ ನೀಡಿದರು. ಭಾಷೆ ಮನುಷ್ಯನ ಭಾವನೆಗಳನ್ನು ವ್ಯಕ್ತಪಡಿಸಲೋಸುಗ
ಭಾಷಾ ತಜ್ಞರು ಅದಕ್ಕೆ ಲಿಪಿಯನ್ನು ಕಂಡು ಹಿಡಿದಿದ್ದಾರೆ. ಅಶಾಬ್ದಿಕ ಭಾಷೆ ಕೂಡ ನಿತ್ಯ ಜೀವನದಲ್ಲಿ ಮುಖ್ಯವಾಗಿ
ಬೇಕಾಗುತ್ತದೆ. ಅಂದರೆ ಅದನ್ನು ನಾವು ಆಂಗಿಕ ಭಾಷೆ ಎನ್ನುತ್ತೇವೆ. ಭಾಷಾ ಕೌಶಲ್ಯಗಳು ಇಲ್ಲದೇ ಭಾಷೆ ಬೆಳವಣಿಗೆಯಾಗದು ಎಂದರು.
ಇಂಗ್ಲಿಷ್ ಭಾಷಾ ಉಪನ್ಯಾಸಕ ವಿರುಪಾಕ್ಷಪ್ಪ ಮುತ್ತಾಳ ಪ್ರಾಸ್ತಾವಿಕ ವಾಗಿ ಮಾತನಾಡಿ ಇಂಗ್ಲೀಷ್ ಜಾಗತಿಕವಾಗಿ ಬೆಳೆದಿದೆ. ಇದಕ್ಕೆ ಹೆಚ್ಚಿನ ಒತ್ತು ಕೊಡಲು ಹೇಳಿದರು.
ಪ್ರಾಚಾರ್ಯ ಡಾ. ಗಣಪತಿ ಕೆ ಲಮಾಣಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗವಿಸಿದ್ದಪ್ಪ ಮುತ್ತಾಳ, ಇತಿಹಾಸ ವಿಭಾಗದ ಮುಖ್ಯಸ್ಥ ನಾಗರತ್ನ ತಮ್ಮಿನಾಳ, ಐಕ್ಯೂಏಸಿ ಸಂಚಾಲಕ ಡಾ. ಅಶೋಕ ಕುಮಾರ,
ಇಂಗ್ಲಿಷ್ ಭಾಷೆಯ ಉಪನ್ಯಾಸಕರಾದ ಶಿವಪ್ಪ, ಎಚ್ ಜಿ ಬೊಮ್ಮನಾಳ ಹಾಗೂ ನಿಂಗಪ್ಪ ಕಿನ್ನಾಳ ವೇದಿಕೆಯ ಮೇಲಿದ್ದರು.
ಐಚ್ಛಿಕಿ ಇಂಗ್ಲಿಷ ವಿಷಯದ ವಿದ್ಯಾರ್ಥಿನಿ ಸಯ್ಯದ ಆಜ್ರಾ ಸ್ವಾಗತಿಸಿದರು
ವಿದ್ಯಾರ್ಥಿನಿ ನಿವೇದಿತಾ ಕಾರ್ಯಕ್ರಮ ನಡೆಸಿಕೊಟ್ಟರು. ಕೊನೆಯಲ್ಲಿ ವಿದ್ಯಾರ್ಥಿನಿ ಕುಸುಮ ವಂದಿಸಿದರು.