ಮನೆಯಲ್ಲಿದ್ದ ಬೆಣ್ಣೆ ಕದ್ದಿಹ ಗೋಪಾಲನು.
ಅಷ್ಟ ಮಹಿಳೆಯರ ಮನವ ಗೆದ್ದಿಹನು.
ತನ್ನ ಕೊಳಲ ದನಿಯಿಂದ ಗೋವುಗಳನ್ನ ಕರೆದವನು.
ಬಲರಾಮ ಮತ್ತು ಸುಭದ್ರೆಯ ಸಹೋದರನು.
ಕೃಷ್ಣಾಷ್ಟಮಿಯಂದು ಮಥುರದಲ್ಲಿ ಜನಿಸಿದವನು.
ವಾಸುದೇವ ಮತ್ತು ದೇವಕಿ ಮಗನು.
ಎಂಟನೇ ಮಗುವಾಗಿ ಜನಿಸಿಹನು
ತನ್ನ ಮಾವನಾದ ಕಂಸನ ಸಾವಿಗೆ ಕಾರಣಕರ್ತನು.
ದ್ರೌಪದಿಯನ್ನು ಕೌರವರ ಸಭೆಯಲ್ಲಿ ರಕ್ಷಿಸಿದವನು.
ಪಾಂಡವರು ಮತ್ತು ಕೌರವರ ನಡುವಿನ ಕೊಂಡಿ ಇವನು.
ಅರ್ಜುನ ರಥಕ್ಕೆ ಸಾರಥಿ ಆದವನು.
ಬ್ರಹ್ಮಾಂಡವನ್ನು ಬಾಯಿಲ್ಲಿ ತೋರಿದ ಶ್ರೀ ಕೃಷ್ಣನು.
-ಚಂದ್ರಶೇಖರಾಚಾರ್ ಎಂ ,ಶಿಕ್ಷಕರು
ವಿಶ್ವಮಾನವ ಪ್ರೌಢಶಾಲೆ ,ಸೀಬಾರ ಗುತ್ತಿನಾಡು ಚಿತ್ರದುರ್ಗ