ಕನ್ನಡ ರಂಗಭೂಮಿಯ ನಟಿಯು
ಅವಮಾನದಿ ಸನ್ಮಾನಕ್ಕೊಳಗಾದ ಮಾತೆಯು
ಮಂಜಮ್ಮ ಜೋಗತಿ ನೃತ್ಯಕ್ಕೆ ಪ್ರಖ್ಯಾತಿಯು
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಹೆಮ್ಮೆಯು
ಹನುಮಂತ ಶೆಟ್ಟಿ ಹಾಗೂ ಜಯಲಕ್ಷ್ಮಿ ದಂಪತಿಗಳ ಉಸಿರಾಗಿ
ಮೂಢನಂಬಿಕೆಗಳ ಬಲೆಗೆ ತುತ್ತಾಗಿ
ಬೆಳೆದರು ಕರುನಾಡಿನ ನೃತ್ಯಗಾರ್ತಿಯಾಗಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ತಲೆಬಾಗಿ
ಜಾನಪದ ವಿಶ್ವವಿದ್ಯಾಲಯಕೆ ಕಥೆಯಾಗಿ
ಎಂಟು ವಿಶ್ವವಿದ್ಯಾಲಯದ ಪಠ್ಯಕ್ರಮವಾಗಿ
ಬಾಳುತಿದ್ದಾರೆ ಸರಳ ಜೀವಿಯಾಗಿ
ಕರುನಾಡಿನ ಮಹಿಳೆಯರಿಗೆ ಮಾದರಿಯಾಗಿ
ಪದ್ಮಶ್ರೀ ಪ್ರಶಸ್ತಿಗೆ ಮುತ್ತಿಟ್ಟ ಮಹಾಮಾತೆಯು
ಮರಿಯಮ್ಮನಹಳ್ಳಿಯಿಂದ ದೆಹಲಿವರೆಗೂ ಪ್ರಸಿದ್ಧಿಯು
ಸಮಸ್ಯೆಗಳ ಸುಳಿಯಲ್ಲಿ ಬೆಳೆದ ತಾವರೆಯು
ಕಷ್ಟದಲ್ಲಿ ಓದಿದರು ಹತ್ತನೆಯ ತರಗತಿಯು
ಕಲೆಗಾರ್ತಿಯ ಜೀವನ ಬಲು ರೋಚಕವು
ಕೈಲಾಗದೆಂದವರಿಗೆ ಆದರ್ಶ ಪ್ರಾಯವು
ಶ್ರೇಷ್ಠ ಕಲಾವಿದೆಗೆ ಅಭಿನಂದಿಸಿದೆ ದೇಶವು
ಸಾಮಾನ್ಯರಾಗಿ ಸಾಧಕರಾದ ಇವರಿಗೆ ನಮಸ್ಕಾರವು
-ಶ್ರೀ ಮುತ್ತು ಯ. ವಡ್ಡರ ಶಿಕ್ಷಕರು, ಬಾಗಲಕೋಟೆ
9845568484