
ಕೊಪ್ಪಳ : ಮಾನಸಿಕ ಒತ್ತಡಗಳನ್ನು ಕಳೆದು ಆನಂದ ನೀಡುವ ಶಕ್ತಿ ಕಲೆ ಸಂಗೀತಕ್ಕೆ ರಂಗಭೂಮಿಗೆ ಇದೆ ಎಂದು ಹಿರಿಯ ಸಾಹಿತಿ ಡಾ.ವಿ.ಬಿ. ರಡ್ಡೇರ್ ಅಭಿಪ್ರಾಯಪಟ್ಟರು.
ಅವರು ಕೊಪ್ಪಳದ ಸಾಹಿತ್ಯ ಭವನದಲ್ಲಿ ಜರುಗಿದ ಹಿರಿಯ ರಂಗಕಲಾವಿದೆ ಹೆಚ್.ಬಿ.ಸರೋಜಮ್ಮ ಅವರ ಸಹಾಯಾರ್ಥ ಜರುಗಿದ ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ನಾಟಕ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ
ಭಕ್ತಿಯಿಂದ ಎಲ್ಲವನ್ನೂ ಸಾಧಿಸಬಹುದು ಎಂದು ತೋರಿದವರು ಶಿವಶರಣೆ ಸಾದ್ವಿ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮ ಅವಿಭಕ್ತ ಕುಟುಂಬದಲ್ಲಿ ಬಂದೊದಗುವ ಎಲ್ಲಾ ಸಮಸ್ಯೆಗಳಿಗೆ ತನ್ನ ನಿಸ್ವಾರ್ಥ ಕಾಯಕದಿಂದ ಪರಿಶುದ್ಧ ಭಕ್ತಿಯಿಂದ ಶ್ರೀಶೈಲ ಚೆನ್ನ ಮಲ್ಲಿಕಾರ್ಜುನನ ಸ್ಮರಿಸುತ್ತಾ ಮುಕ್ತಿಪಡೆದಾಕೆ ಅಂಥ ಸೊಸೆ ಎಲ್ಲರ ಮನೆಗೂ ಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್ ಕೋರ್ ಕಮಿಟಿ ಸದಸ್ಯರೂ ಸಮಾಜ ಸೇವಕ ಸಿ.ವಿ.ಚಂದ್ರಶೇಖರ್ ಅವರು ಮಾತನಾಡಿ ರಂಗಭೂಮಿ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹೆಚ್.ಬಿ.ಸರೋಜಮ್ಮ ಅವರ ಸಾಧನೆ ದೊಡ್ಡದಿದೆ. ಅವರ ಸೇವೆ ರಂಗಭೂಮಿಗೆ ಮತ್ತಷ್ಟು ದೊರೆಯಲ್ಲಿ ಕೊಪ್ಪಳದ ರಂಗಾಸಕ್ತರ ಹಾರೈಕೆ ಅವರ ಮೇಲಿರಲಿ ಎಂದರು.
ಹಿರಿಯ ಸಾಹಿತಿಗಳಾದ ಎಚ್.ಎಸ್. ಪಾಟೀಲ್ ಅವರು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿರೂಪಾಕ್ಷಪ್ಪ ನವೋದಯ, ಎಸ್.ಬಿ ನಾಗರಹಳ್ಳಿ ವಕೀಲರು, ಲಕ್ಷ್ಮಿದೇವಿ ಚಂದ್ರಶೇಖರ, ಟಿ.ಎಂ. ಭೂಸನೂರು ಮಠ, ಆರ್.ಬಿ ಪಾನಗಂಟಿ ವಕೀಲರು,ವಿರುಪಾಕ್ಷ ರೆಡ್ಡಿ ಹ್ಯಾಟಿ, ಎ.ಎಂ.ಮದರಿ, ಹೇಮರೆಡ್ಡಿ ಬಿಸರಳ್ಳಿ, ಯಮನೂರಪ್ಪ ಹಾದಿಮನಿ, ಕುಮಾರ ಮಜ್ಜಿಗಿ, ಶಂಕರಗೌಡ ಹಿರೇಗೌಡ್ರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಉಪನ್ಯಾಸಕ ಡಾ.ಮಹಾಂತೇಶ್ ನೆಲಾಗಣಿ ನಿರೂಪಿಸಿ, ಪ್ರದೀಪ್ ಕುಮಾರ್ ಹೆಚ್ ಸ್ವಾಗತಿಸಿದರು.
ಶಿವಪ್ರಸಾದ್ ಹಾದಿಮನಿ ವಂದಿಸಿದರು.
