ಕೊಪ್ಪಳ/ಯಲಬುರ್ಗಾ:ಸಾರ್ವಜನಿಕರಿಗೆ ವಂಚನೆ ಮಾಡಿದ ಕಂಪನಿಗಳಾದ ಗ್ರೀನ್ ಬಡ್ಸ್, ಪರ್ಲ್ಸ್, ಸಮೃದ್ದಿ ಜೀವನ, ವ್ಹಿತ್ರಿ, ಗುರುಟೀಕ್ ಹಿಗೇ ವಿವಿಧ ಕಂಪನಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, ಹರಾಜು ಪ್ರಕ್ರಿಯೆ ನಡೆಸಿ ಗ್ರಾಹಕರಿಗೆ ಹಣ ಪಾವತಿಸಬೇಕು ಎಂದು ನಾವೆಲ್ಲರೂ ಹೋರಾಟ ಮಾಡುವಲ್ಲಿ ಭಾಗವಹಿಸಿ ಯಶಸ್ವಿಗೋಳಿಸಬೇಕೆಂದು ಹೋರಾಟಗಾರ ಶರಣಬಸಪ್ಪ ದಾನಕೈ ವಿನಂತಿಸಿದ್ದಾರೆ. ಸರ್ಕಾರದ ಹಣವನ್ನು ಕೇಳುತ್ತಿಲ್ಲ. ನಮ್ಮ ಹಣವನ್ನು ನಮ್ಮ ಹಕ್ಕಿನಿಂದ ಕೇಳುತ್ತಿದ್ದೇವೆ ನಿಗದಿತ ಸಮಯದಲ್ಲಿ ನಮ್ಮ ಹಣವನ್ನು ಪಾವತಿಸಲಾರದೆ ಇರುವದರಿಂದ ರಾಜ್ಯಾಧ್ಯಂತ ಉಗ್ರ ಹೋರಾಟ ಟಿ.ಪಿ.ಜೆ.ಪಿ ಸಂಘಟನೆಯಿಂದ ಪ್ರತಿಜಿಲ್ಲೆಯಲ್ಲಿ ಆಯಾ ತಾಲೂಕ, ಜಿಲ್ಲಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು,ಎಜೆಂಟರು, ಗ್ರಾಹಕರು ಹಾಗೂ ವಿವಿಧ ಸಂಘಟನೆಗಳಿಂದ ಧರಣಿ ಸತ್ಯಾಗ್ರಹ ಸೆ.೧ ರಿಂದ ಸಾಗಿಬಂದಿದೆ ನಿರಂತರವಾಗಿ ಜರುಗುವ ಅನಿರ್ದಿಷ್ಟ ಸತ್ಯಾಗ್ರಹದಲ್ಲಿ ಮತ್ತು ಇಂದು ಸಹ ಭಾಗವಹಿಸಿ ಯಶಸ್ವಿಗೊಳಿಸಿರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆತಂದು, ಸಾರ್ವಜನಿಕರಿಗೆ ವಂಚನೆ ಮಾಡಿದ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಹಾಗೂ ಕಂಪನಿಗಳಿಗೆ ಹಣ ಸಂದಾಯ ಮಾಡಿದ ಜನರಿಗೆ ತಕ್ಷಣ ಮರು ಪಾವತಿಸಬೇಕೆಂದು ಆಗ್ರಹಿಸಿ ಠಗಿ ಪೀಡಿತ ಜಮಾಕರ್ತ ಪರಿವಾರ ಸಂಘಟನೆಯಿಂದ ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಆಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಜಯ ಸಾಧಿಸುವಲ್ಲಿ ಮುಂದಾಗೋಣ ಬನ್ನಿರಿ, ಇತರರನ್ನು ಕರೆತನ್ನಿರಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.