ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ವರದಿಗಾರರೇ, ಸುದ್ದಿಗಳನ್ನು ಓದುಗನಿಗೆ ಬೇಕಾಬಿಟ್ಟಿ ಎಸೆಯಬೇಡಿ; ಸುದ್ದಿ ಸತ್ತರೂ, ಕಾಟ ತಪ್ಪದು..!

ಇತ್ತೀಚೆಗೆ ಒಂದು ಸುದ್ದಿಯನ್ನು ಓದುತ್ತಿದ್ದೆ,
ಒಬ್ಬ ಯುವಕ ದಿಢೀರ್ ಅಂತ ಸಾವಿಗೀಡಾದ ಸುದ್ದಿಯದು; ಏನಾಗಿದ್ದಿರಬಹುದೆಂದು ತಕ್ಷಣ ಕೊಟ್ಟಿರುವ ಲಿಂಕ್ ಒತ್ತಿ ಸುದ್ದಿಯ ಕಡೆಗೆ ಕಣ್ಣಾಡಿಸಿದೆ, ಈಡೀ ಬರಹವನ್ನು ಓದಿದರೂ ಸಾವಿನ ಬಗ್ಗೆ ಸ್ಪಷ್ಟತೆ ಸಿಗಲಿಲ್ಲ, ಅಫ್ ಕೊರ್ಸ್! ಕೆಲವೊಮ್ಮೆ ಬಹಿರಂಗಪಡಿಸಲು ಅಸಾಧ್ಯವಾದಾಗ ಹಾಗೆ ಬರೆಯೋ ರೂಢಿ ಇದೆ, ಆದರೆ ನನಗೆ ಹಾಗೆ ಅನಿಸಲಿಲ್ಲ, ಇಲ್ಲಿ ವರದಿ ವ್ಯಕ್ತಿ ಚಿತ್ರಣವಾಗಿ ಬದಲಾಗಿತ್ತು..! ವರದಿಗೂ – ಸುದ್ದಿ ಮಾಧ್ಯಮದ‌ ಸ್ಟೋರಿಗೂ ಬಹಳಷ್ಟು ವ್ಯತ್ಯಾಸವಿದೆ. ಅದರಲ್ಲೂ ಈಗೀನ ವೆಬ್ ನ್ಯೂಸ್ ಸುದ್ದಿಗಳೆಡೆ ಗಮನ ಹರಿಸಿದರೆ ಯಾವುದು ಸುದ್ದಿ, ಏನಿದು ಘಟನೆ ಅಂತ ತಿಳಿಯಬೇಕಾದರೆ ಇನ್ನೊಂದು ಸುದ್ದಿಗಾಗಿ ತಡಕಾಡಬೇಕು..! ಇತ್ತೀಚಿನ ದಿನಗಳಲ್ಲಿ ವೆಬ್ ನ್ಯೂಸ್ ಗಳಿಗೆ ಒಳ್ಳೆಯ ವೇದಿಕೆ ಸಿಗುತ್ತಿದ್ದರೂ, ಕಳಪೆ ವರದಿಯೇ ಹೆಚ್ಚಾಗುತ್ತಿರುವುದು ನಿಜಕ್ಕೂ ಚಿಂತಿಸಬೇಕಾದ ಸಂಗತಿ.
ಒಂದು ಸುದ್ದಿ ಪ್ರಕಟವಾಗಬೇಕಾದಾಗ, ನಾವು ಮುಖ್ಯವಾಗಿ ಗಮನಿಸಬೇಕಾದ ವಿಷಯಗಳು ಯಾವುವು ಎಂಬುದು ಇತ್ತೀಚಿನ ಇನ್ಫ್ಲೂಯೆನ್ಶಲ್ ಆನ್ ಲೈನ್ ವರದಿಗಾರರಿಗೆ ಅಪ್ರಮುಖವಾಗಿದೆ. ಇದೆಲ್ಲವೂ ಸಾಮಾನ್ಯ ಜ್ಞಾನ ಹಾಗೂ ಅಕಾಡೆಮಿಕ್ ಜ್ಞಾನದ ಕೊರತೆಯೇ ಸರಿ. ಅಧುನಿಕ ಶಿಕ್ಷಣ ಬಹಳಷ್ಟು ಮುಂದುವರೆಯುತ್ತಿರುವ ಕಾಲವಿದು. ತರಗತಿಗಳಲ್ಲಿ ಒಂದೆಡೆ ಕುಳಿತು ಕಲಿಯುವ ಕಾಲ ಮೆಲ್ಲಗೆ ಸರಿದು ಹೋಗುತ್ತಿವೆ ಅಂದರೆ ಅತಿಶಯೋಕ್ತಿಯೇನಲ್ಲ..! ತಂತ್ರಜ್ಞಾನ ಯಾವಾಗ ನಮ್ಮನ್ನು ನಿಯಂತ್ರಿಸಲು ತೊಡಗಿತೋ ಅಲ್ಲಿಂದ ಚಿತ್ರಣಗಳು ಬದಲಾವಣೆಯ ಹಾದಿ ಹಿಡಿಯಿತು. ಈಗ ಏನಿದ್ದರೂ ಆಂಡ್ರಾಯ್ಡ್ ಗಳ ಸಮಯ ಬಿಡಿ. ಕೈಯಲ್ಲಿ ಫೋನಿದ್ದರೆ ಸಾಕು ಎಲ್ಲವೂ ನಮ್ಮೆಡೆಗೆ ಸರಿದು ಬರುತ್ತವೆ..

ಹಾಗಾದರೆ ಒಂದು ಪತ್ರಿಕೆಯ ವರದಿ ಹೇಗಿರಬೇಕು?
ನಾವು ಅನುಸರಿಸಬೇಕಾದ ಸರಳ ಸೂತ್ರಗಳು ಯಾವುವು?

ಇಂತಹ ಮಾಹಿತಿಗಳನ್ನು ಹಿಂದೆಯೂ ಅದೆಷ್ಟೋ ಸಲ ನೀವು ಓದಿರಬಹುದು.! ಭಾಷಾ ಜ್ಞಾನ, ಅಕ್ಷರಗಳಲ್ಲಿ ಹಿಡಿತ, ಪ್ರಚಲಿತ ವಿದ್ಯಮಾನಗಳ ತಿಳುವಳಿಕೆ, ಮೈಯೆಲ್ಲಾ ಕಣ್ಣಾಗಿರಬೇಕು, ಅಪ್ಡೇಟ್ ಆಗಿರಬೇಕು, ಎದೆಗಾರಿಕೆ ಬೇಕು ಹೀಗೆಲ್ಲಾ ಹೇಳುವುದನ್ನು ಕೇಳಿರಬಹುದು. ಇದೆಲ್ಲದರ ಜೊತೆಗೆ ಮುಖ್ಯವಾಗಿ ಬೇಕಾದ ಅರ್ಹತೆಗಳನ್ನು ಮನಗಾಣಬೇಕಿದೆ.
ಪ್ರಸ್ತುತದ ಅನಿವಾರ್ಯಕ್ಕಾಗಿ, ನನಗನಿಸಿದಂತೆ ನಿಮ್ಮ ಮುಂದಿಡುತ್ತಿದ್ದೇನೆ. ಮಾಧ್ಯಮದಲ್ಲಿ ಕೆಲಸ ಮಾಡಲು‌ ಇಚ್ಛಿಸುವವರಿಗೆ ಸಹಾಯವಾಗಬಹುದು ಎಂಬುದು ನನ್ನ ನಂಬಿಕೆ..!

ಸುದ್ದಿಗೊಂದು ಐದು W ಹಾಗೂ ಒಂದು H ಇರಲಿ

ಸುದ್ದಿ ಸಂಗ್ರಹಿಸುವಾಗ ಐದು ‘W’ ಮತ್ತು ಒಂದು ‘H’, ಇವುಗಳನ್ನು ಸದಾ ನೆನಪಲಿಟ್ಟುಕೊಳ್ಳಬೇಕು.
when, why, who,whom, where and how. ಯಾವುದೇ ಘಟನೆ, ಸಭೆ, ಸಮಾರಂಭ ನಡೆಯಲಿ ಯಾವಾಗ? ಯಾಕೆ? ಯಾರು ಮತ್ತು ಯಾರಿಂದ, ಎಲ್ಲಿ? ಹಾಗೂ ಹೇಗೆ ಎಂಬುದಕ್ಕೆ ಮೊದಲು ಉತ್ತರ ಕಂಡುಕೊಳ್ಳಬೇಕು.
Crime ಹಾಗೂ ವಿಶೇಷ ವರದಿ ಮಾಡುವಾಗ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಅಧಿಕೃತರ ಹೇಳಿಕೆಗಳನ್ನು ಪಡೆದುಕೊಳ್ಳಬೇಕು.
ಮಾಧ್ಯಮಗಳಲ್ಲಿ ವರದಿಯಾಗುವ ಸುದ್ದಿಗಳು F.I.R ನಷ್ಟೆ ಮುಖ್ಯ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಒಬ್ಬ ವರದಿಗಾರ ಯಾವಾಗಲೂ ತನಿಖೆಯಲ್ಲಿ ತೊಡಗಿಕೊಂಡ ಪತ್ತೆದಾರನಾಗಿರಬೇಕು.

ವರದಿಗಳಲ್ಲಿ ಗೊಂದಲ ಬೇಡ

ನೀವು ಯಾವದೇ ವರದಿ ಮಾಡುತ್ತಿದ್ದರೂ, ಅದು ಸ್ಪಷ್ಟ ಹಾಗೂ ನಿಖರವಾಗಿರಬೇಕು. ಸುದ್ದಿಗಳು ಓದುಗನಿಗೆ ಯಾವುದೇ ಗೊಂದಲಕ್ಕೆ ಎಡೆಮಾಡಿಕೊಂಡುವಂತಿರಬಾರದು. ಸುದ್ದಿ ಓದಿದಾಗ ಘಟನೆಯ ಬಗ್ಗೆ ಸ್ಪಷ್ಟ ಚಿತ್ರಣ ಕೊಡುವಂತಿರಬೇಕು.

ಅಕ್ಷರ ಬಳಕೆಯಲ್ಲಿ ಎಚ್ಚರವಿರಲಿ

ನೀವು ಮಾಡುವಂತಹ ಸುದ್ದಿಗಳು ದೊಡ್ಡದಾಗಿರಲಿ ಅಥ್ವಾ ಚೊಕ್ಕದಿರಲಿ ಆದರೆ ಪದಗಳ ಬಳಕೆಯಲ್ಲಿ ಎಚ್ಚರವಹಿಸುವುದು ಅಗತ್ಯ. ಅಕ್ಷರಗಳ ಕೂಡೂವಿಕೆಯಲ್ಲಿ ಪ್ರಮಾದವಾಗಬಾರದು. ಸುದ್ದಿಗಳ ಪದ ಬಳಕೆಯಲ್ಲಿ ಬೇರೆಯೇ ಅರ್ಥಕೊಡುವಂತಾಗಬಾರದು.

ಸಂಭೋದನೆ ಕಡೆ ಗಮನವಿರಲಿ

ವರದಿ ತಯಾರಿಸುವಾಗ ಸಂಬೋಧನೆಯೆಡೆಗೆ ಗಮನ ವಿರಬೇಕು. ಬಹುವಚನ ಮತ್ತು ಏಕವಚನಗಳು ಹಾಗೆಯೇ ಇತರ ಗೌರವಾರ್ಥ ಪದವಿಗಳಿದ್ದರೆ(ಡಾ. ಪ್ರೊ. ಶ್ರೀ.) ಸಂದರ್ಭಕ್ಕಾನುಸಾರವಾಗಿ ಬಳಸಬೇಕು. ಇಲ್ಲವೆಂದರೆ ಪ್ರಕಟವಾದಾಗ ಗಣ್ಯ ವ್ಯಕ್ತಿಗಳು ಮುಜುಗರಕ್ಕೀಡಾದರೆ, ಸಂಪಾದಕರು ಉತ್ತರಕೊಡುವಂತಾಗಬಹುದು.

ವಾಕ್ಯಗಳ ರಚನೆಯೆಡೆಗೆ ಗಮನ ಅವಶ್ಯ

ಸುದ್ದಿಗಳಲ್ಲಿ ವಾಕ್ಯಗಳ ಬಗ್ಗೆ ಹೆಚ್ಚಿನ ಗಮನಕೊಡಬೇಕಾದುದು ಅವಶ್ಯ. ವಾಕ್ಯಗಳ ರಚನೆಯಲ್ಲಿ ಶಬ್ದಗಳ ಪುನಾರಾವರ್ತನೆವಾಗದಿರಲಿ. ಅಂತೆಯೇ ವಾಕ್ಯಗಳು ದೀರ್ಘವಾಗಿರದೆ ಚುಟುಕಾಗಿರಲಿ. ಓದುಗನಿಗೆ ಸುದ್ದಿ ನೇರ ತಲುಪುವಂತಿದ್ದರೆ ಚೆನ್ನ.

ವ್ಯಕ್ತಿ ಚಿತ್ರಣದ ರೀತಿ

ಪತ್ರಿಕೆಗಳಲ್ಲಿ ವ್ಯಕ್ತಿ ಚಿತ್ರಣಗಳನ್ನು ನೀವು ನೋಡಿರುತ್ತೀರಿ, ಇಂತಹ ವರದಿಗಳಿದ್ದರೆ ಸಮಗ್ರವಾಗಿರಬೇಕು. ಅವರ ಸಾಧನೆಯ ಜೊತೆಗೆ ಹುಟ್ಟು ಬಾಲ್ಯಕಾಲ, ಕಲಿಕೆ, ಆಸಕ್ತಿದಾಯಕ ವಿಷಯಗಳು ಹೀಗೆ ಎಲ್ಲವೂ ಕೂಡಿರಬೇಕು.
ಹಾಗಂತ ಇಡೀ ಸ್ಟೋರಿ ಪೂರ್ತಿ ವ್ಯಕ್ತಿ ಪೂಜೆ ಬೇಡ. ಅವರ ವ್ಯಕ್ತಿತ್ವ ಅನಾವರಣದಲ್ಲಿ ಹೊಗಳುವಿಕೆ ಹತ್ತಿರ ಸುಳಿಯದಿರಲಿ. ನೈಜ್ಯ ಬರಹಕ್ಕೆ ಒತ್ತುಕೊಡಿ.

ವರದಿಗಳು ಹೇಗಿರಬೇಕು?!

ಎಲ್ಲವೂ ಗಮನಿಸಿದ ನಂತರದ ಸುದ್ದಿಗಳು ಬರೆಯುವಾಗ ಕಾರ್ಯಕ್ರಮ ನಿರೂಪಣೆಯಲ್ಲಿರುವಂತೆ ಜೋಡಿಸಿಟ್ಟುಕೊಳ್ಳಬೇಕು; ಸ್ವಾಗತ ಮತ್ತು ಧನ್ಯವಾದಗಳ ನಡುವಿನ ಎಲ್ಲವೂ ಕ್ರಮ ಪ್ರಕಾರವಾಗಿರುವಂತೆಯೇ ಸುದ್ದಿಗಳು ಕೂಡಾ ಅನುಕ್ರಮವಾಗಿಬೇಕು.‌ ಮೊದಲು ಮತ್ತು ‌ಕೊನೆ ಬಗ್ಗೆ ಎಚ್ಚರವಿರಬೇಕು. ಮೊದಲಿಗೆ ಸಂಕ್ಷಿಪ್ತವಾಗಿ ನಂತರ ವಿವರವಾಗಿ ತಿಳಿಸಬೇಕು.

ಪದಗಳು ಸರಳವಾಗಿರಲಿ

ಸುದ್ದಿಗಳನ್ನು ಬರೆಯುವಾಗ ಪದಗಳ ಕಡೆಗೂ ಗಮನಕೊಡುವುದು ಅವಶ್ಯ‌. ವಾಕ್ಯಗಳಲ್ಲಿ ಬಳಸುವ ಪದಗಳು ಕ್ಲಿಷ್ಟಕರವಾಗಿರದೆ, ಸರಳವಾಗಿರಬೇಕು. ಓದುಗರಿಗೆ ತಕ್ಷಣ ಅರ್ಥವಾಗುವಂತಿರಬೇಕು. ಆಡುಭಾಷೆ ಪದಗಳನ್ನು ಬಳಕೆ ಮಾಡಿದ್ದರೆ ಅಕ್ಷರಗಳಲ್ಲಿ‌ ಪ್ರಮಾದ ಆಗದಂತೆ ನೋಡಿಕೊಳ್ಳಬೇಕು.

ವೈಜ್ಞಾನಿಕ- ತರ್ಜುಮೆ ವರದಿಗಳಿದ್ದಾಗ ಸೂಕ್ಷ್ಮತೆಯಿರಲಿ

ಸುದ್ದಿಗಳಲ್ಲಿ ಹಲವು ವಿಧಗಳಿವೆ. ರಾಜಕೀಯ ಸುದ್ದಿ, ಅಪರಾಧ ಸುದ್ದಿ, ಆರೋಗ್ಯ ಸುದ್ದಿಗಳು ಹೀಗೆ ವಿಭಾಗಿಸುವಾಗ ನಾವು ಎಚ್ಚರವಹಿಸುವುದು ಅಗತ್ಯ. ಒಂದೇ ತರದ ಸುದ್ದಿಗಳಿಗಿಂತ ಬೇರೆ ತರಹದ ಸುದ್ದಿಗಳನ್ನು ಬರೆಯಬೇಕಾದ ಅದು ಯಾವ ಕ್ಷೇತ್ರಕ್ಕೆ ಸೇರ್ಪಡುವಂತದ್ದು ಅನ್ನುವುದನ್ನು ನಾವು‌ ಮೊದಲು ಅರಿಯಬೇಕು. ಈ ಸುದ್ದಿಗೆ ಅದೆಷ್ಟು ಮಹತ್ವವಿದೆ ಎಂದರಿತು ಎಡಿಟಿಂಗ್ ವಿಭಾಗಕ್ಕೆ ಕಳಿಸಬೇಕು. ಹಾಗೆಯೇ ಇಂತಹ ವರದಿಗಳಲ್ಲಿ ಯಾವುದೇ ಮೆಡಿಕಲ್, ವೈಜ್ಞಾನಿಕ, ಎಲೆಕ್ಟ್ರಾನಿಕ್ ಅಥವಾ ಇನ್ನಾವುದೇ ಹೊಸ ಪದಗಳ ಬಳಕೆಯಾದಾಗ ಭಾಷಾಂತರದಲ್ಲಿ ಹೆಚ್ಚಿನ ಗಮನಕೊಡಬೇಕು.

ನೀವೊಬ್ಬರು ವರದಿಗಾರ – ಪತ್ರಕರ್ತ ಅಂತ ಅನಿಸಿಕೊಳ್ಳಬೇಕಾದರೆ, ಕನಿಷ್ಟ ಇವಿಷ್ಟು ಅರ್ಹತೆಗಳಾದರೂ ನಿಮ್ಮಲ್ಲಿ ಇರಲಿ‌‌. ದಯವಿಟ್ಟು ಸುದ್ದಿಗಳನ್ನ ಬೇಕಾಬಿಟ್ಟಿ ಓದುಗನಿಗೆ ಎಸೆಯಬೇಡಿ. ಇವತ್ತಿನ ಸುದ್ದಿಗಳು ನಾಳೆಗೆ ಸತ್ತರೂ, ಓದುಗನಿಗೆ ಅದು‌ ಎಂದಿಗೂ ಮುಗಿಯದ ಕಾಟವೇ..!

-ಶಿವಪ್ರಸಾದ್ ಮಣಿಯೂರು, ಬರಹಗಾರರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ