ದಯವಿಲ್ಲದ ಧರ್ಮ ಯಾವದಯ್ಯ ?
ಯಲಬುರ್ಗಾ :ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಂಸ್ಕಾರ ಸಂಸ್ಕೃತಿಯ ಬಗ್ಗೆ ಅರಿತುಕೊಂಡಾಗ ದಯ ಧರ್ಮದ ಹಾದಿಯಲ್ಲಿ ಸಾಗುವದಕ್ಕೆ ಸಾಧ್ಯವಾಗುತ್ತದೆ ಎಂದು ಶಿಕ್ಷಕ ಆನಂದ ಸೊಬಗಿನ ಅವರು ಹೇಳಿದರು. ಸತ್ಸಂಗದಿಂದ ಹತ್ತಿರವಿದ್ದಾಗ ಉತ್ತಮ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳುವದಕ್ಕೆ ಸಾಧ್ಯ ಎಂದು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಬಸವರಾಜ ಅಧಿಕಾರಿ ಅವರು ಮಾತನಾಡಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟಾಗ ಅವರು ಸಂಸ್ಕಾರ ಜೀವನದಲ್ಲಿ ಅಳವಡಿಸಿಕೊಂಡು ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಸಹಕಾರ ನಿಡುವ ದಯ ಗುಣಗಳನ್ನು ಪಡೆದುಕೊಂಡು ಪರೋಪಕಾರಿ ಕಾರ್ಯಗಳನ್ನು ಮಾಡಿ,ದಯ ಧರ್ಮದ ಕಾರ್ಯದಲ್ಲಿ ನಿರತರಾಗಲು ಸಾಧ್ಯ ಎಂದು ಶಿಕ್ಷಕ ಎಸ್.ಎಮ್.ಕಿಂದ್ರಿ ಅವರು ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾ ದೇವಿ ದೇವಸ್ಥಾನದಲ್ಲಿ ಚತುರ್ದಶಿ ಅಂಗವಾಗಿ ಹಮ್ಮಿಕೊಂಡಿರುವ ೩೬೫ ನೇ ಶಿವಾನುಭವಗೋಷ್ಠಿಯಲ್ಲಿ ಮಾತನಾಡಿದರು. ಧರ್ಮದ ಹಾದಿಯಲ್ಲಿ ಸಾಗಿದಾಗ ನೆಮ್ಮದಿಯಿಂದ ಇರುವದಕ್ಕೆ ಸಾದ್ಯ ಎಂದು ದಯವಿಲ್ಲದ ಧರ್ಮ ಯಾವುದಯ್ಯ ಚಿಂತನ ಗೋಷ್ಠಿಯಲ್ಲಿ ಶ್ರೀ ಭೀಮಾಂಬಿಕಾ ದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ,ದಾನಕೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಧರ್ಮರಮಠದ ಹನುಮಂತಪ್ಪಜ್ಜ ಹಾಗೂ ಶರಣಯ್ಯ ಹಿರೇಮಠ,ಕಲ್ಲಯ್ಯ ಚಿಕ್ಜಬನ್ನಿಗೋಳ ಸಾನಿಧ್ಯ ವಹಿಸಿದ್ದರು. ಈ ವೇಳೆ ಕಳಕಪ್ಪ ಹಡಪದ, ಯಮನೂರಪ್ಪ ಹಳ್ಳಿಕೇರಿ ಸಂಗೀತ ಸೇವೆ ನಿಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಿವರಾಜ ರಾಠೋಡ ,ನೀಲಮ್ಮ ಸೊಬಗಿನ,ಗುತ್ತಿಗೆದಾರ ಶರಣಪ್ಪ ವ್ಹಿ.ನೆರೆಗಲ್ಲ, ಮುಖಂಡರಾದ ರಾವಣಕಿ,ನಾಗರಾಜ ಬಡಿಗೇರ, ಭೀಮಣ್ಣ ಜರಕುಂಟಿ, ದುರಗೇಶ ಹರಿಜನ,ಚಂದಪ್ಪ ಹಳ್ಳಿಕೇರಿ, ಮೇಘರಾಜ ಕುಡಗುಂಟಿ, ವೀರಣ್ಣ ಹಳ್ಳಿಕೇರಿ ಸೇರಿದಂತೆ ಇತರರು ಇದ್ದರು.