ಕೊಪ್ಪಳ: ವಿದ್ಯಾರ್ಥಿಗಳು ಭ್ರಷ್ಟಚಾರದ ಕುರಿತು ಲೋಕಾಯುಕ್ತಕ್ಕೆ ಮಾಹಿತಿ ನೀಡಬೇಕು. ಭ್ರಷ್ಟಚಾರ ನಿರ್ಮೂಲನೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯ ಪಾತ್ರ ಇದೆ ಎಂದು ಕೊಪ್ಪಳ ಲೋಕಾಯುಕ್ತ ಪ್ರಭಾರ ಡಿ ವೈ ಎಸ್ಪಿ ಚಂದ್ರಪ್ಪ ಇ. ಟಿ ಅವರು ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರ ದಂದು ಕಾಲೇಜು ಮತ್ತು ಕರ್ನಾಟಕ ಲೋಕಾಯುಕ್ತ, ಕೊಪ್ಪಳ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭ್ರಷ್ಟಚಾರ ನಿಗ್ರಹ ಜಾಗೃತಿ ಅರಿವು ಸಪ್ತಾಹ -2024 ರ ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತಾ 1984 ರಲ್ಲಿ ಕರ್ನಾಟಕ ಲೋಕಾಯುಕ್ತ ಪ್ರಾರಂಭ ಆಗಿದೆ. ಇದರ ಮುಖ್ಯ ಕೆಲಸ ಭ್ರಷ್ಟಚಾರವನ್ನು ತಡೆಗಟ್ಟುವುದು, ಎಲ್ಲರು ಸೇರಿ ಭ್ರಷ್ಟಚಾರವನ್ನು ತಡೆಗಟ್ಟಬೇಕು. ಯಾರಾದ್ರೂ ಸರಕಾರಿ ನೌಕರರು ಕೆಲಸ ನಿರ್ವಹಿಸಲು ದುಡ್ಡು ಕೇಳಿದ್ರೆ ನಮಗೆ ಮಾಹಿತಿ ನೀಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಶೈಲಜಾ ಪ್ಯಾಟಿ ಶೆಟ್ಟರ್ ಅವರು ಮಾತನಾಡುತ್ತಾ ಎಲ್ಲಾ ಸರಕಾರಿ ನೌಕರರು ಸಾರ್ವಜನಿಕರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಸಾರ್ವಜನಿಕರ ಹತ್ತಿರ, ರೈತರ ಹತ್ತಿರ ಲಂಚ ತಗೊಳ್ಳಬಾರದು. ಇದರಿಂದ ದೇಶದ ಅಭಿವೃದ್ಧಿ ಗೆ ತೊಡಕು ಉಂಟಾಗುತ್ತದೆ. ಎಲ್ಲಾ ಸಾರ್ವಜನಿಕರ ಸಹಕಾರದಿಂದ ಭ್ರಷ್ಟಾಚಾರವನ್ನು ತಡೆಗಟ್ಟಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ನಾಗರತ್ನ ಮೇಟಿ ಯಾರಾದರೂ ಲಂಚ ಕೇಳಿದ್ರೆ ಲೋಕಾಯುಕ್ತಕ್ಕೆ ಮಾಹಿತಿ ನೀಡಿ ಸರಕಾರಿ ಅಧಿಕಾರಿಗಳು ಆದಾಯ ಮೀರಿ ಅಸ್ತಿ ಮಾಡಿದರೆ ಅಂತವರ ಕುರಿತು ಮಾಹಿತಿ ನೀಡಿ ದೂರು ಕೊಡುವಾಗ ಭಯ ಪಡೆಯಬೇಡಿ ಎಂದು ತಿಳಿಸಿದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗವಿಸಿದ್ದಪ್ಪ ಮುತ್ತಾಳ ಅವರು ಮಾತನಾಡುತ್ತಾ ಕೆಲಸ ಮಾಡುವುದಕ್ಕೆ ಸರಕಾರಿ ನೌಕರರು ದುಡ್ಡು ತಗೊಂಡರೆ ಅದು ಭ್ರಷ್ಟಾಚಾರ ಭಾರತದಲ್ಲಿ ಭ್ರಷ್ಟಾಚಾರ ಎಲ್ಲಾ ಕಡೆ ಇದೆ. ಇದನ್ನು ಎಲ್ಲರೂ ಸೇರಿ ತಡೆಗಟ್ಟಬೇಕು. ಯಾರಾದ್ರೂ ಸರಕಾರಿ ನೌಕರರು ಕರ್ತವ್ಯವನ್ನು ದುರುಪಯೋಗ ಪಡಿಸಿಕೊಂಡರೆ ಅಂತವರ ವಿರುದ್ದ ಲೋಕಾಯುಕ್ತ ಕ್ಕೆ ದೂರ ನೀಡಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು ಮಾತನಾಡುತ್ತ ನಾವು ಭ್ರಷ್ಟಚಾರದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಇದು ಪ್ರಾಚಿನ ಕಾಲದಿಂದಲೂ ಇದೆ. ವಿದ್ಯಾರ್ಥಿಗಳು ಕಾನೂನಗಳ ಬಗ್ಗೆ ತಿಳಿದುಕೊಳ್ಳಬೇಕು. ಅವುಗಳನ್ನು ಪಾಲನೆ ಮಾಡಬೇಕು. ನಾವು ಕಾನೂನುಗಳನ್ನು ಉಲ್ಲಂಘನೆ ಮಾಡಬಾರದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹುಲಿಗೆಮ್ಮ ಬಿ, ಕಾಲೇಜಿನ ಉಪನ್ಯಾಸಕರಾದ ಡಾ. ಪ್ರದೀಪ್ ಕುಮಾರ್, ಡಾ. ನರಸಿಂಹ, ಕಾಲೇಜಿನ ಅತಿಥಿ ಉಪನ್ಯಾಸಕರಾದ ಶಿವ ಪ್ರಸಾದ್ ಹಾದಿಮನಿ, ಡಾ. ಮಂಜಪ್ಪ, ಡಾ ಸೂರಪ್ಪ ಹಾಗೂ ವಿದ್ಯಾರ್ಥಿನಿಯರು ಇದ್ದರು.
ವಿದ್ಯಾರ್ಥಿಗಳ ಜೊತೆ ಭ್ರಷ್ಟಚಾರದ ಕುರಿತು ಸಂವಾದ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಭ್ರಷ್ಟಚಾರ ನಿರ್ಮೂಲನೆ ಕುರಿತು ಪ್ರತಿಜ್ಞಾ ವಿಧಿ ಭೋದಿಸಲಾಯಿತು.
ಕಾರ್ಯಕ್ರಮವನ್ನು ಭವ್ಯ ನಿರೂಪಣೆ ಮಾಡಿದರು. ಕನ್ನಡ ವಿಭಾಗದ ಮುಖ್ಯಸ್ತೆ ಡಾ. ಹುಲಿಗೆಮ್ಮ ಸ್ವಾಗತಿಸಿದರು, ನರಸಿಂಹ ವಂದಿಸಿದರು, ಯಲ್ಲಮ್ಮ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು.