ಮ
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಡಗೇರಾ ತಾಲೂಕು ಅಧ್ಯಕ್ಷರಾದ ವಿದ್ಯಾಧರ ಬಿ. ಜಾಕಾರವರ ವತಿಯಿಂದ ವಡಗೇರಾ ತಾಲೂಕಿನಲ್ಲಿ ಬರುವಂತಹ ಕುರುಕುಂದಾ ಎಂಬ ಗ್ರಾಮದಲ್ಲಿನ ರೈತರ ಸಮಸ್ಯೆಗಳನ್ನು ಮೇಲಾಧಿಕಾರಿಗಳಿಗೆ ಹಲವಾರು ಭಾರೀ ತಿಳಿಸಿದರು ಕೂಡಾ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಯಾವುದೇ ತರಹದ ಕ್ರಮಗಳನ್ನು ಕೈಗೊಂಡಿಲ್ಲ.
ಕುರಕುಂದಾ ಗ್ರಾಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಒ ರವರುಗಳು ನಮ್ಮ ಸಮಸ್ಯೆಗಳನ್ನು ಚಪ್ಪಲಿಗಿಂತ ಕಾಲ ಕಸದಂತೆ ಕಡೆಗಣಿಸುತ್ತಿದ್ದಾರೆ ಇದೇ ಕಾರಣಕ್ಕಾಗಿ ನಮ್ಮ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನಾ ವತಿಯಿಂದ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ರೈತ ವಿದ್ಯಾಧರ ಬೀ ಜಾಕ ವಡಗೇರಾ ತಾಲೂಕು ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ :ಶಿವರಾಜ ಸಾಹುಕಾರ್, ವಡಗೇರಾ