ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೊಲ್ಲಾಳಪ್ಪ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಮಮ್ತಾಜ್ ಬೇಗಂ ಅವರು ಅವಿರೋಧವಾಗಿ ಆಯ್ಕೆಯಾದರು ಒಟ್ಟು 12 ಸದಸ್ಯರಿರುವ ಈ ಪಂಚಾಯತಿಯಲ್ಲಿ ಬೆಂಬಲಿತ ಅಧ್ಯಕ್ಷ ಸ್ಥಾನಕ್ಕೆ ಗೊಲ್ಲಾಳಪ್ಪ ಮ್ಯಾಗೇರಿ ಆಯ್ಕೆಯಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಮುಮ್ತಾಜ್ ಬೇಗಂ 2 ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಅವಿರೋಧವಾಗಿ ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿಯಾದ ಯಡ್ರಾಮಿ ತಾಲೂಕ ದಂಡಾಧಿಕಾರಿ ಶಶಿಕಲಾ ಪಾದಗಟ್ಟಿ ಅವರು ಅಧಿಕೃತವಾಗಿ ಘೋಷಿಸಿದರು ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಎಸ್ ಪಾಟೀಲ್ ನರಬೋಳ ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಲ್ಲಣ್ಣ ಗೌಡ ಕೊಡಮನಹಳ್ಳಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹೊನ್ನಪ್ಪ ಸಾಹುಕಾರ ಕೊಡಮನಹಳ್ಳಿ ಶರಣು ಪೂಜಾರಿ ಅಂಗಡಿ ಮೈದಾನ ಪಟೇಲ್ ಅಂಕಲಗಿ ದವಲಸಾಬ್ ಹೋಟೆಲ್ ರಾಮನಗೌಡ ಕೊಂಡ ಸಗಿರ್ ಪಟೇಲ್ ಸೈದಾಪುರ್ ಭೀಮರಾಯ ಮಾಸ್ಟರ್ ಭಜನಿ ಗ್ರಾಮ ಪಂಚಾಯತ್ ಪಿ ಡಿ ಓ ದಯಾನಂದ್ ಜಾದವ್ ಬಿಲ್ ಕಲೆಕ್ಟರ್ ಬಸನಗೌಡ ಮರಡಗಿ ಹಾಗೂ ಯಡ್ರಾಮಿ ತಾಲೂಕ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಗೌರವ ಅಧ್ಯಕ್ಷ ಆನಂದಕುಮಾರ್ ಬಡಿಗೇರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.