೧. ಪರಿಸ್ಥಿತಿ.(ವಿಪರ್ಯಾಸ).
ಕಾರಿನಲ್ಲಿಯೇ
ಇವರ(ರಾಜಕಾರಣಿಗಳು)
ವಿಹಾರ,
ವಿದೇಶದ್ದೇ ಬೇಕಿವರಿಗೆ
ಆಹಾರ,
ನೀರೇ ನಮ್ಮವರ ಆಹಾರ,
ಆ ನೀರಿಗೂ ತಂದಿರುವರು,
ಸಂಚಕಾರ!.
೨. ದುರಂತ.
ವಿಜ್ಞಾನ ದಿನೆ ದಿನೇ
ಪ್ರಗತಿಯತ್ತ ಸಾಗಿ
ಹೆಮ್ಮೆ ಪಡುವಂತಾದರೂ
ಜ್ಞಾನ ಬತ್ತುತ್ತಾ ಹೋಗುತ್ತಿರೋದು,
ನಮ್ಮೆದುರಿನ ದುರಂತ!.
೩. ಹೆಂಡತಿಯ ಪ್ರಾಬಲ್ಯ.
ಅಂದು ಹೆಂಡತಿಯೊಬ್ಬಳು
ಮನೆಯೊಳಗಿದ್ದರೆ ಕೋಟಿ
ರೂಪಾಯಿ,
ಇಂದು ಹೆಂಡತಿ ಮನೆಯೊಳಗಿದ್ದರೆ ಬಡಪಾಯಿ
ಆಗದಿದ್ದರೂ,ನಿಜವಾದ ಗಂಡ,
ಆಗಲೇ ಬೇಕು ಅಮ್ಮಾವ್ರಗಂಡ !
೪. ಸ್ಟಾರ್.
ಆಗಬೇಕೆಂದಿದ್ದ ತಾನೊಬ್ಬ
ಸಿನಿಮಾ ಸ್ಟಾರ್,
ಹಾಕಲು ಕಲಿತ,
ಗುಟ್ಕಾ,ಸ್ಟಾರ್,
ಆಗಿದೆ ಇಂಥವರ
ಬಾಳೀಗ ಪಾಪರ್!
-ಶಿವಪ್ರಸಾದ್ ಹಾದಿಮನಿ,ಕನ್ನಡ ಉಪನ್ಯಾಸಕರು.
ಸ.ಪ್ರ.ದ.ಮಹಿಳಾ ಕಾಲೇಜು -ಕೊಪ್ಪಳ ೫೮೩೨೩೧.