ಸತ್ಯ, ಶಾಂತಿ, ಅಹಿಂಸೆಗಳೆಂಬ
ಅಸ್ತ್ರ ಗಳನು ಬೋಧಿಸಿ,ಪಾಲಿಸಿದ ಗಾಂಧೀ,
ನ್ಯಾಯ ನೀತಿ, ಸಮಾನತೆಗಾಗಿ
ಅಹೋರಾತ್ರಿ ದುಡಿದು ಗಾಂಧೀ
ಗುಲಾಮಗಿರಿಯ ದಾಸ್ಯದಿಂದ
ಪಾರುಮಾಡಲು ಪ್ರಾಣವನ್ನೇ
ತ್ಯಾಗ ಮಾಡಿದ ಗಾಂಧೀ,
ಮತ್ತೆ ಬಂದಿದೆ ನಿನ್ನ ಜಯಂತಿ,
ಪ್ರತಿ ವರುಷವೂ ಬರುವಂತೆ?!
ಗಾಂಧೀ ನಮಗೆ ನೀ ಮಾತ್ರ ಬೇಕು!, ನಿನ್ನ ತತ್ವ, ಸಿದ್ಧಾಂತ,
ಆದರ್ಶಗಳಲ್ಲ,
ಅಕ್ಟೋಬರ್ ಬಂತೆಂದರೆ ಸಾಕು
ಹರಿದಾಡುತ್ತವೆ ನಮ್ಮವರ ಬಾಯಲ್ಲಿ,ನಿನ್ನ ತತ್ವ, ಆದರ್ಶಗಳು!, ನಿನ್ನ ಹೆಸರಿನ ಸಮೇತ,ಯಾಕೆಂದರೆ ನೀನಲ್ಲವೇ, ಮಹಾತ್ಮ?!,
ನಿನ್ನ ಆಹಾರ ಉಡುಗೆ, ತೊಡುಗೆ,
ಬಗ್ಗೆ ಏನೇನೋ ಕುಹಕ ಮಾತು,
ನಿನ್ನ ಸರಳ ಜೀವನ ಕಂಡು
ಕರುಬುವವರೇ ಅಧಿಕ,!
ಅಂದ ಹಾಗೆ ನೀ ಕಂಡ ರಾಮರಾಜ್ಯದ ಕನಸು ಇನ್ನೂ
ಕನಸಾಗೇ ಉಳಿದಿದೆ,
ನನಸಾಗುವ ದಿನಗಳು
ದೂರ ಹೋದಂತಿದೆ,
ಇಂಥಾ
ವೇಳೆಯಲಿ ಮತ್ತೇ ಬಂದಿದೆ
ನಿನ್ನ ಜಯಂತಿ!
ನಿನ್ನ ಹೆಸರ ಹೇಳಿ ನಾವು
ಆಚರಿಸುತ್ತಲೇ ಇದ್ದೇವೆ,
ಆಚರಿಸುತ್ತಲೇ ಇದ್ದೇವೆ….
-ಶಿವಪ್ರಸಾದ್ ಹಾದಿಮನಿ,ಕನ್ನಡ ಉಪನ್ಯಾಸಕರು.
ಸ.ಪ್ರ.ದ.ಮಹಿಳಾ ಕಾಲೇಜು -ಕೊಪ್ಪಳ ೫೮೩೨೩೧.