ಕೊಪ್ಪಳ :ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಕೊಪ್ಪಳ, ಜಿಲ್ಲಾ ಏಡ್ಸ್ ಪ್ರೀವೆನ್ಸ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗೆಟ್ಟುವಿಕೆ ನಿಯಂತ್ರಣ ಘಟಕ ಕೊಪ್ಪಳ ಹಾಗೂ ಜಿಲ್ಲಾ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಯುವಜನೋತ್ಸವ -2024 ಅಂಗವಾಗಿ ಎಚ್ ಐ ವಿ ಮತ್ತು ಏಡ್ಸ್ ಜಾಗೃತಿಗಾಗಿ ಅಂತರ್ ಪದವಿ ಕಾಲೇಜಿಗಳ ಕಬ್ಬಡ್ಡಿ ಪಂದ್ಯಾವಳಿಯನ್ನು ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಹಮ್ಮಿಕೊಳ್ಳಲಾಗಿತ್ತು.
ಮಹಿಳೆಯರ ಕಬಡ್ಡಿ ಕ್ರೀಡಾಕೂಟದಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ “ಎ” ಮತ್ತು “ಬಿ” ತಂಡ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನುಗಳಿಸಿ ಪ್ರಶಸ್ತಿ ಮತ್ತು ಪಾರಿತೋಷಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಬ್ಬಡಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯರ “ಎ” ತಂಡ.
- ಜ್ಯೋತಿ (ಕ್ಯಾಪ್ಟನ್ )
- ಷಣ್ಮುಖ ಎಚ್
- ಅಕ್ಷತಾ ಪಿ
- ಮಂಜುಳಾ ಎಚ್
- ನೇತ್ರಾವತಿ ಎನ್
- ಸುಕನ್ಯಾ
- ದುರಗಮ್ಮ
- ಗೌರಮ್ಮ
- ಭೂಮಿಕಾ
ಕಬ್ಬಡಿಯಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿಯರ “ಬಿ” ತಂಡ.
- ರಾಧಿಕಾ ಎಚ್ (ಕ್ಯಾಪ್ಟನ್ )
- ಪವಿತ್ರಾ
- ಅಂಬಿಕಾ
- ಮೀನಾಕ್ಷಿ
- ಹುಲಿಗೆಮ್ಮ
- ಉಮಾ ಡಿ. ಕೆ
- ಮೇಘಾ
- ಅನ್ನಪೂರ್ಣ
- ಬಸಮ್ಮ
ಈ ಎಲ್ಲಾ ವಿದ್ಯಾರ್ಥಿನಿಯರ ಸಾಧನೆಯನ್ನು ಮೆಚ್ಚಿ ಕಾಲೇಜಿನ ಪ್ರಾoಶುಪಾಲರಾದ ಡಾ. ಗಣಪತಿ ಕೆ ಲಮಾಣಿ,ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪ್ರದೀಪ್ ಕುಮಾರ್ ಯು, ಶ್ರೀ ಮತಿ ನಾಗರತ್ನ ತಮ್ಮಿನಾಳ , ಶ್ರೀ ವಿಠೋಬ ಎಸ್ ,ಡಾ. ಗವಿಸಿದ್ದಪ್ಪ ಮುತ್ತಾಳ,ಡಾ. ಹುಲಿಗೆಮ್ಮ, ಡಾ. ನರಸಿಂಹ, ಡಾ. ಅಶೋಕ ಕುಮಾರ್,ಹನುಮಪ್ಪ ಹಾಗೂ ಕಾಲೇಜಿನ ಎಲ್ಲಾ ಭೋಧಕ ಭೋದಕೇತರ ಸಿಬ್ಬಂದಿಗಳು ಹಾಗೂ ಅತಿಥಿ ಉಪನ್ಯಾಸಕರು ಅಭಿನಂದನೆಗಳನ್ನು ಸಲ್ಲಿಸಿ ವಿದ್ಯಾರ್ಥಿನಿಯರ ಸಾಧನೆಗೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.