ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸ್ವತಂತ್ರ ಯೋಧರ ನಾಡು ಕೋಗನೂರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸಾರ್ವಜನಿಕ ಮಹಿಳಾ ಶೌಚಾಲಯ ಆಗ್ರಹಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಉಪಸ್ಥಿತರಿಲ್ಲದ ಕಾರಣ ಪಂಚಾಯಿತಿ ಸಿಬ್ಬಂದಿ ವರ್ಗದ ಕೊಟ್ರೇಶ್ ಬೂದನೂರು ರವರಿಗೆ ಮನವಿ ಪತ್ರ ನೀಡಿ ಸ್ವಿಕೃತಿಯನ್ನು ತೆಗೆದುಕೊಳ್ಳಲಾಯಿತು.ಈ ಸಂದರ್ಭದಲ್ಲಿ ಸಾಮಾಜಿಕ/ ರೈತಪರ ಹೋರಾಟಗಾರರಾದ ರಾಕೇಶ್ ಬಿ,ರಾಜು ಎಚ್., ಅಂಕಲಿ ಹಿರಿಯ ಮುಖಂಡರಾದ ಮಲ್ಲಪ್ಪ ಎಮ್,ಸ್ಥಳೀಯರಾದ ಮಹಾಂತೇಶ್, ಪ್ರವೀಣ್ ಕೂರಗುಂದ,ಶರಣಪ್ಪ ಎನ್.ಸಿ ಇತರರು ಉಪಸ್ಥಿತರಿದ್ದರು. ವಿಷಯ ಏನೆಂದರೆ ಮನವಿ ಪತ್ರದಲ್ಲಿ ಇರುವಂತೆ ಕೋಗನೂರು ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ಐದು ಹಳ್ಳಿಗಳಾದ ಕೋಗನೂರು,ತಂಗೋಡ,ಗೋವಿನಕೊಪ್ಪ, ಅಂಕಲಿ,ನಾಗರಮಡವು ಈ ಹಳ್ಳಿಗಳಲ್ಲಿ ಮಹಿಳೆಯರು ಬಯಲು ಶೌಚಾಲಯವನ್ನು ಅವಲಂಬಿಸಿರುತ್ತಾರೆ ಅದರಲ್ಲಿ ಮುಖ್ಯವಾಗಿ ದಲಿತ ಕೇರಿಗಳು ಆಗಿರುತ್ತವೆ. ಇದರಿಂದ ತುಂಬಾ ತೊಂದರೆಯನ್ನು ಅನುಭವಿಸುತ್ತಿರುವ ಮಹಿಳೆಯರು ಮಳೆಗಾಲದಲ್ಲಿ ತುಂಬ ಸಂಕಷ್ಟಕ್ಕೀಡಾಗಿದ್ದಾರೆ ಹೀಗಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕೇಳುವುದೇನೆಂದರೆ ಅಚ್ಚುಕಟ್ಟಾದ ಸಾರ್ವಜನಿಕ ಮಹಿಳಾ ಶೌಚಾಲಯವನ್ನು ನಿರ್ಮಿಸಿ ಕೊಡಬೇಕೆಂದು ತಮ್ಮಲ್ಲಿ ಕಳಕಳಿಯಾಗಿ ವಿನಂತಿಸಿಕೊಳ್ಳುತ್ತೇವೆ. ಅದು ತುರ್ತಾಗಿ ಆಗಬೇಕು ಯಾವುದೇ ಹಿಂದೇಟಾಕದೆ ಇದನ್ನು ಗಂಭೀರವಾಗಿ ತೆಗೆದುಕೊಂಡು ಈ ಸಮಸ್ಯೆ ಗೆ ಸ್ಪಂದಿಸಬೇಕೆಂದು ಕೇಳಿಕೊಳ್ಳುವ ಮನವಿ ವಿಚಾರದ ವಿಷಯ ಇದಾಗಿತ್ತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.